ಜಿಎಸ್ಟಿ ಯಶಸ್ಸು ನಿಷ್ಠೆಗೆ ಸಂದ ಜಯ, ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮೋದಿ ಹೇಳಿಕೆ
ಹೊಸದಿಲ್ಲಿ: ಸಾಮಾನ್ಯವಾಗಿ ಯಾವುದೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಯೋಜನೆಯು ಜಾರಿಯಾದ 5-7 ವರ್ಷದಲ್ಲಿ ಪ್ರತಿಫಲ ನೀಡುತ್ತದೆ. ಆದರೆ ಭಾರತದಲ್ಲಿ ಒಂದೇ ವರ್ಷದಲ್ಲಿ ಜಿಎಸ್ಟಿ ಯಶಸ್ವಿಯಾಗಿದ್ದು, ಇದು ಸರ್ಕಾರದ ನಿಷ್ಠೆಗೆ ಸಂದ ಜಯ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ದೇಶ, ಒಂದು ತೆರಿಗೆ ಎಂಬುದು ಪ್ರತಿ ಭಾರತೀಯನ ಕನಸಾಗಿತ್ತು. ಅದರಲ್ಲೂ ನಾವು ಜಿಎಸ್ಟಿ ಜಾರಿಗೆ ತರಲು ಹೊರಟಾಗಿ ಪ್ರತಿ ರಾಜ್ಯಗಳು ಸಹಕಾರ ನೀಡಿವೆ. ಜಿಎಸ್ಟಿ ಯಶಸ್ಸಿನ ಹೆಗ್ಗಳಿಕೆ ಈ ರಾಜ್ಯಕ್ಕೂ ಸಲ್ಲಬೇಕು. ಇದು ಪ್ರಜಾಪ್ರಭುತ್ವದ ಸೌಂದರ್ಯವಾಗಿದೆ, ನಿಷ್ಠೆಗೆ ಸಂದ ಜಯವಾಗಿದೆ ಎಂದು ವರ್ಣಿಸಿದ್ದಾರೆ.
ಶಾಮ್ ಪ್ರಸಾದ್ ಮುಖರ್ಜಿಯವರು ಶಿಕ್ಷಣ ಪ್ರೇಮಿಯಾಗಿದ್ದರು. ಅವರು ಕೋಲ್ಕತ್ತಾ ವಿಶ್ವವಿದ್ಯಾಲಯದ ಅತಿ ಕಿರಿಯ ವಯಸ್ಸಿನ ಉಪಕುಲಪತಿಯಾಗಿದ್ದರು. ಮುಖರ್ಜಿಯವರ ಆಹ್ವಾನದ ಮೇರೆಗೆ ರವೀಂದ್ರ ನಾಥ ಟ್ಯಾಗೋರ್ ಅವರು ವಿವಿಯಲ್ಲಿ ಆಯೋಜಿಸಿದ್ದ ಘಟಿಕೋತ್ಸವದಲ್ಲಿ ಮಾತನಾಡಿದ್ದರು ಎಂದು ಮೋದಿ ಸ್ಮರಿಸಿದ್ದಾರೆ.
ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸಕ್ಕೆ ಹಲವು ವರ್ಷಗಳ ಶ್ರಮವಿದೆ. ಜಲಿಯನ್ ವಾಲಾಭಾಗ್ ಹತ್ಯಾಕಾಂಡ ನಡೆದು ಮುಂದಿನ ವರ್ಷಕ್ಕೆ ನೂರು ವರ್ಷ ತುಂಬುತ್ತದೆ. ಆದರೆ ದೇಶವನ್ನು ಯಾವಾಗಲೂ ಮುನ್ನಡೆಸುವುದು, ಅಭಿವೃದ್ಧಿಯತ್ತ ಸಾಗಿಸುವುದು ಶಾಂತಿಯೇ ಎಂದು ಮೋದಿ ಅಭಿಪ್ರಾಯಪಟ್ಟರು.
ಪ್ರಸಕ್ತ ಸಾಲಿನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಯಶಸ್ವಿಯಾಗಿದ್ದು, ಯೋಗ ಎಲ್ಲರನ್ನೂ ಒಗ್ಗೂಡಿಸುತ್ತಿದೆ. ಅದರಲ್ಲೂ ಈ ಬಾರಿ ಸೌದಿ ಅರೇಬಿಯಾದಲ್ಲಿ ಮಹಿಳೆಯರ ನೇತೃತ್ವದಲ್ಲಿ ಯೋಗ ಕಾರ್ಯಕ್ರಮಗಳು ನಡೆದಿವೆ. ನಮ್ಮ ಯೋಧರೂ ಸಹ ಸಿಯಾಚಿನ್, ಸಮುದ್ರದಲ್ಲಿ ಯೋಗ ಮಾಡುವ ಮೂಲಕ ಸ್ಫೂರ್ತಿ ತುಂಬಿದ್ದಾರೆ ಎಂದು ಮೋದಿ ತಿಳಿಸಿದರು.
Leave A Reply