ಕಣಿವೆಯಲ್ಲಿ ಕೇಂದ್ರ ಸರ್ಕಾರದ ಎಫೆಕ್ಟ್: ದಶಕದಲ್ಲೇ ಅಮರನಾಥ ಯಾತ್ರಿಗಳ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿಕೆ
ದೆಹಲಿ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡಿರುವ ಬಿಗಿ ಭದ್ರತಾ ಕ್ರಮಗಳ ಮೇಲೆ ದೇಶದ ಜನರ ವಿಶ್ವಾಸ ಇಮ್ಮಡಿಯಾಗಿದ್ದು, ಅದಕ್ಕೆ ಸಾಕ್ಷಿಯಾಗಿ ಪ್ರಸಕ್ತ ಸಾಲಿನಲ್ಲಿ ಕಳೆದ ದಶಕದಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಮರನಾಥ ಯಾತ್ರೆಗೆ ಹೋಗಲು ಸಿದ್ಧರಾಗಿದ್ದಾರೆ ಎಂಬ ಶುಭ ಸುದ್ದಿ ಹೊರ ಬಿದ್ದಿದೆ.
ಅಮರನಾಥ ಯಾತ್ರೆಗೆ ಹೋಗುವ ಯಾತ್ರಿಕ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಜೂನ್ 28ಕ್ಕೆ ಅಮರನಾಥ ಯಾತ್ರೆಗೆ 2,11,994 ಜನರು ನೋಂದಣಿ ಮಾಡಿಕೊಂಡಿದ್ದಾರೆ. ಬ್ಯಾಂಕ್ ಗಳ ಮೂಲಕ ನೇರವಾಗಿ ನೋಂದಣಿ ಮಾಡಿಕೊಂಡಿದ್ದು, ಹೆಲಿಕಾಪ್ಟರ್ ಪ್ರಯಾಣಕ್ಕೂ ಬಹುತೇಕ ಜನರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಜಮ್ಮು ಕಾಶ್ಮೀರ ರಾಜ್ಯಪಾಲ ಎನ್ ಎನ್ ವೋವ್ರಾ ನೇತೃತ್ವದಲ್ಲಿ ನಡೆದ ಸಭೆ ನಂತರ ಅಧಿಕಾರಿಗಳು ಈ ಮಾಹಿತಿ ಹೊರ ಹಾಕಿದ್ದಾರೆ.
ಮಾರ್ಚ್ 1ರಂದು ನೋಂದಣಿ ಕಾರ್ಯ ಆರಂಭವಾಗಿತ್ತು. ಪಂಜಾಬ್ ನ್ಯಾಷನಲ್ ಬ್ಯಾಂಕ್, ಜಮ್ಮು ಆ್ಯಂಡ್ ಕಾಶ್ಮೀರ ಬ್ಯಾಂಕ್ ಮತ್ತು ವಾಯ್ ಇಎಸ್ ಬ್ಯಾಂಕ್ ನ ಬ್ರ್ಯಾಂಚಸ್ ಗಳ ಮೂಲಕ ದೇಶದ 32 ರಾಜ್ಯಗಳಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು ಎಂದು ರಾಜ್ಯಪಾಲರ ಕಚೇರಿ ವಕ್ತಾರ ತಿಳಿಸಿದ್ದಾರೆ. ಪ್ರತಿದಿನ 1,200 ಜನರು ನೋಂದಣಿ ಮಾಡಿಕೊಂಡಿದ್ದು, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಂಜಾಬ್, ಮಧ್ಯಪ್ರದೇಶ, ಗುಜರಾತ್, ದೆಹಲಿ, ರಾಜಸ್ಥಾನ ಮತ್ತು ಹರ್ಯಾಣದಿಂದ ಹೆಚ್ಚಿನ ಜನರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಯಾತ್ರಿಕರಿಗೆ ಎಲ್ಲ ರೀತಿಯಿಂದಲೂ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ, ಯಾತ್ರಿಕರು ಯಾವುದೇ ಕಾರಣಕ್ಕೂ ಎಜೆಂಟರ್ ಬಳಿ ನೋಂದಣಿ ಮಾಡಿಕೊಂಡು ಮೋಸ ಹೋಗಬಾರದು. ಅಧಿಕೃತವಾಗಿ ಗುರುತಿಸಿರುವ ಬ್ಯಾಂಕ್ ಬ್ರ್ಯಾಂಚ್ ಗಳಲ್ಲಿ ಮಾತ್ರ ಯಾತ್ರೆಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ಅಮರನಾಥ ದೇವಸ್ಥಾನ ಕಮೀಟಿ ಸಿಇಒ ಉಮಂಗ್ ನರೂಲ್ ತಿಳಿಸಿದ್ದಾರೆ.
Leave A Reply