ಯುವಾ ಬ್ರಿಗೇಡ್ ಮತ್ತು ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ
Posted On June 24, 2018

ಭಾನುವಾರ ವಿಟಿ ರಸ್ತೆಯ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆದ ರಕ್ತದಾನ ಶಿಬಿರವನ್ನು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಯುವ ಬ್ರಿಗೇಡ್ ದೇಶ ಕಟ್ಟುವ ಕೆಲಸದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಾ ಇದೆ. ಹಾಗೆ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಸಮಾಜಮುಖಿಯಾಗಿ ನೊಂದವರಿಗೆ, ಅಸಹಾಯಕರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಾ ಬರುತ್ತಿದೆ. ರಕ್ತದಾನದಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷನ ನೆಲೆಯಲ್ಲಿ ಮಾತ್ರವಲ್ಲ ಶಾಸಕನಾಗಿಯೂ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ತೃಪ್ತಿ ತರುತ್ತದೆ ಎಂದು ತಿಳಿಸಿದರು. ಮಂಗಲ್ಪಾಡಿ ನರೇಶ್ ಶೆಣೈ, ಹನುಮಂತ ಕಾಮತ್, ಸಂತೋಷ್ ಭಂಡಾರಿ, ಪಾಂಡುರಂಗ ನಾಯಕ್, ಸತೀಶ್, ತಿಲಕ್ ಶಿಶಿಲ, ಕೆಎಂಸಿ ಬ್ಲೆಡ್ ಬ್ಯಾಂಕ್ ನ ಮುಖ್ಯಸ್ಥ ಭವಾನಿ ಶಂಕರ್ ಮತ್ತಿತರರು ಉಪಸ್ಥಿತರಿದ್ದರು
- Advertisement -
Trending Now
ಮೂರೇ ತಿಂಗಳಲ್ಲಿ ಬಂಗಾರದ ಬೆಲೆ 22000 ರೂ ಹೆಚ್ಚು!
April 18, 2025
Leave A Reply