ಮದರಸಾಕ್ಕೆ ಕಳುಹಿಸಿಲ್ಲ ಎಂದಮಾತ್ರಕ್ಕೆ ಮುಸ್ಲಿಂ ಮಹಿಳೆಯರಿಗೆ ಕಿರುಕುಳ, ಇದೆಂಥಾ ಅಸಹಿಷ್ಣುತೆ?
ಲಖನೌ: ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಬೊಬ್ಬೆ ಹಾಕುವವರು ಎಲ್ಲಿದ್ದಾರೆ? ನಾವು ಮುಸ್ಲಿಮರ ಕ್ಷೇಮಾಭಿವೃದ್ಧಿ ಪರ ಎನ್ನುವವರು ಎಲ್ಲಿದ್ದಾರೆ? ನಾವು ಜೀವಪರರು, ಪ್ರಗತಿಪರರು, ಬುದ್ಧಿಜೀವಿಗಳು ಎಂದು ಕರೆಸಿಕೊಳ್ಳುವವರೆಲ್ಲ ಯಾವ ಬಿಲದಲ್ಲಿ ಅಡಗಿ ಕುಳಿತಿದ್ದಾರೆ?
ಎಲ್ಲಿದ್ದೀರಿ ಮಹಿಳಾ ಆಯೋಗದ ನಾರಿಮಣಿಗಳೇ? ಈ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸುವವರು ಯಾರು? ಟೌನ್ ಹಾಲ್ ಮುಂದೆ ನಿಂತು ಧಿಕ್ಕಾರ ಕೂಗುವುದು ಬರೀ ನರೇಂದ್ರ ಮೋದಿ ಅವರ ವಿರುದ್ಧ ಮಾತ್ರವೇ? ಇಂತಹ ವಿಷಯಗಳಲ್ಲಿ ಮೂಲಭೂತವಾದಿಗಳ ವಿರುದ್ಧ ಧಿಕ್ಕಾರ ಕೂಗಲು ನಿಮ್ಮ ಬಾಯಿಯ ನರಗಳು ಸತ್ತು ಹೋಗಿವೆಯೇ?
ಹೌದು, ಉತ್ತರ ಪ್ರದೇಶದ ಮೀರತ್ ನಲ್ಲಿ ತಂದೆಯೊಬ್ಬ ತನ್ನ ನಾಲ್ವರು ಮಕ್ಕಳಿಗೆ ಮದರಸಾಕ್ಕೆ ಕಳುಹಿಸುವುದನ್ನು ನಿಲ್ಲಿಸಿದ್ದು, ಇದಕ್ಕೆ ಕುಪಿತರಾಗಿರುವ ಹಲವು ಮುಸ್ಲಿಂ ಮೂಲಭೂತವಾದಿಗಳು ಈಗ ಮಹಿಳೆಯರಿಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ. ಅತ್ತ ಮಕ್ಕಳಿಗೆ ರಕ್ಷಣೆಗೆ ಹೆಣ್ಣು ಹೆತ್ತ ತಂದ ಪರಿತಪಿಸುವಂತಾಗಿದೆ.
ಇದರಿಂದ ಬೇಸತ್ತ ನಾಲ್ವರು ಹೆಣ್ಣು ಮಕ್ಕಳ ತಂದೆ ಈಗ ನನ್ನ ಮಕ್ಕಳಿಗೆ ನೀವೇ ಭದ್ರತೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಪತ್ರ ಬರೆದಿದ್ದಾರೆ. ದಯಮಾಡಿ ನನ್ನ ನಾಲ್ಕು ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಮುಸ್ಲಿಂ ಮೂಲಭೂತವಾದಿಗಳ ಈ ಉಪಟಳದ ಕುರಿತು ನಾಲ್ವರು ಹೆಣ್ಣು ಮಕ್ಕಳು ಮಾತನಾಡಿದ್ದು, ನಾವು ಇತ್ತೀಚೆಗೆ ಮದರಸಾಕ್ಕೆ ಹೋಗುವುದನ್ನು ನಿಲ್ಲಿಸಿದ್ದೇವೆ. ಇದರಿಂದ ಕೆಲವರು ನಮ್ಮ ಮೇಲೆ ಕೆಲವರು ಕೋಪಗೊಂಡಿದ್ದು, ಮನೆಗೆ ಬಂದು ಬೆದರಿಕೆ ಹಾಕುತ್ತಿದ್ದಾರೆ. ನಮ್ಮ ಮುಖಕ್ಕೆ ಆ್ಯಸಿಡ್ ಸುರಿಯುವುದಾಗಿ ಹೆದರಿಸುತ್ತಿದ್ದಾರೆ. ಹಾಗಾಗಿ ನಮ್ಮ ತಂದೆ ಪತ್ರ ಬರೆದಿದ್ದು, ನಮಗೆ ಭದ್ರತೆ ನೀಡಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.
ಈಗ ಹೇಳಿ ಇಸ್ಲಾಂನ ಯಾವ ನಿಯಮದಲ್ಲಿ ಮುಸ್ಲಿಂ ಮಹಿಳೆಯರು ಕಡ್ಡಾಯವಾಗಿ ಮದರಸಾಗಳಿಗೆ ಹೋಗಲೇಬೇಕು ಎಂದು ಹೇಳಿದೆ? ಯಾವ ಅಲ್ಲಾ ಇದನ್ನು ಕಡ್ಡಾಯಗೊಳಿಸಿದ್ದಾನೆ? ಕುರ್ರಾನ್ ನ ಯಾವ ಅಧ್ಯಾಯದಲ್ಲಿ ಹೀಗೆ ಹೇಳಲಾಗಿದೆ? ಮದರಸಾಗಳಿಗೆ ಬರದಿದ್ದರೆ ಮುಖಕ್ಕೆ ಆ್ಯಸಿಡ್ ಎರಚುತ್ತೇನೆ ಎನ್ನುವುದು ಯಾವ ಸೀಮೆ ಮನುಷ್ಯತ್ವ ಸ್ವಾಮಿ? ಯಾರು ಉತ್ತರಿಸಬೇಕು ಇದಕ್ಕೆ? ಇಸ್ಲಾಂ ಧರ್ಮಗುರುಗಳೂ ಇವರ ಕುರಿತು ಯೋಚಿಸಬಾರದೆ? ಥೂ.
Leave A Reply