ಮಂಗಳೂರಿನ ಯೋಧನೊಬ್ಬ ಬಿಚ್ಚಿಟ್ಟ ಕಾಶ್ಮೀರದ ಸತ್ಯ ಘಟನೆ !
ಜಮ್ಮು ಕಾಶ್ಮೀರ ಭಾರತದ ಸ್ವರ್ಗ ಅಂತಾನೇ ಹೇಳಬಹುದು, ಆದರೆ ಇವತ್ತು ಕಾಶ್ಮೀರ ಅತ್ಯಂತ ಚರ್ಚಿತವಾದ ಒಂದು ರಾಜ್ಯ.. ಏಕೆಂದರೆ ಎಲ್ಲರ ಮನಸ್ಸಲ್ಲೂ ಇಲ್ಲಿನ ಸರ್ಕಾರ ಹಾಗೂ ಸೈನಿಕರು ಕಾಶ್ಮೀರದಲ್ಲಿನ ಅಮಾಯಕರನ್ನು ಕೊಲ್ಲುತ್ತಿದ್ದಾರೆ., ಆದರೆ ಇಲ್ಲಿ ನಡೆಯುತ್ತಿರುವ ವಾಸ್ತವ ಸತ್ಯಾನೇ ಬೇರೆ.
ಇಲ್ಲಿ ಸ್ವಾತಂತ್ರ್ಯಾ ನಂತರ ಗಲಭೆಗಳು , ಧಂಗೆಗಳು ನಡೆಯುತ್ತಿದೆ, ಇದು ಭಾರತ ಪಾಕಿಸ್ತಾನ ಗಡಿ ಪ್ರದೇಶ ಆಗಿರುವುದರಿಂದ ಇಲ್ಲಿ ಗಲಬೆಗಳು ನಡೆಯುವುದು ಸಾಮಾನ್ಯ.ಕಾಶ್ಮೀರದ ವಿಷಯವನ್ನು ಅರಿತರಷ್ಟರ ಮಟ್ಟಿಗೆ ಭಾರತ ಸ್ವಾತಂತ್ರ್ಯಾ ನಂತರ ಇಲ್ಲಿನ ರಾಜ ಹರಿಸಿಂಗ್”ನ ಕೈಯಲ್ಲಿತ್ತು., ಹರಿಸಿಂಗ್ ಮನಸ್ಸಿನಲ್ಲಿ ಜಮ್ಮು ಕಾಶ್ಮೀರ ಸ್ವತಂತ್ರ ರಾಷ್ಟ್ರವಾಗಬೇಕು ಅನ್ನುವ ಚಿಂತನೆಯಲ್ಲಿದ್ದರು, ಆದರೆ ಇಲ್ಲಿನ ನ್ಯಾಶನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಜಮ್ಮು ಕಾಶ್ಮೀರ ಪಾಕಿಸ್ತಾನಕ್ಕೆ ಸೇರಬೇಕು ಅನ್ನುವ ಚಿಂತನೆಯಲ್ಲಿದ್ದಾರೆ.
ಈ ವೇಳೆಯಲ್ಲಿ ಭಾರತ ದುಷ್ಠ ದೇಶ ಪಾಕಿಸ್ತಾನದ ಕುತಂತ್ರದಿಂದ ಬ್ರಿಟೀಷರು ಕಾಶ್ಮೀರದ ಮೇಲೆ ದಾಳಿ ಮಾಡುತ್ತಾರೆ,, ಆಗ ರಾಜ ಹರಿಸಿಂಗ್ ಭಾರತದ ಅಂದಿನ ಪ್ರಧಾನಿ ಜವಹರಲಾಲ್ ನೆಹರೂ”ರವರೊಂದಿಗೆ ಭಾರತದ ಮಿಲಿಟರಿ ಸಹಾಯ ಚಾಚುತ್ತಾರೆ.. ಆಗ ನೆಹರೂರವರು ಕಾಶ್ಮೀರಕ್ಕೆ ಭಾರತದ ಸೇನೆಯನ್ನು ನಿಯೋಜಿಸಿ ಬ್ರಿಟೀಷರನ್ನು ಓಡಿಸಿ ಗಡಿಯಲ್ಲಿ ಸೇನೆಯನ್ನು ಭದ್ರಮಾಡುತ್ತಾರೆ, ಆ ನಂತರ ಇದನ್ನೇ ನೆಪ ಮಾಡಿಕೊಂಡು ಕಾಶ್ಮೀರದ ಜನತೆಯನ್ನು ಭಾರತದ ವಿರುದ್ಧ ಎತ್ತಿ ಕಟ್ಚುವುದಕ್ಕೋಸ್ಕರ ಪ್ರತ್ಯೇಕವಾದಿ ಸಂಘಟನೆಯನ್ನು ಕಟ್ಟಿಕೊಂಡು ಇದರಲ್ಲಿ ಪ್ರಮುಖವಾಗಿ ಸೈಯ್ಯದ್ ಅಲಿ ಷಾ ಜೀಲಾನಿ, ಮೀರ್ ಸಾದಿಕ್ ಅಂತವರು ಭಾರತದ ಸೇನೆಯ ಮೇಲೆ ಕಲ್ಲು ಹೊಡೆಯುವುದು ಅವಮಾನಿಸುವುದು ಮಾಡುತ್ತಾರೆ. ಇಲ್ಲಿನ ಜನ 75% ಪಾಕಿಸ್ತಾನ ಬೆಂಬಲಿಗರು ಹಾಗೂ 25% ಭಾರತವನ್ನು ಗೌರವಿಸುತ್ತಾರೆ,, ಇನ್ನು ಸಿಯಾಚಿನ್-60° ತಾಪಮಾನ ಇರುವ ಗಡಿಯಿಂದ ಪಾಕ್ ಉಗ್ರರು ಭಾರತವನ್ನು ಒಳನುಸುಲಿ ಇಲ್ಲಿ ವಿಧ್ವಂಸಕ ಕ್ರತ್ಯ ಮಾಡುತ್ತಾರೆ,ಇವರಿಗೆ ಕಾಶ್ಮೀರದ ಜನತೆ ಸಂಪೂರ್ಣ ಬೆಂಬಲಿಸುತ್ತಾರೆ ಮತ್ತು ಇಲ್ಲಿನ ನವ ಯುವಕರನ್ನು ಭಯೋತ್ಪದನೆಯ ಕಡೆ ಪ್ರೇರೇಪಿಸುತ್ತಾರೆ. ಇನ್ನೂ ಬೇಳಬೇಕಾದರೆ ತುಂಬಾ ವಿಷಯ ಇದೆ.. ಕಳೆದ ಶುಕ್ರವಾರ ಶ್ರೀನಗರದ ಬೆಮಿನ ಎನ್ನುವ ಪ್ರದೇಶದಲ್ಲಿ CRPF ನ 28 ಬೆಟಾಲಿಯನ್ ಕರ್ತವ್ಯದಲ್ಲಿರಬೇಕಾದರೆ ಶುಕ್ರವಾರ ಜುಮ್ಮಾ ನಮಾಜಿನಿಂದ ಹೊರಬರುವ ಸುಮಾರು 500″ರಷ್ಟು ಯುವಕರು CRPFನ ಕಾರಿನ ಮೇಲೆ ದಾಳಿ ಮಾಡುತ್ತಾರೆ, ಈ ಕಾರಿನಲ್ಲಿ CRPF”ನ ಕಮಾಂಡೊ ಆಫೀಸರ್ ಸೇರಿ 5ಜನ ಯೋಧರಿದ್ದರು. ಯುವಕರು ಕಲ್ಲು ಹೊಡೆಯುವುದನ್ನೂ ಲೆಕ್ಕಿಸದೆ ವಿಧಾನ ಗಡಿಯಲ್ಲಿ ಜನ ಜಂಗುಳಿಯಿಯಂದ ತಪ್ಪಿಸುವ ಸಮಯದಲ್ಲಿ 2 ಯುವಕರು ಕಾರಿನ ಎದುರು ಬಂದು ಮಲಗಿತ್ತಾರೆ, CRPF”ನ ಡ್ರೈವರ್ ಕಾರನ್ನು ನಿಲ್ಲಿಸಿದೇಯಯಯಯದ್ದೇ ಆದರೆ ಅದರಲ್ಲಿದ್ದ 6 ಯೋದರನ್ನು ಕೊಂದು ಅವರಲ್ಲಿದ್ದ ರೈಫಲ್’ಗಳನ್ನು ದೋಚುತ್ತಿದ್ದರು, ಈ ಭಯದಿಂದ ಡ್ರೈವರ್ ಯುವಕರ ಮೇಲೆಯೇ ಕಾರನ್ನು ಚಲಾಯಿಸುತ್ತಾನೆ, ಇದರಲ್ಲಿ ಒಬ್ಬ ಯುವಕ ಸಾಯುತ್ತಾನೆ ಹಾಗೂ CRPF ಡ್ರೈವರ್ ಮೇಲೆ ಕೇಸನ್ನು ದಾಖಲಿಸುತ್ತಾರೆ.
ಇಲ್ಲಿ ನಾವು ತಿಳಿಯಬೇಕಾದದ್ದು ಮಿಲಿಟರಿ ಆಗಲಿ CRPF ಆಗಲಿ ಏನೋ ಯುವಕರು ಸ್ವತಃ ಬಂದು ಕಾರಿನ ಮೇಲೆ ಕಲ್ಲು ಹೊಡೆಯುವಾಗ ಡ್ರೈವರ್ ಏನು ಮಾಡಬೇಕು? ಇಷ್ಟಾದರೂ ಮಿಲಿಟರಿಯನ್ನು ದೂರುವುದು ಯೋದರ ಮೇಲೆ FIR ಮಾಡುವುದು ಎಷ್ಟು ಸರಿ,, ಯಾವತ್ತೂ ಸೇನೆ ಅಮಾಯಕರನ್ನು ಕೊಲ್ಲಲ್ಲ ! ಅಮಾಯಕರನ್ನು ಕೊಲ್ಲುವುದಾದರೆ ಕಾರಿನ ಮೇಲೆ ಕಲ್ಲು, ಗ್ರೇನೆಟ್ ಬಿಸಾಡುವಾಗ ಗುಂಡು ಹೊಡೆಯಬಹುದಿತ್ತು ಆದರೆ ಸೇನೆ ತಾಳ್ಮೆಯಿಂದ ಇಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಾ ಇದೆ, ಶ್ರೀನಗರ ಅನ್ನೋ ಒಂದು ಪ್ರದೇಶವೊಂದು ಭಾರತದ ಪ್ರವಾಸೀ ತಾಣ ಆದರೆ ಇಲ್ಲಿ ಕಲ್ಲು ತೂರಾಟ ಗಲಭೆಯಿಂದಾಗಿ ವರ್ಷದ 6 ತಿಂಗಳು ಬಂದ್ ಇರುತ್ತದೆ. ಇಲ್ಲಿನ ಅಭಿವೃದ್ಧಿ ಇತರ ರಾಜ್ಯಕ್ಕೆ ಹೋಲಿಸಿದರೆ ಸುಮಾರು 25 ವರ್ಷ ಹಿಂದಿದೆ.. ನಾನು ಎಲ್ಲಾ ಜನತೆಗೆ ಹೇಳಬಯಸುವುದು ಯಾವುದೋ ಮಾದ್ಯಮದಲ್ಲಿ ಬಂದದ್ದು ಅಥವಾ ಯಾರೋ ಹೇಳಿದ್ದನ್ನು ಚಿಂತಿಸದೇ ತಾವೇ ಸ್ವತಃ ಕಾಶ್ಮೀರಕ್ಕೆ ಭೇಟಿ ಕೊಟ್ಟು ಇಲ್ಲಿನ ಪರಿಸ್ಥಿಯನ್ನು ಅವಲೋಕಿಸಿದರೆ ಇಲ್ಲಿನ ನೈಜ್ಯ ಸ್ಥಿತಿ ಅರಿವಾಗಬಹುದು.
Leave A Reply