ಮೊಬೈಲ್ ಟವರ್ ಬ್ಯಾಟರಿ ಕಳವು ಪ್ರಕರಣ: ಮೂವರು ಆರೋಪಿಗಳ ಬಂಧನ
Posted On June 27, 2018
0
ಮಂಗಳೂರು: ನಗರದ ಉರ್ವ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮೊಬೈಲ್ ಟವರ್ ನ 48 ಬ್ಯಾಟರಿಗಳ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ಬಿಳಿನಿಲೆ ಗ್ರಾಮದ ಮಾಲಾಜೆ ನಿವಾಸಿ ಆನಂದ (28), ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಸಿಂಗಟಿಗೆರೆ ನಿವಾಸಿ ಕೆ.ಎನ್.ಗಿರೀಶ್ (36) ಮತ್ತು ಭಟ್ಕಳ ಜಾಲಿಕೋಡಿ ಹೋಬಳಿ ನಿವಾಸಿ ಜಗನ್ನಾಥ್ ಮುಗೇರ (32) ಬಂಧಿತ ಆರೋಪಿಗಳು.
ಬಂಧಿತರ ಬಳಿಯಿಂದ 1,20,000 ರೂ ಮೌಲ್ಯದ 48 ಬ್ಯಾಟರಿಗಳು ಮತ್ತು ಆಲ್ಟೋ ಕಾರೊಂದನ್ನು ವಶಪಡಿಸಿಕೊಳ್ಳಲಾಗಿದೆ. ಜೂನ್ 24ರಂದು ಮಂಗಳೂರಿನ ಹ್ಯಾಟ್ ಹಿಲ್ ನಲ್ಲಿರುವ ತನ್ರಾಜ್ ಮಹಲ್ ನ ಇಂಡಸ್ ಕಂಪನಿಗೆ ಸೇರಿದ 48 ಮೊಬೈಲ್ ಟವರ್ ಬ್ಯಾಟರಿಗಳನ್ನು ಖದೀಮರು ಕಳವುಗೈದಿದ್ದರು. ಬಂಧಿತ ಆರೋಪಿಗಳೆಲ್ಲರೂ ಇಂಡಸ್ ಕಂಪನಿ ಬ್ಯಾಟರಿಗಳ ನಿರ್ವಹಣೆಯ ಗುತ್ತಿಗೆ ಪಡೆದ ಯುನಿಟೆಕ್ ಸಂಸ್ಥೆಯ ಸಿಬ್ಬಂದಿಗಳು ಎಂದು ತಿಳಿದುಬಂದಿದೆ.
Trending Now
ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
January 28, 2026
ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
January 23, 2026









