ಉಗ್ರ ಸಂಘಟನೆ ಲಷ್ಕರ್ ತಯ್ಯಬಾದಿಂದ ಪಾಕ್ ಇಂಜಿನಿಯರ್ ಗಳಿಗೆ ಮ್ಯಾನೆಜ್ ಮೆಂಟ್ ಕೋರ್ಸ್
ಇಸ್ಲಾಮಾಬಾದ್: ಪಾಕಿಸ್ತಾನದ ಭಯೋತ್ಪಾದಕರ ಮೂಲ ಸ್ಥಾನ ಎಂಬುದು ಜಗ್ಗಜಾಹಿರಾಗಿರುವ ಮಧ್ಯೆಯೇ, ಭಯೋತ್ಪಾದಕ ಚಟುವಟಿಕೆಗಳಿಗೆ ಪಾಕಿಸ್ತಾನ ಸದಾ ಆಶ್ರಯ ನೀಡುತ್ತಲೇ ಬರುತ್ತಿದೆ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಇದಕ್ಕೆ ವಿಶ್ವಕ್ಕೆ ಕಂಟಕಟವಾಗಿರುವ ಲಷ್ಕರ್ ಈ ತಯ್ಯಬಾ ಉಗ್ರ ಸಂಘಟನೆ ಪಾಕಿಸ್ತಾನದ ಇಂಜಿನಿಯರ್ ವಿದ್ಯಾರ್ಥಿಗಳಿಗೆ ಮ್ಯಾನೆಜ್ ಮೆಂಟ್ ಕೋರ್ಸ್ ಗಳನ್ನು ಆರಂಭಿಸಿದ್ದು, ವಿಶ್ವಸಮುದಾಯಕ್ಕೆ ಮತ್ತೊಮ್ಮೆ ಭೀತಿ ಎದುರಾಗಿದೆ.
ಇಡೀ ತರಬೇತಿಯ ನೇತೃತ್ವವನ್ನು ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಗಳಲ್ಲಿ ಒಬ್ಬನಾದ ಅಬ್ದುಲ್ ರೆಹೆಮಾನ್ ಮಕ್ಕಿ ವಹಿಸಿಕೊಂಡಿದ್ದು, ತರಬೇತಿ ಪಡೆದ ಇಂಜಿನಿಯರ್ ವಿದ್ಯಾರ್ಥಿಗಳಿಗೆ ಚೀನಾ ಪಾಕಿಸ್ತಾನ ಜಂಟಿ ಸಹಯೋಗದಲ್ಲಿ ನಡೆಸುತ್ತಿರುವ ಆರ್ಥಿಕ ಕಾರಿಡಾರ್ ನಲ್ಲಿ ಕೆಲಸ ದೊರಕಿಸಿ ಕೊಡಲಾಗುತ್ತದೆ. ಅವರು ತಾವು ನಿರ್ವಹಿಸುವ ಕೆಲಸಕ್ಕೆ ದೊರೆಯುವ ಸಂಭಾವನೆಯಲ್ಲಿ ಕೆಲವೊಂದಿಷ್ಟನ್ನು ತರಬೇತಿ ನೀಡಿದಕ್ಕಾಗಿ ಭಯೋತ್ಪಾದಕ ಸಂಘಟನೆಗೆ ದೇಣಿಗೆಯಾಗಿ ನೀಡಬೇಕು ಎಂಬ ಷರತ್ತನ್ನು ವಿಧಿಸಿ ತರಬೇತಿ ನೀಡಲಾಗುತ್ತಿದೆ.
ಪ್ರಸ್ತುತ ಕೇವಲ ಇಂಜನಿಯರ್ ಗಳು ತಮ್ಮ ಸ್ಯಾಲರಿಯ ಒಂದಿಷ್ಟು ಹಣವನ್ನು ಮಾತ್ರ ದೇಣಿಗೆಯಾಗಿ ನೀಡಬೇಕು ಎಂಬ ನಿಯಮವಿದ್ದರೂ ಸಹ, ಭವಿಷ್ಯದಲ್ಲಿ ಭಯೋತ್ಪಾದಕ ಸಂಘಟನೆಯೊಂದರಿಂದ ತರಬೇತಿ ಪಡೆದ ಇಂಜಿನಿಯರ್ ಗಳು ಉಗ್ರರಾಗುವ ಭೀತಿ ಭಾರತದ ಗುಪ್ತರಚ ಇಲಾಖೆಗಳು ಸೇರಿ ವಿಶ್ವ ಸಮುದಾಯಕ್ಕೆ ಎದುರಾಗಿದೆ.
Leave A Reply