ಮಾವಿನ ತಳಿಗೆ ಫೈರ್ ಬ್ರ್ಯಾಂಡ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಹೆಸರು!
ಯೋಗಿ ಆದಿತ್ಯನಾಥರು ಎಂದರೇನೆ ಹಾಗೆ. ಅವರು ಫೈರ್ ಬ್ರ್ಯಾಂಡ್ ಮುಖ್ಯಮಂತ್ರಿ. ತೆಗೆದುಕೊಂಡರೆ ದಿಟ್ಟ ನಿರ್ಧಾರ, ಯಾರ ಅಂಜಿಕೆ ಇಲ್ಲ, ಅಳುಕೂ ಇಲ್ಲ. ಆದರೆ ಮನಸ್ಸು ತುಡಿಯುವುದು ಮಾತ್ರ ಅಭಿವೃದ್ಧಿ ಪರ. ಅದಕ್ಕಾಗಿಯೇ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಅವರು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಾರೆ.
ಇಂತಹ ಯೋಗಿ ಆದಿತ್ಯನಾಥರ ಹೆಸರನ್ನು ಈಗ ಮಾವಿನ ತಳಿಗೆ ಹೆಸರಿಡಲಾಗಿದ್ದು, ಈ ತಳಿಯ ಮಾವುಗಳು ಈಗ ಆದಿತ್ಯನಾಥರ ಹೆಸರಿನಲ್ಲಿ ಅರಳಲಿವೆ.
ಉತ್ತರ ಪ್ರದೇಶದ ತೋಟಗಾರಿಕೆ ಇಲಾಖೆ ಲಖನೌನಲ್ಲಿ ಎರಡು ದಿನಗಳ ಮಾವು ಮೇಳ ಆಯೋಜಿಸಿದ್ದು, ಸಹರಾನ್ ಪುರದಿಂದ ತಂದಿರುವ ಮಾವಿನ ತಳಿಗೆ ಮುಖ್ಯಮಂತ್ರಿ ಯೋಗಿ ಅದಿತ್ಯನಾಥರ ಹೆಸರಿಡಲಾಗಿದೆ ಎಂದು ತಿಳಿದುಬಂದಿದೆ.
ಮಾವು ಮೇಳ ಉದ್ಘಾಟಿಸಿ ಮಾತನಾಡಿದ ಯೋಗಿ ಆದಿತ್ಯನಾಥ, ಉತ್ತರ ಪ್ರದೇಶ ದೇಶದಲ್ಲೇ ಹೆಚ್ಚು ಮಾವು ಬೆಳೆಯುವ ರಾಜ್ಯವಾಗಿದ್ದು, ಹೆಚ್ಚು ತಳಿ ಬೆಳೆಯುವ ರಾಜ್ಯವಾಗಿಯೂ ಗುರುತಿಸಿಕೊಂಡಿದೆ ಎಂದು ಮಾಹಿತಿ ನೀಡಿದರು.
ರೈತರ ಆದಾಯ ದ್ವಿಗುಣಗೊಳಿಸುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ. ಈ ದಿಸೆಯಲ್ಲಿಯೇ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಾವು ಮೇಳ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ. ಮಾವಿನ ಮೇಳದಲ್ಲಿ ಸುಮಾರು 700ಕ್ಕೂ ಅಧಿಕ ತಳಿಯ ಮಾವು ಪ್ರದರ್ಶನ ಮಾಡಲಾಯಿತು.
Leave A Reply