ರಂಜಾನ್ ದಿನ ಈ ಶಾಲೆಯಲ್ಲಿ ಹಿಂದೂ ಮಕ್ಕಳೂ ಇಸ್ಲಾಂ ಟೋಪಿ ಹಾಕಬೇಕಂತೆ, ಇದೆಂಥ ಶೈಕ್ಷಣಿಕ ಇಸ್ಲಾಮೀಕರಣ?

ದೇಶದ ಯಾವುದೇ ಸರ್ಕಾರಿ ಹಾಗೂ ಅನುದಾನಿತ ಶೈಕ್ಷಣಿಕ ಸಂಸ್ಥೆಗಳಲ್ಲೂ ಧಾರ್ಮಿಕ ಶಿಕ್ಷಣ ಬೋಧಿಸಬಾರದು ಎಂಬ ನಿಯಮವಿದೆ. ಆದರೆ ಕೆಲವು ಕ್ರೈಸ್ತ ಮಿಶನರಿಗಳು ಹಾಗೂ ಇಸ್ಲಾಂ ಮೂಲಭೂತವಾದಗಳಿಂದ ಇಂದು ಹಲವು ಕ್ರೈಸ್ತ ಶಾಲೆ ಹಾಗೂ ಮದರಸಾಗಳಲ್ಲಿ ಇಸ್ಲಾಮೀಕರಣ ಬೋಧಿಸಲಾಗುತ್ತಿದೆ.
ಇದಕ್ಕೆ ಸಾಕ್ಷಿಯಾಗಿ ಜಾರ್ಖಂಡ್ ನ ಗಡ್ಡಾದಲ್ಲಿ ಡಾನ್ ಬಾಸ್ಕೋ ಶಾಲೆಯಲ್ಲಿ ಇಸ್ಲಾಮೀಕರಣ ಬೋಧಿಸುವ ಕೆಲಸವಾಗುತ್ತಿರುವುದು ಆತಂಕ ಮೂಡಿಸಿದೆ. ಹೌದು, ಇದೇ ಶಾಲೆಯಲ್ಲಿ ಕಳೆದ ವಾರ ಆಚರಿಸಿದ ರಂಜಾನ್ ವೇಳೆ ಹಿಂದೂ ಮಕ್ಕಳಿಗೂ ಸಹ ಒತ್ತಾಯಪೂರ್ವಕವಾಗಿ ಮುಸ್ಲಿಂ ಟೋಪಿ ಹಾಕಿದ್ದು ಈಗ ವಿವಾದವಾಗಿದೆ.
ಕಳೆದ ವಾರ ರಂಜಾನ್ ಆಚರಿಸಿದ್ದು, ಶಾಲೆಯಲ್ಲಿ ಮಕ್ಕಳಿಗೆ ಒತ್ತಾಯಪೂರ್ವಕವಾಗಿ ಇಸ್ಲಾಂ ಟೋಪಿ ಹಾಕಲಾಗಿದೆ. ಅಲ್ಲದೆ ಕೆಲವು ಮಕ್ಕಳು ಇನ್ನೂ ಚಿಕ್ಕವರಾಗಿರುವುದರಿಂದ ಸುಮ್ಮನೆ ಹಾಕಿಕೊಂಡಿವೆ. ಆದರೆ ಈ ಕುರಿತ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟೀಕೆಗಳು ವ್ಯಕ್ತವಾಗಿವೆ.
ಹೀಗೆ ಹಿಂದೂ ಮಕ್ಕಳಿಗೂ ಇಸ್ಲಾಂ ಟೋಪಿ ಹಾಕಿರುವ ಕುರಿತು ಯಾವಾಗ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾದವೋ, ಆಗ ಶಾಲೆಯ ಆಡಳಿತ ಮಂಡಳಿ ಕ್ಷಮೆಯಾಚಿಸಿದೆ. ಆದರೆ ಇದಕ್ಕೂ ಮೊದಲು ಏಕೆ ಮಕ್ಕಳ ತಲೆಯಲ್ಲಿ ಧರ್ಮ ಬಿತ್ತಬೇಕಿತ್ತು? ಹೀಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಧರ್ಮ ಬೋಧನೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.