ಜಿತೇಂದ್ರ ಕುಂದೇಶ್ವರರಿಗೆ ನಿಸ್ಪೃಹ ಪತ್ರಕರ್ತ ತಿ.ತಾ.ಶರ್ಮ ಪತ್ರಿಕೋದ್ಯಮ ಪ್ರಶಸ್ತಿ
Posted On June 25, 2018
0
ಮಂಗಳೂರು: ವಿಶ್ವವಾಣಿಯ ವಿಶೇಷ ವರದಿಗಾರ ಜಿತೇಂದ್ರ ಕುಂದೇಶ್ವರ ಅವರಿಗೆ ನಿಸ್ಪೃಹ ಪತ್ರಕರ್ತ ತಿ.ತಾ.ಶರ್ಮ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರು ಜಯನಗರದಲ್ಲಿ ರಾಷ್ಟ್ರೋತ್ಥಾನ ಶಾರೀರಿಕ ವಿಶ್ವ ಸಂವಾದ ಕೇಂದ್ರ ವತಿಯಿಂದ ನಾರದ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ, ಸನ್ಮಾನಿಸಲಾಯಿತು. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆಗಳ ಇರುವಿಕೆ ಕುರಿತು ಮೊಟ್ಟ ಮೊದಲ ಬಾರಿಗೆ ವರದಿ ಮಾಡಿದ್ದರು. ಹಾಗೂ ಮಂಗಳೂರಿನಲ್ಲಿ ಇಂಡಿಯನ್ ಮುಜಾಹಿದ್ದೀನ್ ಕುರಿತ ಸರಣಿ ಲೇಖನಗಳ ಮೂಲಕ ಕರಾವಳಿಯಲ್ಲಿ ಬೇರೂರುತ್ತಿರುವ ಉಗ್ರವಾದ, ಭೂಗತ ಲೋಕದ, ಅಪರಾಧ ಲೋಕದ ವಿಶೇಷ ವರದಿಗಳು ಮತ್ತು ವಿಶೇಷ ಅಂಕಣಗಳಿಂದ ಜಿತೇಂದ್ರ ಕುಂದೇಶ್ವರ ಅವರು ಪರಿಚಿತರಾಗಿದ್ದಾರೆ.
Trending Now
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
December 23, 2025
ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
December 23, 2025









