ಬಯಲಾಯ್ತು ಕ್ರೈಸ್ತ ಪಾದ್ರಿಗಳ ಲೈಂಗಿಕ ಹಗರಣ, ಕೇರಳ ಚರ್ಚ್ ನಿಂದ ಐವರ ಅಮಾನತು!

ತಿರುವನಂತಪುರ: ಕೇರಳ ಎಂದ ತಕ್ಷಣ ನೆನಪಾಗುವುದು ಶಿಕ್ಷಣದ ಪ್ರಮಾಣ, ನಿಸರ್ಗ ಇತ್ಯಾದಿ. ಆದರೆ ಈಗ ಕೇರಳ ಎಂದ ತಕ್ಷಣ ನೆನಪಾಗುತ್ತಿರುವುದು ಹಿಂದೂ ಧರ್ಮೀಯರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವುದು ಹಾಗೂ ಕಮ್ಯೂನಿಸ್ಟರ ಹಿಂಸೆ! ಇಂತಹ ಮೂಲಭೂತವಾದಿಗಳು ತುಂಬಿರುವ ಕೇರಳದಲ್ಲಿ ಮತ್ತೊಂದು ಉದ್ಧಟತನ ತಲೆಯೆತ್ತುತ್ತಿದೆ.
ಹೌದು, ಕೇರಳದಲ್ಲಿ ಕ್ರಿಶ್ಚಿಯನ್ ಮಿಷನರಿಗಳ ಒಂದೊಂದೇ ಮುಖವಾಡಗಳು ಬಯಲಾಗುತ್ತಿವೆ. ಅದರಲ್ಲೂ ಚರ್ಚ್ ಗಳಲ್ಲಿ ಅವರು ಮಾಡುತ್ತಿರುವ ಲೈಂಗಿಕ ಹಗರಣಗಳು, ಕಿರುಕುಳಗಳು ಕ್ರೈಸ್ತ ಪಾದ್ರಿಗಳ ಮೇಲೆ ನಂಬಿಕೆಯೇ ಇಲ್ಲದಂತಾಗಿದೆ. ಕ್ರಿಸ್ತನ ಸಂದೇಶ ಮರೆತಿರುವ ಇವರು ಅನಾಚಾರಕ್ಕೆ ಮುಂದಾಗಿದ್ದಾರೆ ಎಂಬುದು ಈ ಪ್ರಕರಣದಿಂದ ಸಾಬೀತಾಗಿದೆ.
ಹೌದು, ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕೇರಳದ ಮಲಂಕಾರ ಆರ್ಥಾಡಾಕ್ಸ್ ಚರ್ಚ್ ನ ಐವರು ಪಾದ್ರಿಗಳನ್ನು ಅಮಾನತು ಮಾಡಿ ಚರ್ಚ್ ಆದೇಶ ಹೊರಡಿಸಿದೆ. ತಿರುವಳ್ಳದ ಮಹಿಳೆಗೆ ಐವರು ಪಾದ್ರಿಗಳು ಸೇರಿ ಲೈಂಗಿಕ ಕಿರುಕುಳ ನೀಡಿದ್ದು, ಇದರಲ್ಲಿ ತನ್ನದೇ ತಪ್ಪಿದೆ ಎಂದು ಒಪ್ಪಿಕೊಳ್ಳಬೇಕು ಎಂಬುದಾಗಿ ಕಿರುಕುಳ ನೀಡಿದ್ದರು ಎಂದು ತಿಳಿದುಬಂದಿದೆ.
ಈ ಕುರಿತು ಮಹಿಳೆಯ ಗಂಡ ಚರ್ಚ್ ಗೆ ದೂರು ನೀಡಿದ್ದು, ಪ್ರಾಥಮಿಕ ತನಿಖೆಯಿಂದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಚರ್ಚ್ ವಕ್ತಾರ ಪಿ.ಸಿ.ಇಲಿಯಾಸ್ ಅವರು ಐವರು ಪಾದ್ರಿಗಳನ್ನು ಅಮಾನತು ಮಾಡಿದ್ದಾರೆ.
ಲೈಂಗಿಕ ಕಿರುಕುಳ ನೀಡಿರುವ ಕುರಿತು ಮಹಿಳೆಯ ಗಂಡಿನಿಂದ ದೂರು ಬಂದಿತ್ತು. ಇದರ ಅನ್ವಯ ಆರೋಪಿಗಳ ಕುರಿತು ಪ್ರಾಥಮಿಕ ತನಿಖೆ ಕೈಗೊಂಡಿದ್ದು, ಇದಕ್ಕೂ ಮೊದಲು ಐವರನ್ನೂ ಅಮಾನತು ಮಾಡಲಾಗಿದೆ. ಕೂಲಂಕಷ ತನಿಖೆಯಿಂದ ಸತ್ಯ ಬಹಿರಂಗವಾಗಲಿದ್ದು, ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಇಲಿಯಾಸ್ ತಿಳಿಸಿದ್ದಾರೆ.
Leave A Reply