ತಡೆಗೋಡೆ ಕುಸಿದು ಹಾನಿಯಾದ ಪ್ರದೇಶಗಳಿಗೆ ಸಂಸದ ನಳಿನ್ ಕುಮಾರ್ ಭೇಟಿ!
ಮಂಗಳೂರು : ಇಲ್ಲಿನ ಹೊರವಲಯದಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿದ್ದ ತಡೆಗೋಡೆ ಕುಸಿದ ಪರಿಣಾಮ ಬಜ್ಪೆ ಬಳಿಯ ದೊಡ್ಡಿಕಟ್ಟ ಪ್ರದೇಶಕ್ಕೆ ನೀರು ನುಗ್ಗಿ ದೊಡ್ಡಿಕಟ್ಟ ಪ್ರದೇಶ ಸೃಷ್ಠಿಯಾಗಿದೆ. ಮಂಗಳೂರು ಹೊರವಲಯದ ಎಸ್ಇ ಝಡ್ ವಲಯಕ್ಕೆ ನೀರು ಹರಿಯುವ ನಾಲೆಗೆ ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ ಮುಂಜಾನೆ ತೆಡೆಗೋಡೆ ಕುಸಿದಿದ್ದು, ನದಿ ನೀರು ಜನವಸತಿ ಪ್ರದೇಶಕ್ಕೆ ನುಗ್ಗಿದೆ.
ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಈ ತಡೆಗೊಡೆ ಕುಸಿದಿದೆ. ತಗ್ಗು ಪ್ರದೇಶಗಳಿಗೆ ಸಾಕಷ್ಟು, ನೀರು ನುಗಿದ್ದು ತಡೆಗೊಡೆ ಬಳಿಯ ಇರುವ ದೊಡ್ಡಿಕಟ್ಟ ಪ್ರದೇಶ ಸಂಪೂರ್ಣ ಜಲಾವೃತವಾಗಿದೆ.
ದೊಡ್ಡಿಕಟ್ಟ ಸಮೀಪದ ದೇವಸ್ಥಾನ, ಪರಿಸರದ ಮನೆಗಳಿಗೆ ನೀರು ನುಗ್ಗಿರುವುದರಿಂದ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಈ ಸ್ಥಳದಲ್ಲಿಯೇ ಇರುವ ಸಾಫ್ಟ್ ವೇರ್ ಕಂಪನಿಯ ಕಚೇರಿಗೂ ನೀರು ನುಗ್ಗಿದೆ. ಈಗ ನೀರಿನ ಪ್ರಮಾಣ ಇಳಿಮುಖವಾಗಿದೆ.
ಸ್ಥಳಕ್ಕೆ ಸಂಸದರು, ಶಾಸಕರು ಭೇಟಿ
ಮಂಗಳೂರಿನ ಬಜ್ಪೆ ಸಮೀಪ ದೊಡ್ಡಿಕಟ್ಟ ಎಂಬಲ್ಲಿ ಹರಿಯುವ ತೋಡಿಗೆ ಅಡ್ಡಲಾಗಿ ಎಂ.ಎಸ್. ಇ.ಝೆಡ್ ವತಿಯಿಂದ ನಿರ್ಮಿಸಲಾದ ಕಟ್ಟೆಯು ನಿರಂತರ ಸುರಿದ ಮಳೆಗೆ ಹೊಡೆದು ಸಮೀಪದ ದೇವಸ್ಥಾನ, ಮನೆ ಹಾಗೂ ಕೃಷಿ ಭೂಮಿಗಳಿಗೆ ನೀರುನುಗ್ಗಿ ಹಾನಿಯಾದ ಪ್ರದೇಶಗಳಿಗೆ ಸಂಸದ ಶ್ರೀ.ನಳಿನ್ ಕುಮಾರ್ ಕಟೀಲ್ ಅವರು ಎಂ.ಎಸ್.ಇ.ಝೆಡ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸೂಕ್ತ ಪರಿಹಾರ ಒದಗಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಮೂಡಬಿದ್ರೆ ಶಾಸಕ ಶ್ರೀ.ಉಮಾನಾಥ ಕೋಟ್ಯಾನ್ ಹಾಗೂ ಗ್ರಾಮಸ್ಥರು ಜೊತೆಗಿದ್ದರು.
Leave A Reply