ರಂಜಾನ್ ನಂತರ ಪ್ರಥಮ ದಾಳಿಯಲ್ಲೇ ನಾಲ್ವರು ಉಗ್ರರು ಉಡೀಸ್, ಸೇನೆಯ ಅಸಲಿ ಆಟ ಶುರು
ದೆಹಲಿ: ರಂಜಾನ್ ನಿಮಿತ್ತ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಒಂದು ತಿಂಗಳಿಂದ ಸ್ಥಗಿತವಾಗಿದ್ದ ಸೇನೆಯ ಕಾರ್ಯಾಚರಣೆಯನ್ನು ಹಿಂಪಡೆದ ನಂತರ ಆರಂಭವಾದ ಪ್ರಥಮ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ. ದಕ್ಷಿಣ ಕಾಶ್ಮೀರದ ಬಂಡಿಪುರ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಾಲ್ವರು ಭಯೋತ್ಪಾದಕರನ್ನು ರಕ್ಷಣಾ ಪಡೆಗಳು ಹೊಡೆದುರುಳಿಸಿದ್ದು, ಕಾರ್ಯಾಚರಣೆ ಮುಂದುವರಿದಿದೆ.
ಜೂನ್ 14ರಂದು ಭಾರತೀಯ ಸೇನೆಯ ಯೋಧ ಔರಂಗಜೇಬ್ ಅವರನ್ನು ಬಂಡಿಪುರಾ ಜಿಲ್ಲೆಯಲ್ಲಿ ರಂಜಾನ್ ತಿಂಗಳಲ್ಲೇ ಅಪಹರಿಸಿ ಬರ್ಬರವಾಗಿ ಕೊಲೆ ಮಾಡಿದ್ದರು. ಅವತ್ತೇ ಕೇಂದ್ರ ಸರ್ಕಾರ ಭಯೋತ್ಪಾದಕರನ್ನು ಸದೆಬಡಿಯಲು ನಿರ್ಧರಿಸಿತ್ತು. ರಂಜಾನ್ ಹಬ್ಬ ಮುಗಿದ ನಂತರದ ದಿನವೇ ನಿಷೇಧವನ್ನು ಕೇಂದ್ರ ಸರ್ಕಾರ ಹಿಂಪಡೆದಿತ್ತು. ಅಲ್ಲದೇ ಸೇನೆಗೆ ಭಯೋತ್ಪಾದಕರನ್ನು ಹತ್ತಿಕ್ಕಲು ಸಂಪೂರ್ಣ ಸ್ವಾತಂತ್ರ್ಯ ನೀಡಿತ್ತು. ಇದೀಗ ಅದರ ಫಲದಿಂದ ಹೊಸ ನಿರೀಕ್ಷೆಯೊಂದು ಮೂಡಿದ್ದು, ಕಾರ್ಯಾಚರಣೆ ಆರಂಭವಾದ ಮೊದಲ ಏಟಿನಲ್ಲೇ ನಾಲ್ವರು ಭಯೋತ್ಪಾದಕನ್ನು ರಕ್ಷಣಾ ಪಡೆಗಳು ಹತ್ಯೆ ಮಾಡಿ, ಶುಭ ಸುದ್ದಿ ನೀಡಿದ್ದು, ಕಾರ್ಯಾಚರಣೆಯನ್ನು ಮುಂದುವರಿಸಿವೆ.
Leave A Reply