ಮುಂಬೈ: ಖಾಸಗಿ ವಿಮಾನ ಪತನ ಐವರ ಸಾವು
Posted On June 28, 2018

ಮುಂಬೈ: ಮುಂಬೈ ಮಹಾನಗರದ ಹೊರವಲಯದಲ್ಲಿ ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದ ಲಘು ವಿಮಾನವೊಂದು ಪತನಗೊಂಡು ಐವರು ಸಾವನ್ನಪ್ಪಿದ್ದಾರೆ.
ಜುಹುನಿಂದ ಹೊರಟ 12 ಆಸನಗಳ ಈ ಖಾಸಗಿ ವಿಮಾನ ಘಾಟ್ಕೊಪುರದ ಜಾಗೃತಿ ನಗರದ ಸಮೀಪ ನೆಲಕ್ಕಪ್ಪಳಿಸಿ ಭಸ್ಮಗೊಂಡಿದೆ. ವಿಮಾನದ ಇಬ್ಬರು ಪೈಲಟ್‌ಗಳು ಹಾಗೂ ಇಬ್ಬರು ಇಂಜಿನಿಯರ್‌ಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದೇ ವೇಳೆ ವಿಮಾನದ ಕೆಳಗೆ ಸಿಕ್ಕಿ ಓರ್ವ ಪಾದಚಾರಿಯೂ ಸಾವನ್ನಪ್ಪಿದ್ದಾನೆ. ಮಹಿಳಾ ಪೈಲಟ್ ತನ್ನ ಪ್ರಾಣವನ್ನು ಒತ್ತೆಯಿಟ್ಟು ಘೋರ ದುರಂತ ಸಂಭವಿಸುವುದನ್ನು ತಪ್ಪಿಸಿದ್ದಾರೆ.
ಮಧ್ಯಾಹ್ನ ಈ ಅಪಘಾತ ಸಂಭವಿಸಿದ್ದು ಅದೃಷ್ಟವಶಾತ್ ವಿಮಾನ ನಿರ್ಮಾಣ ಹಂತದ ಕಟ್ಟಡವೊಂದರ ಮೇಲೆ ಬಿದ್ದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಪೈಲಟ್ ಸಮಯಪ್ರಜ್ಞೆಯಿಂದಾಗಿ ಈ ಜನನಿಬಿಡ ಸ್ಥಳದಲ್ಲಿ ಸಂಚರಿಸುತ್ತಿದ್ದ ಅಪಾರ ಸಂಖ್ಯೆಯ ನಾಗರಿಕರು ಅಪಾಯದಿಂದ ಪಾರಾಗಿದ್ದಾರೆ.
- Advertisement -
Trending Now
ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
February 3, 2023
ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
February 2, 2023
Leave A Reply