ಯೋಧರೆಂದರೆ ನರೇಂದ್ರ ಮೋದಿ ಅವರಿಗೆ ಹೇಗೆ ಮನ ಮಿಡಿಯುತ್ತದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ ನೋಡಿ!
ನವದೆಹಲಿ: ನರೇಂದ್ರ ಮೊದಿ ಅವರು ಪ್ರಧಾನಿಯಾದ ಬಳಿಕ ದೇಶದ ಯೋಧರು ಹೆಚ್ಚಿನ ಸ್ವಾತಂತ್ರ್ಯ, ಭದ್ರತೆ ಸೇರಿ ಹಲವು ಸೌಲಭ್ಯ ಹೊಂದಿದ್ದಾರೆ. ಅದರಲ್ಲೂ ನರೇಂದ್ರ ಮೋದಿ ಅವರಂತೂ ಯೋಧರೆಂದರೆ ಸಾಕು ವಿಶೇಷ ಕಾಳಜಿ ಪ್ರದರ್ಶಿಸುತ್ತಾರೆ. ಅದೇ ಕಾರಣಕ್ಕೆ ನರೇಂದ್ರ ಮೋದಿ ಅವರು ಪ್ರತಿ ದೀಪಾವಳಿಯನ್ನು ಗಡಿಗೆ ತೆರಳಿ ಯೋಧರೊಂದಿಗೆ ಆಚರಿಸುತ್ತಾರೆ.
ಇಂತಹ ನರೇಂದ್ರ ಮೋದಿ ಅವರು ಈಗ ತಾವು ಯೋಧರ ಬಗ್ಗೆ ಎಂಥಹ ಕಾಳಜಿ ಎಂಬುದನ್ನು ಸ್ವಾಭಾವಿಕವಾಗಿ ವ್ಯಕ್ತಪಡಿಸಿದ ರೀತಿ ಎಲ್ಲರ ಮನಸ್ಸನ್ನೂ ಸೆಳೆಯುವಂತಿದೆ. ಆ ಮೂಲಕ ಮೋದಿ ಅವರು ಸೈನಿಕರ ಬಗ್ಗೆ ಎಂತಹ ಕಾಳಜಿ ಹೊಂದಿದ್ದಾರೆ ಎಂಬುದು ಸಾಬೀತಾಗಿದೆ.
ಹೌದು, ಸೋಮವಾರ ಹೊಸದಿಲ್ಲಿಗೆ ಸೆಶೆಲ್ಲೆಸ್ ಅಧ್ಯಕ್ಷ ಡ್ಯಾನಿ ಫೌರ್ ಆಗಮಿಸಿದ್ದು, ರಾಷ್ಟ್ರಪತಿ ಭವನದಲ್ಲಿ ಅವರಿಗೊಂದು ಗೌರವ ಸಲ್ಲಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸಹ ಉಪಸ್ಥಿತಿಯಿದ್ದರು. ಹೀಗೆ ದ್ವೀಪರಾಷ್ಟ್ರ ಅಧ್ಯಕ್ಷರಿಗೆ ಗೌರವ ಸಲ್ಲಿಸುವ ವೇಳೆ ವಾಯುಪಡೆಯ ಸಿಬ್ಬಂದಿಯೊಬ್ಬರು ಬಿಸಿಲಿನ ತಾಪ ತಾಳಲಾರದೆ ಕುಸಿದು ಬಿದ್ದಿದ್ದಾರೆ. ಬಳಿಕ ವಾಯುಪಡೆಯ ಸಿಬ್ಬಂದಿಯೇ ಅವರನ್ನು ಮೇಲೆ ಎಬ್ಬಿಸಿ, ವಿರಾಮ ನೀಡಿದ್ದಾರೆ.
ಹೀಗೆ ಸಮಾರಂಭ ಮುಗಿದ ಬಳಿಕ ಹಲವು ಗಣ್ಯರು ಕಾರ್ಯಕ್ರಮ ನಡೆದ ಸ್ಥಳದಿಂದ ನಿರ್ಗಮಿಸಿದ್ದಾರೆ. ಆದರೆ ನರೇಂದ್ರ ಮೋದಿ ಅವರು ಮಾತ್ರ ವಾಯುಪಡೆ ಸಿಬ್ಬಂದಿ ಬಳಿ ತೆರಳಿ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಅಲ್ಲದೆ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಬೇಕು ಎಂದು ಸಲಹೆ ಸಹ ನೀಡಿದ್ದಾರೆ.
ಹೇಳಿ ಒಂದು ದೇಶದ ಪ್ರಧಾನಿಯಾದವರು, ಸೇನಾ ಸಿಬ್ಬಂದಿಯೊಬ್ಬರು ಕುಸಿದು ಬಿದ್ದಿದ್ದನ್ನು ಮರೆತು ಗಣ್ಯರೊಂದಿಗೆ ತೆರಳಬಹುದಿತ್ತು. ಆದರೆ ಮೋದಿ ಅವರು ಹಾಗಲ್ಲ, ಅವರಿಗೆ ಯೋಧರ ಮೇಲೆ ಇನ್ನಿಲ್ಲದ ಪ್ರೀತಿ, ಕಾಳಜಿ. ಅದು ಆಗಾಗ ಹೀಗೆ ಸ್ವಾಭಾವಿಕವಾಗಿ ವ್ಯಕ್ತವಾಗುತ್ತದೆ.
Leave A Reply