ರಾಜ್ಯದ ಶ್ರೀಮಂತ ದೇವಾಲಯಗಳ ಪಟ್ಟಿಯಲ್ಲಿ ಕರಾವಳಿಯ ಎರಡು ದೇವಾಲಯ, ಯಾವವು ಗೊತ್ತಾ?
ಮಂಗಳೂರು: ರಾಜ್ಯ ಮುಜರಾಯಿ ಇಲಾಖೆ ರಾಜ್ಯದ ಶ್ರೀಮಂತ ದೇವಾಲಯಗಳ ಪಟ್ಟಿ ಬಿಡುಗಡೆ ಮಾಡಿದ್ದು, ಕರಾವಳಿಯ ಎರಡು ದೇವಾಲಯಗಳು ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆಯುವ ಮೂಲಕ, ಎರಡೂ ದೇವಾಲಯ ರಾಜ್ಯದ ಶ್ರೀಮಂತ ದೇವಾಲಯ ಎನಿಸಿವೆ,
ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹುಂಡಿಯಲ್ಲಿ 95.92 ಕೋಟಿ ರೂಪಾಯಿ ಸಂಗ್ರಹವಾಗಿ ರಾಜ್ಯದ ಶ್ರೀಮಂತ ದೇವಾಲಯವಾಗಿ ಹೊರಹೊಮ್ಮಿದರೆ, 43.92 ಕೋಟಿ ರೂಪಾಯಿ ಸಂಗ್ರಹವಾದ ಕೊಲ್ಲೂರು ದೇವಾಲಯ ದ್ವಿತೀಯ ಸ್ಥಾನ ಪಡೆದಿದೆ.
30 ಕೋಟಿ ರೂಪಾಯಿ ಸಂಗ್ರಹವಾದ ಚಾಮುಂಡೇಶ್ವರಿ ತೃತೀಯ, 23.91 ಕೋಟಿ ರೂಪಾಯಿ ಸಂಗ್ರಹವಾದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಾಲಯ ನಾಲ್ಕನೇ ಹಾಗೂ 19.98 ಕೋಟಿ ರೂಪಾಯಿ ಸಂಗ್ರಹವಾದ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ ಹಾಗೂ 8 ಕೋಟಿ ರೂಪಾಯಿ ಸಂಗ್ರಹವಾದ ಬೆಂಗಳೂರಿನ ಬನಶಂಕರಿ ದೇವಾಲಯ ಆರನೇ ಸ್ಥಾನ ಪಡೆದಿದೆ.
ದೇವಸ್ಥಾನದ ಹುಂಡಿಗಳಲ್ಲಿ ಸಂಗ್ರಹವಾಗುವ ಹಣದ ಲೆಕ್ಕಾಚಾರದ ಆಧಾರದ ಮೇಲೆ ಮುಜರಾಯಿ ಇಲಾಖೆ ಶ್ರೀಮಂತ ದೇವಾಲಯಗಳ ಪಟ್ಟಿ ಬಿಡುಗಡೆ ಮಾಡುತ್ತದೆ. ಈ ಬಾರಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಇತಿಹಾಸದಲ್ಲೇ ಹೆಚ್ಚು ಹಣ ಸಂಗ್ರಹವಾಗಿದ್ದು, ದಾಖಲೆ ಬರೆದಿದೆ. ಹುಂಡಿಯ ಹಣದಲ್ಲಿ ಶೇ.60ರಷ್ಟನ್ನು ದೇಗುಲ ಅಭಿವೃದ್ಧಿಗೆ ಬಳಸಲಾಗಿದೆ ಎಂದು ಮುಜರಾಯಿ ಇಲಾಖೆ ಲೆಕ್ಕ ತೋರಿಸಿದೆ.
Leave A Reply