ರಾಮಮಂದಿರ ನಿರ್ಮಾಣದ ಕನಸು ಕಾಣುತ್ತಿರುವವರಿಗೆ ಶುಭ ಸುದ್ಧಿ ನೀಡಿರುವ ಯೋಗಿ ಆದಿತ್ಯನಾಥರು!
ಲಖನೌ: ದೇಶದಲ್ಲಿ ಕೋಟ್ಯಂತರ ಜನ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕನಸು ಕಾಣುತ್ತಿದ್ದಾರೆ. ರಾಮನ ನೆಲದಲ್ಲಿ ಮೊಘಲ್ ಅರಸ ಕಟ್ಟಿದ್ದ ಬಾಬ್ರೀ ಮಸೀದೆಯೇನೋ ನೆಲಸಮವಾಗಿದೆ. ಅದೇ ರೀತಿ ಅಲ್ಲೊಂದು ರಾಮಮಂದಿರ ನಿರ್ಮಾಣವಾಗಿಬಿಟ್ಟರೆ ಕೋಟಿ ಕೋಟಿ ಹಿಂದೂಗಳ ದಶಕಗಳ ಆಸೆ ಪೂರೈಸಿದಂತೆ ಆಗುತ್ತದೆ.
ಹಿಂದೂಗಳ ಇಂಥಾದ್ದೊಂದು ಮಹದಾಸೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ರೆಕ್ಕೆ-ಪುಕ್ಕ ನೀಡಿದ್ದು, 2019ರ ಲೋಕಸಭೆಗೂ ಮುನ್ನವೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ ಎಂಬರ್ಥದ ಮಾತನಾಡುವ ಮೂಲಕ ಎಲ್ಲರ ಆಸೆ, ಕನಸು ಚಿಗುರಿಸಿದ್ದಾರೆ.
ಅಯೋಧ್ಯೆಯಲ್ಲಿ ಆಯೋಜಿಸಿದ್ದ ಸಂತರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮರ್ಯಾದಾ ಪುರುಷೋತ್ತಮ ರಾಮ ಎಲ್ಲರ ಆರಾಧ್ಯ ದೈವ. ಆತನ ಕೃಪೆ ನಮ್ಮ ಇರುವವರೆಗೂ ರಾಮಮಂದಿರ ನಿರ್ಮಾಣ ಆಗೇ ಆಗುತ್ತದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.
ರಾಮಮಂದಿರ ನಿರ್ಮಾಣವಾಗುವುದರಲ್ಲಿ ಯಾವುದೇ ಸಂದೇಹ ಬೇಡ. ಈ ಕುರಿತು ಸಾಧು-ಸಂತರು ಯಾವುದೇ ಆತಂಕ, ದುಗುಡ ಇಟ್ಟುಕೊಳ್ಳುವುದು ಬೇಡ. ಇದುವರೆಗೆ ಎಲ್ಲ ಸಾಧು-ಸಂತರು ತಾಳ್ಮೆಯಿಂದ ಇದ್ದೀರಿ. ಇನ್ನೂ ಸ್ವಲ್ಪ ದಿನ ತಾಳ್ಮೆಯಿಂದ ಇರಿ. ಶೀಘ್ರವೇ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಸುಳಿವು ನೀಡಿದ್ದಾರೆ.
Leave A Reply