ಯೋಗಿ ಆದಿತ್ಯನಾಥರೇಕೆ ಆರೆಸ್ಸೆಸ್ ಮುಖಂಡರನ್ನು ಭೇಟಿ ಮಾಡಿದ್ದು ಗೊತ್ತಾ?
ಲಖನೌ: ಯೋಗಿ ಆದಿತ್ಯನಾಥರು ಯಾವುದಾದರೂ ನಿರ್ಧಾರ ಕೈಗೊಳ್ಳಲು ಮುಂದಾದರೆ, ಯಾವುದೇ ನಡೆ ಇಡಲು ಮನಸ್ಸು ಮಾಡಿದರೆ ಇಡೀ ರಾಜ್ಯ ಏಕೆ, ದೇಶವೇ ಗಮನಹರಿಸುತ್ತದೆ. ಇತ್ತೀಚಿಗಷ್ಟೇ ಯೋಗಿ ಆದಿತ್ಯನಾಥರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದು ಖಚಿತ ಎಂದು ಹೇಳಿದ್ದು ಹಿಂದೂಗಳಲ್ಲಿ ಆಸೆ ಚಿಗುರಿತ್ತು.
ಈಗ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಭೈಯಾಜಿ ಜೋಷಿ, ಜಂಟಿ ಪ್ರಧಾನ ಕಾರ್ಯದರ್ಶಿ ಕೃಷ್ಣಗೋಪಾಲ್ ಅವರನ್ನು ಯೋಗಿ ಆದಿತ್ಯನಾಥರು ಭೇಟಿಯಾಗಿ ಚರ್ಚೆ ಮಾಡಿದ್ದಾರೆ. ಅಲ್ಲದೆ ಹಲವು ವಿಷಯಗಳ ಕುರಿತಾಗಿ ಚರ್ಚೆ ಮಾಡಿದ್ದಾರೆ ಎಂದು ತಿಳಿದುಬಂದಿದ್ದು ಕುತೂಹಲ ಮೂಡಿಸಿದೆ.
ಮುಂದಿನ ವರ್ಷ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಂಘಟನೆ, ಸಹಕಾರ, ದಲಿತರು ಹಾಗೂ ಮುಸ್ಲಿಮರ ಒಗ್ಗೂಡಿಸಿ ಪಕ್ಷಕ್ಕೆ ಬೆಂಬಲ ಯಾಚನೆ ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ ಮುಂದಿನ ವರ್ಷ ಅಲಹಾಬಾದ್ ನಲ್ಲಿ ಕುಂಭಮೇಳ ನಡೆಯುವುದರಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ ಸುಮಾರು 100ಕ್ಕೂ ಅಧಿಕ ಮುಖಂಡರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದಾರೆ. ಈ ಬಾರಿ ಕುಂಭಮೇಳ ಅದ್ಧೂರಿಯಾಗಿ ಸಹ ಆಚರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ರಾಮಮಂದಿರ ನಿರ್ಮಾಣದ ಕುರಿತು ಯೋಗಿ ಆದಿತ್ಯನಾಥರು ಉಲ್ಲೇಖಿಸಿದ್ದು, ಈಗ ಆರೆಸ್ಸೆಸ್ ಮುಖಂಡರನ್ನು ಸಹ ಭೇಟಿಯಾಗಿರುವುದು ಕುತೂಹಲ ಕೆರಳಿಸಿದೆ. ರಾಮಮಂದಿರ ನಿರ್ಮಾಣದ ಕುರಿತು ಸಹ ಯೋಗಿ ಆದಿತ್ಯನಾಥರು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
Leave A Reply