ಪ್ರತಿ ಮಕ್ಕಳಿಗೂ ತಿಳಿಯಲಿದೇ ಇಂದಿರಾ ಗಾಂಧಿ ಧರ್ಪದ ಆಡಳಿತ: ಪಠ್ಯಪುಸ್ತಕದಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ಕುರಿತ ಪಾಠಗಳ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಚಿಂತನೆ
ದೆಹಲಿ: ಭಾರತದ ಇತಿಹಾಸದಲ್ಲೇ ಪ್ರಜಾಪ್ರಭುತ್ವವನ್ನು ಕತ್ತಲೆಯಲ್ಲಿಟ್ಟು, ದೇಶದ ಜನರ ಮೇಲೆ ಕರಾಳ ದಿನಗಳನ್ನು ಹೇರಿದ್ದ ದಿನಗಳ ಕುರಿತು ಪಠ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಳವಡಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವಡೇಕರ್ ಹೇಳಿದ್ದಾರೆ. ಈ ಮೂಲಕ ದೇಶದಲ್ಲಿ ಸರ್ವಾಧಿಕಾರದ ಆಡಳಿತ ನಡೆಸಿದ ಇಂದಿರಾ ಗಾಂಧಿ ಕುರಿತು ಶಾಲೆ ಮಕ್ಕಳಲ್ಲೂ ತಿಳಿವಳಿಕೆ ಬರಲಿದೆ.
ಪ್ರಸ್ತುತ ಇರುವ ಪಠ್ಯಪುಸ್ತಕಗಳಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ಕುರಿತು ಕೆಲವು ಚಾಪ್ಟರ್ ಅಥವಾ ಕಾಲಮ್ ನಷ್ಟೇ ಇದೆ. ಆದರೇ ಇಡೀ ದೇಶವನ್ನೇ ಕರಾಳತೆಯ ಬಾಹು ಬಂಧನದಲ್ಲಿಟ್ಟ ದಿನಗಳ ಕುರಿತು ಪ್ರಸ್ತುತ ಪೀಳಿಗೆಗೆ ಹೆಚ್ಚಿನ ಜ್ಞಾನ ಮೂಡಿಸುವುದು ಅಗತ್ಯ. ಈ ವಿಷಯವನ್ನು ಶೀಘ್ರದಲ್ಲಿ ಕಾರ್ಯರೂಪಕ್ಕೆ ಇಳಿಸಲಾಗುವುದು ಎಂದು ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ತುರ್ತು ಪರಿಸ್ಥಿತಿ ಕುರಿತು ಮಾಡಿರುವ ‘ದೇಶದಲ್ಲಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಜನರನ್ನು ಹತ್ತಿಕ್ಕಿ, ಜನರ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದು ತುರ್ತು ಪರಿಸ್ಥಿತಿ ದಿನ’ ಎಂಬ ಟ್ವೀಟ್ ನ್ನು ರಿಟ್ವೀಟ್ ಮಾಡಿದ್ದಾರೆ. ಅಲ್ಲದೇ ತುರ್ತುಪರಿಸ್ಥಿತಿ ಭಾರತದ ಪ್ರಜಾಪ್ರಭುತ್ವನ್ನು ಕತ್ತಲಲ್ಲಿಟ್ಟು ಆಡಳಿತ ನಡೆಸಲಾಗಿತ್ತು. ಈ ವೇಳೆ ದೇಶಾದ್ಯಂತ ಲಕ್ಷಾಂತರ ಜನರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದರು. ತುರ್ತುಪರಿಸ್ಥಿತಿಯೆಂದರೇ ಲಕ್ಷಾಂತರ ಹೋರಾಟಗಾರರ ‘ಶೌರ್ಯದ ಕಥೆ ಮತ್ತು ಹೋರಾಟಗಾರರ ಉತ್ಸವ. ಕರಾಳ ದಿನಗಳಿಂದ ಭಾರತ ಹೊರ ಬಂದಿರುವುದೇ ದೊಡ್ಡ. ಇತಿಹಾಸ. ಈ ಇತಿಹಾಸವನ್ನು ಜನರಿಗೆ ಮನದಟ್ಟು ಮಾಡಲು ಪಠ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತುರ್ತು ಪರಿಸ್ಥಿತಿ ಕುರಿತ ಪಾಠಗಳನ್ನು ಅಳವಡಿಸುವ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.
Leave A Reply