ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ರಾಹುಲ್ ಗಾಂಧಿಗೆ ಏಕೆ ನೋಟಿಸ್ ನೀಡಿದೆ ಗೊತ್ತಾ?
ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಸದಾ ಸುದ್ದಿಯಲ್ಲೇ ಇರಬಯಸುವವರಾಗಿದ್ದು, ಇದಕ್ಕಾಗಿ ಆವಾಗಾವಾಗ ಯಾವುದಾದರೊಂದು ವಿವಾದಾತ್ಮಕ ಹೇಳಿಕೆ, ಹಾಸ್ಯಾಸ್ಪದ ಮಾತುಗಳನ್ನು ಆಡುತ್ತಲೇ ಇರುತ್ತಾರೆ. ಇತ್ತೀಚೆಗೆ ಕೆ.ಜಿ. ಮಾಪನದಲ್ಲಿ ಪೆಟ್ರೋಲ್ ಸಿಗುತ್ತದೆ ಎಂದು ಟ್ವೀಟ್ ಮಾಡುವ ಮೂಲಕ ರಾಹುಲ್ ನಗೆಪಾಟಲಿಗೀಡಾಗಿದ್ದರು.
ಅಷ್ಟೇ ಅಲ್ಲ, ಕೆಲವು ದಿನಗಳ ಹಿಂದಷ್ಟೇ, ದಲಿತ ಮಕ್ಕಳು ಎಂಬ ಕಾರಣಕ್ಕಾಗಿ ಉನ್ನತ ವರ್ಗದವರು ಹೊಡೆಯುತ್ತಿದ್ದಾರೆ ಎಂಬ ವೀಡಿಯೋ ಅಪ್ ಲೋಡ್ ಮಾಡಿದ್ದ ರಾಹುಲ್ ಗಾಂಧಿ, ನೇರವಾಗಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಆರೆಸ್ಸೆಸ್ಸನ್ನು ಟೀಕಿಸಿದ್ದರು.
ಆದರೆ ರಾಹುಲ್ ಗಾಂಧಿಯವರು ಹೀಗೆ ಮಕ್ಕಳ ವೀಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಕ್ಕಾಗಿ ಮಹಾರಾಷ್ಟ್ರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಿದ್ದು, ಈ ಕುರಿತು ಹತ್ತು ದಿನಗಳೊಳಗಾಗಿ ಉತ್ತರ ನೀಡಬೇಕು ಎಂದು ನೋಟಿಸ್ ನಲ್ಲಿ ಉಲ್ಲೇಖಿಸಿದೆ.
ರಾಹುಲ್ ಗಾಂಧಿ ಅವರು ಮಕ್ಕಳಿಗೆ ಹೊಡೆಯುತ್ತಿರುವ ವೀಡಿಯೋ ಅಪ್ ಲೋಡ್ ಮಾಡುವ ಮೂಲಕ ಮಕ್ಕಳ ಹಕ್ಕುಗಳಿಗೆ ಧಕ್ಕೆ ತಂದಿದ್ದಾರೆ. ಹಾಗಾಗಿ ಇದು ಚಿಕ್ಕವಯಸ್ಸಿನ ಮಕ್ಕಳ ನ್ಯಾಯ ಕಾಯ್ದೆ 74 ಹಾಗೂ ಲೈಂಗಿಕ ಅಪರಾಧದಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೋ) ಉಲ್ಲಂಘನೆಯಾಗಿದ್ದು, ಈ ಕುರಿತು ಪ್ರತಿಕ್ರಿಯಿಸಬೇಕು ಎಂದು ನೋಟಿಸ್ ನಲ್ಲಿ ಸೂಚಿಸಲಾಗಿದೆ.
ರಾಹುಲ್ ಗಾಂಧಿ ಮಾಡಿದ್ದ ಟ್ವೀಟ್ ವಿರೋಧಿಸಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಜೂನ್ 19ರಂದು ಅರ್ಜಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಆಯೋಗ ಈ ಕ್ರಮ ಕೈಗೊಂಡಿದೆ.
Leave A Reply