ಕೆಂಪು ಉಗ್ರರ ಹುಟ್ಟಡಗಿಸಿದ ನಿವೃತ್ತ ಐಪಿಎಸ್ ಅಧಿಕಾರಿ ಕಾಶ್ಮೀರದತ್ತ: ಭಯೋತ್ಪಾದಕರ ಬೆವರಿಳಿಸಲು ಮುಂದಾದ ಕೇಂದ್ರ
ದೆಹಲಿ: ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾದ ಬೆನ್ನಲೇ ಕಣಿವೆಯಲ್ಲಿ ಭಯೋತ್ಪಾದಕರು ಮತ್ತು ಪ್ರತ್ಯೇಕತವಾದಿಗಳ ಹುಟ್ಟಡಗಿಲು ದಿಟ್ಟ ನಿಲುವುಗಳನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೈಗೊಂಡಿದೆ. ದೇಶದ ಹಿತಾಸಕ್ತಿ ಮತ್ತು ಅಖಂಡತೆಯ ಉದ್ದೇಶವಿಟ್ಟುಕೊಂಡು ಜಮ್ಮು ಕಾಶ್ಮೀರದಲ್ಲಿ ಪಿಡಿಪಿಯೊಂದಿಗಿನ ಮೈತ್ರಿಯನ್ನು ಕಡಿದುಕೊಂಡಿದ್ದು, ಕಣಿವೆ ರಾಜ್ಯದಲ್ಲಿ ಶಾಶ್ವತವಾಗಿ ಶಾಂತಿ ಕಾಪಾಡಲು ಭಾರಿ ಕ್ರಮವನ್ನು ಕೈಗೊಂಡಿದೆ. ಕಣಿವೆಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಮೂಲಕ ಪಿಡಿಪಿಯಿಂದ ಅಧಿಕಾರದಿಂದ ಕೆಳಗಿಳಿಸಿದ್ದು, ಶಾಂತಿ ಕಾಪಾಡಲು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ಮೋಸ್ಟ್ ವಾಂಟೆಡ್ ನಕ್ಸಲರನ್ನು ಹೊಡೆದುರುಳಿಸಿದ ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರನ್ನು ಜಮ್ಮು ಕಾಶ್ಮೀರ ರಾಜ್ಯಪಾಲರಿಗೆ ಸಲಹೆಗಾರರಾಗಿ ನೇಮಕವಾಗಿದ್ದಾರೆ..
ದಿಟ್ಟ ಕ್ರಮಗಳಿಂದಲೇ ಹೆಸರುವಾಸಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಇದೀಗ ಕಣಿವೆ ರಾಜ್ಯದಲ್ಲಿ ಎದುರಾಗಿರುವ ರಾಷ್ಟ್ರಪತಿ ಆಡಳಿತ ಲಾಭವನ್ನು ಪಡೆದು, ಉಗ್ರ ಮತ್ತು ಪ್ರತ್ಯೇಕತವಾದಿಗಳ ಹುಟ್ಟಡಗಿಸಲು ಮಹತ್ವದ ನಿಲುವು ವ್ಯಕ್ತಪಡಿಸಿದೆ. ಆ ನಿಟ್ಟಿಲ್ಲಿ ಜಮ್ಮು ಕಾಶ್ಮೀರದ ರಾಜ್ಯಪಾಲ ಎನ್ ಎನ್ ವೊಹ್ರಾ ಅವರಿಗೆ ಆಪರೇಷನ್ ಕುಕೂನ್ ಮೂಲಕ ನಕ್ಸಲ್ ಕಿಂಗ್ ಪಿನ್ ಗಳನ್ನು ಸದೆಬಡೆಯುವುದು ಸೇರಿ ಮಹತ್ವದ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಸೂಪರ್ ಕಾಪ್ ಕೆ.ವಿಜಯಕುಮಾರ್ ಅವರನ್ನು ಸಲಹೆಗಾರನಾಗಿ ಕೇಂದ್ರ ಸರ್ಕಾರ ನೇಮಿಸಿದೆ.
1975ರ ಐಪಿಎಸ್ ಬ್ಯಾಚನ್ ಅಧಿಕಾರಿಯಾಗಿರುವ ಕೆ.ವಿಜಯಕುಮಾರ ವೀರಪ್ಪನ್ ಅಷ್ಟೇ ಅಲ್ಲ, ಛತ್ತಿಸಘಡ್ ನಲ್ಲಿ ಹಲವು ನಕ್ಸಲರನ್ನು ಹೊಡೆದುರುಳಿಸಿದ ಖ್ಯಾತಿ ಹೊಂದಿದ್ದಾರೆ. ಅಲ್ಲದೇ ಬಿಎಸ್ಎಫ್ ಇನ್ಸ್‌ಪೆಕ್ಟರ್ ಜಬರಲ್ ಆಗಿ ಕಾಶ್ಮೀರದಲ್ಲಿ 1998 ರಿಂದ 2001 ರವರೆಗೆ ಕಾರ್ಯನಿರ್ವಹಿಸಿದ್ದಾರೆ. ಅಲ್ಲೂ ಕೌಂಟರ್ ಇನ್ಸರ್ಜೆನ್ಸಿ ಆಪರೇಷನ್ ನಲ್ಲಿ ಭಾಗಿಯಾಗಿದ್ದರು. 2010 ರಿಂದ 2012ರಲ್ಲಿ ಸಿಆರ್ ಫಿಎಫ್ ಡೈರೆಕ್ಟರ್ ಜನರಲ್ ಆಗಿ ಕಾರ್ಯನಿರ್ವಹಿಸಿದ್ದರು. ನಂತರ ಹಿರಿಯ ಭದ್ರತಾ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Leave A Reply