ಇವರೇ ನಮಗೆ ಸ್ಫೂರ್ತಿ: ಸೈನಿಕರ ಸೇವೆ ಆದರ್ಶವಾಗಿಟ್ಟುಕೊಂಡು ಸಾಧನೆ ಮೆರೆದ ಟೀ ಮಾರುವವರ ಮಗಳು
ಭೊಪಾಲ್: ‘ನಾನು ಹನ್ನೆರಡನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ ಸಮಯವದು. ಉತ್ತರಾಖಂಡದಲ್ಲಿ ಭಾರಿ ಮಳೆಯಾಗಿ, ಇಡೀ ಉತ್ತರಾಖಂಡ ನೀರಿನಲ್ಲಿ ಮುಳುಗಿತ್ತು. ಲಕ್ಷಾಂತರ ಜನರು ಪ್ರವಾಹಕ್ಕೆ ಸಿಲುಕಿ ನಲುಗಿಹೋಗಿದ್ದರು. ಆ ವೇಳೆ ಭಾರತೀಯ ರಕ್ಷಣಾ ಪಡೆಗಳು ಕೈಗೊಂಡ ರಕ್ಷಣಾ ಕಾರ್ಯ ನನಗೆ ಸದಾ ಸ್ಫೂರ್ತಿದಾಯಕವಾಗಿತ್ತು. ಅಂದೇ ಸೈನ್ಯವನ್ನು ಸೇರಬೇಕು ಎಂದು ನಿರ್ಧರಿಸಿದ್ದೆ…
ಇದು ಮಧ್ಯಪ್ರದೇಶದಿಂದ ಭಾರತೀಯ ಏರ್ ಫೋರ್ಸ್ ನ ಹಾರಾಟ ವಿಭಾಗಕ್ಕೆ ನೇಮಕವಾದ ಏಕೈಕ ಸಾಧಕಿ ಅಂಚಲ್ ಗಂಗ್ವಾಲ್ ಮನದಾಳ. ಇವರ ತಂದೆ ಟೀ ಮಾರುವವರಾಗಿದ್ದಾರೆ. ಸಂಕಷ್ಟದಲ್ಲಿ ಶಿಕ್ಷಣ ಪೂರೈಸಿರುವ ಅಂಚಲ್ ಗಂಗ್ವಾಲ್, ತಾವು 12ನೇ ತರಗತಿಯಲ್ಲಿದ್ದಾಗ ಉತ್ತರಾಖಂಡದಲ್ಲಿ ಉಂಟಾದ ಪ್ರವಾಹದ ವೇಳೆ ಸೈನಿಕ ಪಡೆಗಳ ರಕ್ಷಣಾ ಕಾರ್ಯವನ್ನು ನೋಡಿ, ಸ್ಫೂರ್ತಿ ಪಡೆದಿದ್ದೆ. ಇದೀಗ ಅದೇ ಸ್ಫೂರ್ತಿ ನನ್ನನ್ನು ಸೇನೆ ಸೇರಲು ಪ್ರೇರಣೆ ನೀಡಿದೆ ಎಂದು ತಿಳಿಸಿದ್ದಾರೆ.
ತಂದೆಯ ಟೀ ಮಾರುವವರಾಗಿದ್ದರೂ, ಹಲವು ತಾಪತ್ರಯಗಳ ಮಧ್ಯೆ ಏರ್ ಫೋರ್ಸ್ ಹಾರಾಟ ವಿಭಾಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಮಧ್ಯಪ್ರದೇಶದ ಅಂಚಲ್ ಗಂಗ್ವಾಲ್ ಮಹಿಳೆಯರು ಮತ್ತು ಟೀ ಮಾರುವವರನ್ನು ಹೀಯಾಳಿಸುವವರಿಗೆ ಮಾದರಿಯಾಗಿ ನಿಂತಿದ್ದಾರೆ.
Leave A Reply