ಸರ್ಜಿಕಲ್ ಸ್ಟ್ರೈಕ್ ಸಾಕ್ಷ್ಯ ಕೇಳಿದ ಅರವಿಂದ ಕೇಜ್ರಿವಾಲ್ ಎಲ್ಲಿ ಅಡಗಿ ಕುಳಿತಿದ್ದಾರೆ? ಏನೆನ್ನುತ್ತಾರೆ?
ಪ್ರಧಾನಿ ನರೇಂದ್ರ ಮೋದಿ, ಎನ್ಡಿಎ ಸರ್ಕಾರ ಹಾಗೂ ಭಾರತೀಯ ಸೈನ್ಯ ಎಂದರೆ ಈ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮುಲಾಯಂ ಸಿಂಗ್ ಯಾದವ್, ಲಾಲೂ ಪ್ರಸಾದ್ ಯಾದವ್, ಅಖಿಲೇಶ್ ಯಾದವ್, ಸಿದ್ದರಾಮಯ್ಯ, ದೇವೇಗೌಡ, ಪಿಣರಾಯಿ ವಿಜಯನ್… ಒಬ್ಬರಲ್ಲ ಇಬ್ಬರಲ್ಲ, ಇವರೆಲ್ಲರಿಗೂ ಏನೋ ಒಂದು ಅಸಡ್ಡೆ. ಹಾಗಾಗಿ ಇವರು ಈ ಮೇಲಿನ ಎಲ್ಲ ಅಂಶಗಳ ಕುರಿತು ವಿರೋಧ ವ್ಯಕ್ತಪಡಿಸುತ್ತಾರೆ. ಕೊಂಕು ನುಡಿಯುತ್ತಾರೆ.
2016ರಲ್ಲಿ ನರೇಂದ್ರ ಮೋದಿ ಅವರು ನೋಟು ನಿಷೇಧ ನಿರ್ಧಾರ ಕೈಗೊಂಡಾಗ ಇಡೀ ದೇಶದ ಜನ ನಿರ್ಧಾರ ಕೈಗೊಂಡು ಬ್ಯಾಂಕ್ ಎದುರು ನಿಂತಿದ್ದರೆ. ಈ ಸೋ ಕಾಲ್ಡ್ ಮುಖಂಡರು ಮಾತ್ರ ನಿರ್ಧಾರ ವಿರೋಧಿಸಿದರು. ದೇಶಾದ್ಯಂತ 17 ತೆರಿಗೆ ಇದ್ದವು. ದಲ್ಲಾಳಿಗಳ ಉಪಟಳ ಇತ್ತು. ಇದನ್ನು ತಡೆಯಲು ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ ಜಾರಿಗೊಳಿಸಿತು. ಇದಕ್ಕೂ ವಿರೋಧಿಸಿದರು ಈ ಮುಖಂಡರು. ಆದರೆ ಪ್ರಸ್ತುತ ಈ ನಿರ್ಧಾರಗಳಿಂದಲೇ ದೇಶದ ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತಿದೆ.
ಇನ್ನು ಸೈನ್ಯದ ಬಗ್ಗೆಯೂ ಇವರು ಮಾತನಾಡುತ್ತಾರೆ. ಭಾರತೀಯ ಸೈನಿಕರು ಅತ್ಯಾಚಾರಿಗಳು ಎನ್ನುತ್ತಾರೆ. ಮನೆಯ ಬಡತನ ಸಹಿಸದೆ, ನೌಕರಿಗಾಗಿ ಮಾತ್ರ ಸೇನೆ ಸೇರುತ್ತಾರೆ ಅಂತಾರೆ. ಭಾರತೀಯ ಸೈನಿಕರ ನಿಷ್ಠೆಯನ್ನೇ ಪ್ರಶ್ನಿಸುವವರಿದ್ದಾರೆ.
ಇದೇ ರೀತಿ 2016ರಲ್ಲಿ ಭಾರತೀಯ ಸೈನ್ಯ ಸರ್ಜಿಕಲ್ ಸ್ಟ್ರೈಕ್ ಕೈಗೊಂಡಿತು. ನರೇಂದ್ರ ಮೋದಿ ಅವರು ಇಂಥದ್ದೊಂದು ನಿರ್ಧಾರದ ಹಿಂದೆ ಇದ್ದರು. ಇಡೀ ರಾತ್ರಿ ನರೇಂದ್ರ ಮೋದಿ ನಿದ್ದೆ ಮಾಡದೆ, ಸರ್ಜಿಕಲ್ ಸ್ಟ್ರೈಕ್ ಯಶಸ್ವಿಯಾಯಿತು ಎಂದಾಗಲೇ ಮೋದಿ ಮಲಗಿದ್ದರು ಎಂಬುದು ಬಳಿಕ ತಿಳಿಯಿತು. ಅಂದು ಭಾರತೀಯ ಯೋಧರು ಬರೋಬ್ಬರಿ 38 ಉಗ್ರರನ್ನು ಹತ್ಯೆ ಮಾಡಿ ಬಂದಿದ್ದರು. ಇಡೀ ವಿಶ್ವ ಮೋದಿ ಅವರನ್ನು ಶ್ಲಾಘಿಸಿದ ದಿನ,
ಹೀಗೆ ಒಂದೇ ಒಂದು ಸರ್ಜಿಕಲ್ ಸ್ಟ್ರೈಕ್ ನಿರ್ಧಾರದಿಂದ ಭಾರತೀಯ ಸೈನ್ಯ, ಎನ್ಡಿಎ ಹಾಗೂ ನರೇಂದ್ರ ಮೋದಿ ಅವರಿಗೆ ಖ್ಯಾತಿ ತಂದುಕೊಟ್ಟಿತು. ಆದರೆ ಈ ಮೇಲಿನ ಸೋ ಕಾಲ್ಡ್ ಮುಖಂಡರು ಮಾತ್ರ ಈ ನಿರ್ಧಾರದಿಂದ ಹೊಟ್ಟೆ ಉರಿದುಕೊಂಡರು. ಕುದ್ದು ಹೋದರು, ಹೊಟ್ಟೆ ಕಿಚ್ಚು ಪಟ್ಟರು.
ಇವರಲ್ಲೇ ಅರವಿಂದ ಕೇಜ್ರಿವಾಲ್ ಒಂದು ಹೆಜ್ಜೆ ಮುಂದೆ ಹೋಗಿ, ಸರ್ಜಿಕಲ್ ಸ್ಟ್ರೈಕ್ ನಡೆದೇ ಇಲ್ಲ, ಹಾಗೊಂದು ವೇಳೆ ನಡೆದಿದ್ದರೆ ಕೇಂದ್ರ ಸರ್ಕಾರ ವೀಡಿಯೋ ತೋರಿಸಲಿ ಎಂದು ಬೊಬ್ಬೆ ಹಾಕಿದರು. ಭಾರತೀಯ ಶೌರ್ಯವನ್ನೇ ಪ್ರಶ್ನಿಸಿದರು.
ಆದರೆ ಈಗ ಅಂದು ಭಾರತೀಯ ಸೈನ್ಯ ಮಾಡಿದ ಸರ್ಜಿಕಲ್ ಸ್ಟ್ರೈಕ್ ವೀಡಿಯೋ ಬಹಿರಂಗವಾಗಿದೆ. ಸೇನೆಯ ಪ್ರಮುಖ ಯೋಧರೆ ಇದು ಸರ್ಜಿಕಲ್ ಸ್ಟ್ರೈಕ್ ವೀಡಿಯೋ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಅಂದು ಬಾಯಿಬಿಟ್ಟಿದ್ದ ಅರವಿಂದ ಕೇಜ್ರಿವಾಲ್ ಈಗ ಮಗುಮ್ಮಾಗಿದ್ದಾರೆ. ಒಂದೇ ಒಂದು ಮಾತಾಡಿಲ್ಲ. ಹೇಳಿ ಇಂಥವರ ಇಬ್ಬಂದಿತನಕ್ಕೆ ಏನು ಹೇಳೋದು?
Leave A Reply