ಮತ್ತೆ ಬಯಲಾಯ್ತು ಪಾಕಿಸ್ತಾನದ ಮುಖ, ಯೋಧ ಔರಂಗಜೇಬ್ ಹತ್ಯೆ ಹಿಂದಿದೆಯಂತೆ ಈ ರಾಷ್ಟ್ರದ ಕೈವಾಡ!

ಶ್ರೀನಗರ: ಕಳೆದ ಒಂದು ತಿಂಗಳಿನಿಂದ ಜಮ್ಮು-ಕಾಶ್ಮೀರದಲ್ಲಿ ಭಾರತ ಕದನ ವಿರಾಮ ಘೋಷಿಸಿ, ಯಾವುದೇ ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಳ್ಳುವುದಿಲ್ಲ ಎಂದು ಘೋಷಿಸಿದ್ದನ್ನೇ ದುರುಪಯೋಗಪಡಿಸಿಕೊಂಡ ಪಾಕಿಸ್ತಾನ ಗಡಿಯಲ್ಲಿ ಉಗ್ರರು, ಸೈನಿಕರನ್ನು ಛೂ ಬಿಟ್ಟಿತ್ತು. ಪರಿಣಾಮ ನಮ್ಮ ದೇಶದ ಯೋಧರು ಹಾಗೂ ಸಾರ್ವಜನಿಕರು ಮೃತಪಟ್ಟಿದ್ದರು.
ಇದರ ನಡುವೆಯೇ ಇತ್ತೀಚೆಗೆ ಕಾಶ್ಮೀರದ ಯೋಧ ಔರಂಗಜೇಬ್ ಎಂಬುವವರನ್ನು ಅಪಹರಿಸಿದ್ದ ಉಗ್ರರು ಹತ್ಯೆ ಮಾಡಿದ್ದರು. ಈ ಕುರಿತು ಸ್ಫೋಟಕ ಮಾಹಿತಿಯೊಂದು ಬಹಿರಂಗವಾಗಿದ್ದು, ಔರಂಗಜೇಬ್ ಹತ್ಯೆಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಭಾರತೀಯ ಗುಪ್ತಚರ ಇಲಾಖೆ ತಿಳಿಸಿದೆ.
ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್ಐ, ತಾನು ಸಾಕುತ್ತಿರುವ ಹಿಜ್ಬುಲ್ ಮುಜಾಹಿದ್ದೀನ್, ಲಷ್ಕರೆ ತಯ್ಬಾ ಹಾಗೂ ಜೈಷೆ ಮೊಹಮ್ಮದ್ ಸಂಘಟನೆಗಳ ಮೂಲಕ ಯೋಧ ಔರಂಗಜೇಬ್ ಅವರನ್ನು ಅಪಹರಿಸಿ, ಹತ್ಯೆಮಾಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಅಲ್ಲದೆ ಔರಂಗಜೇಬ್ ಹತ್ಯೆಯ ಬಳಿಕ ಪಾಕಿಸ್ತಾನ ಜಮ್ಮು-ಕಾಶ್ಮೀರದ ಮೇಲೆ ಹದ್ದಿನ ಕಣ್ಣಿಟ್ಟಿದೆ. ಕಣಿವೆ ರಾಜ್ಯದಲ್ಲಿ ನಡೆಯವು ಪ್ರತಿಯೊಂದು ಚಟುವಟಿಕೆ, ಯೋಧನ ಹತ್ಯೆಗೆ ಭಾರತ ಪ್ರತಿಯಾಗಿ ಮಾಡಿರುವ ತಂತ್ರ ಸೇರಿ ರಾಜ್ಯದ ಪ್ರತಿ ನಡೆಯ ಮೇಲೂ ಪಾಕಿಸ್ತಾನ ಒಂದು ಕಣ್ಣಟ್ಟಿದೆ ಎಂದು ಗುಪ್ತಚರ ಸಂಸ್ಥೆ ವಿವರಿಸಿದೆ.
Leave A Reply