ಸರ್ದಾರ್ ಪಟೇಲ್ ರಿಗೆ ನೆಹರು ಸ್ವಾತಂತ್ರ್ಯ ನೀಡಿದ್ದರೇ, ಜಮ್ಮು ಕಾಶ್ಮೀರದ ಸ್ಥಿತಿ ಬೇರೆಯೇ ಇರುತ್ತಿತ್ತು: ಕೇಂದ್ರ ಸಚಿವ ಜೀತೇಂದ್ರ ಸಿಂಗ್
ಜಮ್ಮು: ಜಮ್ಮು ಕಾಶ್ಮೀರದಲ್ಲಿ ಪ್ರಸ್ತುತ ಪರಿಸ್ಥಿತಿ ನಿರ್ಮಾಣಕ್ಕೆ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು ಅವರೇ ಕಾರಣ. ಅಂದು ಅವರು ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರಿಗೆ ಸ್ವಾತಂತ್ರ್ಯ ನೀಡಿದ್ದರೇ ಪ್ರಸ್ತುತ ಜಮ್ಮು ಕಾಶ್ಮೀರದ ಸ್ಥಿತಿಯೇ ಬೇರೆಯಾಗಿರುತ್ತಿತ್ತು ಎಂದು ಕೇಂದ್ರ ಸಚಿವ ಜೀತೇಂದ್ರ ಸಿಂಗ್ ಕಾಂಗ್ರೆಸ್ ಮೂಲವನ್ನು ಪ್ರಶ್ನಿಸಿದ್ದಾರೆ.
ಕಣಿವೆ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳು ಮತ್ತು ಕಾಶ್ಮೀರದ ಕುರಿತು ಕಾಂಗ್ರೆಸ್ ನಾಯಕರ ದೇಶವಿರೋಧಿ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಜೀತೇಂದ್ರ ಸಿಂಗ್, ನೆಹರು ಅವರು ದೇಶದ ಇತರ ರಾಜ್ಯಗಳ ಕುರಿತು ಸರ್ದಾರ್ ಪಟೇಲ್ ರಿಗೆ ನೀಡಿದ್ದ ಸ್ವಾತಂತ್ರ್ಯ ಜಮ್ಮು ಕಾಶ್ಮೀರದ ವಿಷಯದಲ್ಲಿ ನೀಡಿದ್ದರೇ, ದೇಶದ ಇತಿಹಾಸವೇ ಬೇರೆಯಾಗುತ್ತಿತ್ತು ಅಲ್ಲದೇ ದೇಶವನ್ನು ಬಹುದಿನಗಳಿಂದ ಆಳಿದ ಕಾಂಗ್ರೆಸ್ ನ ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್ ಕಾಶ್ಮೀರ ಸಮಸ್ಯೆ ಬಗ್ಗೆ ಸರಿಯಾಗಿ ಸ್ಪಂದಿಸಲೇ ಇಲ್ಲ. ಆದ್ದರಿಂದಲೇ ಇಷ್ಟು ವರ್ಷವಾದರೂ ಕಣಿವೆಯಲ್ಲಿ ಅದೇ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತದ ಅವಿಭಾಜ್ಯ ಅಂಗವಾದ ಜಮ್ಮು ಕಾಶ್ಮೀರದ ಪ್ರದೇಶವನ್ನು ಅಕ್ರಮವಾಗಿ ವಶ ಪಡಿಸಿಕೊಳ್ಳಲು ಪಾಕಿಸ್ತಾನ ಹವಣಿಸುತ್ತಿದೆ. ಈ ಸಮಸ್ಯೆ ಜೀವಂತವಾಗಿರಲು ಅಂದು ನೆಹರು ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಹಸ್ತಕ್ಷೇಪ ಮಾಡಲು ಬಿಟ್ಟಿರಲಿಲ್ಲ. ಇದೀಗ ಆ ಸಮಸ್ಯೆ ದೈತ್ಯಾಕಾರವಾಗಿ ಬೆಳೆದು ನಿಂತಿದೆ. ನೆಹರು ಜಮ್ಮು ಕಾಶ್ಮೀರದ ಮುಖಂಡ ಶೇಖ್ ಅಬ್ದುಲ್ಲಾ ಜೊತೆ ವಿಶೇಷ ಸಂಬಂಧ ಹೊಂದಿದ್ದರು. ಅದಕ್ಕಾಗಿಯೇ ಅವರು ಜಮ್ಮು ಕಾಶ್ಮೀರದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದರು, ಆದರೆ ಅದು ದೇಶವಿರೋಧಿಯಾಗಿ ಪರಿಣಮಿಸಿತು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Leave A Reply