ಹಲಸಿನ ಹಣ್ಣು ತಿಂದ್ರೆ ಏಡ್ಸ್ ಬರಲ್ಲ ಎಂದು ಕೇಳಿದ್ದೇನೆ: ಶಾಸಕ ರಘುಪತಿ ಭಟ್
ಉಡುಪಿ: ಹಲಸಿನ ಹಣ್ಣು ತಿಂದ್ರೆ ಏಡ್ಸ್ ಬರಲ್ಲ ಎಂದು ಹಿರಿಯರು, ನಾಟಿ ವೈದ್ಯರು ಹೇಳಿದ್ದನ್ನು ನಾನು ಕೇಳಿದ್ದೇನೆ ಎಂದು ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಉಡುಪಿಯಲ್ಲಿ ಆಯೋಜಿಸಲಾಗಿದ್ದ ಹಲಸು ಮೇಳದಲ್ಲಿ ಮಾತನಾಡಿದ ಅವರು, ಹಲಸಿನ ಹಣ್ಣು ಹೆಚ್ಚೆಚ್ಚು ತಿಂದರೆ ಏಡ್ಸ್ ಬರುವುದಿಲ್ಲ. ಹಲಸಿನ ಕಾಯಿ ತಿಂದರೆ ಏಡ್ಸ್ ಕೂಡಾ ನಿಯಂತ್ರಣವಾಗುತ್ತೆ ಎಂದು ಹಿರಿಯರು ಹೇಳಿರುವುದನ್ನು ಕೇಳಿದ್ದೇನೆ. ನನಗೆ ಈ ಬಗ್ಗೆ ಸರಿಯಾಗಿ ಗೊತ್ತಿಲ್ಲ. ಕೆಲವೊಮ್ಮೆ ಇಂತಹಾ ರೂಮರ್ಸ್ ನಿಂದಲೇ ವಿಷಯ ಹೆಚ್ಚು ಪ್ರಚಾರ ಪಡೆಯುತ್ತದೆ. ಹಲಸಿನ ಹಣ್ಣು ಹೆಚ್ಚೆಚ್ಚು ಸೇಲ್ ಆಗುತ್ತದೆ ಎಂದು ಹೇಳಿದರು.
ದೊಡ್ಡಣಗುಡ್ಡೆಯಲ್ಲಿ ನಡೆಯುತ್ತಿರುವ ಹಲಸು ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಹಲಸಿನ ಕಾಯಿ ತಿಂದರೆ ಮಧುಮೇಹವೂ ಕಡಿಮೆಯಾಗುತ್ತದೆ. ಏಡ್ಸ್ ರೋಗ ನಿಯಂತ್ರಣಕ್ಕೂ ಹಲಸು ಒಳ್ಳೆಯದು ಎಂದರು. ಈ ಮೂಲಕ ಹೊಸದೊಂದು ವಿಚಾರವನ್ನು ಉಡುಪಿ ಶಾಸಕ ರಘುಪತಿ ಭಟ್ ತೆರೆದಿಟ್ಟಿದ್ದಾರೆ. ಶಾಸಕರ ಮಾತು ಕೇಳಿದ ಹಲಸು ಮೇಳಕ್ಕೆ ಆಗಮಿಸಿದ್ದ ಹಲವರಲ್ಲಿ ಚರ್ಚೆಗೆ ಕಾರಣವಾಗಿತ್ತು
Leave A Reply