ನಿವೃತ್ತ ಲೆಫ್ಟನೆಂಟ್ ಜನರಲ್ ಡಿಎಸ್ ಹೂಡಾ ಘರ್ಜನೆ: ಪಾಕ್ ಗೆ ಪಾಠ ಕಲಿಸಲು ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸಿ
ದೆಹಲಿ: ಪಾಕಿಸ್ತಾನಕ್ಕೆ ಭಾರತ ಕಠಿಣ ಸಂದೇಶ ನೀಡಬೇಕಾದರೇ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸಬೇಕು. ಆಗ ಮಾತ್ರ ಪಾಕಿಸ್ತಾನ ಪಾಠ ಕಲಿಯುತ್ತದೆ ಎಂದು ನಿವೃತ್ತ ಲೆಫ್ಟನೆಂಟ್ ಜನರಲ್ ಡಿಎಸ್ ಹೂಡಾ ಘರ್ಜಿಸಿದ್ದಾರೆ. ಗಡಿನಿಯಂತ್ರಣ ರೇಖೆ ಬಳಿ ನಡೆದ ಮಹತ್ವದ ಕಾರ್ಯಾಚರಣೆಯಲ್ಲಿ ಭಾಗವಹಿಸಿರುವ ಡಿಎಸ್ ಹೂಡಾ ಅವರ ಈ ಹೇಳಿಕೆ ಭಾರಿ ಸಂಚಲನ ಮೂಡಿಸಿದೆ.
2016ರಲ್ಲಿ ಕೇಂದ್ರ ಸರ್ಕಾರ ಮತ್ತು ರಕ್ಷಣಾ ಪಡೆಗಳು ಭಯೋತ್ಪಾದಕರ ಶಿಬಿರಗಳ ಮೇಲೆ ನಡೆಸಿರುವ ದಾಳಿ ಶ್ಲಾಘನೀಯವಾದದ್ದು, ಸರ್ಜಿಕಲ್ ಸ್ಟ್ರೈಕ್ ನ ಕ್ರಮಕ್ಕೆ ನನ್ನ ಸಂಪೂರ್ಣ ಸಹಮತವಿದೆ. ಈ ಕ್ರಮಕ್ಕೆ ರಾಜಕೀಯ ಮುಖಂಡರ ನಿರ್ಧಾರ ಮುಖ್ಯವಾಗಿರಬಹುದು. ಆದರೆ ರಕ್ಷಣ ಪಡೆಗಳು ಕೈಗೊಂಡ ಕ್ರಮವೂ ನಿರ್ಣಾಯಕ. ಭಾರತಕ್ಕೆ ಅವಶ್ಯಕತೆ ಇದ್ದರೇ ಮತ್ತು ಪಾಕಿಸ್ತಾನಕ್ಕೆ ಭಾರತದ ಶಕ್ತಿಯ ಬಗ್ಗೆ ಸ್ಪಷ್ಟ, ಕಠಿಣ ಸಂದೇಶ ರವಾನಿಸಬೇಕಾದರೇ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಿದರೇ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ ಕುರಿತು ದಾಖಲೆ ಕೇಳಿದ ವಿರೋಧ ಪಕ್ಷಗಳಿಗೆ ತಕ್ಕ ಉತ್ತರ ನೀಡಿದ್ದು ಭಾರತೀಯ ಸೇನೆ, ಯಾವ ರೀತಿಯ ಕಾರ್ಯಾಚರಣೆ ನಡೆಸಿತ್ತು ಎಂಬ ಮಾಹಿತಿಯನ್ನು ಡಿಎಸ್ ಹೂಡಾ ಹಂಚಿಕೊಂಡಿದ್ದಾರೆ. ಇಡೀ ಕಾರ್ಯಾಚರಣೆಯ ಕಂಟ್ರೋಲ್ ರೂಮ್ ಉದ್ದಂಪುರದಲ್ಲಿತ್ತು. ಇಡೀ ಕಾರ್ಯಾಚರಣೆಯಲ್ಲಿ ತಲೆನೋವಾಗಿ ಪರಿಣಮಿಸಿದ್ದು ಉಗ್ರರ ತಾಣಗಳು ಪಾಕಿಸ್ತಾನದ ಸೈನಿಕ ಶಿಬಿರಗಳ ಪಕ್ಕದಲ್ಲೇ ಇರುವುದು ಭಾರಿ ಸವಾಲಾಗಿತ್ತು. ಇಂತಹ ಕಾರ್ಯಾಚರಣೆಗಳು ನಡೆದಾಗ ಮಾತ್ರ ಪಾಕಿಸ್ತಾನದಂತಹ ರಾಷ್ಟ್ರಕ್ಕೆ ಪಾಠ ಕಲಿಸಲು ಸಾಧ್ಯ. ಭಾರತಕ್ಕೆ ಸರ್ಜಿಕಲ್ ಸ್ಟ್ರೈಕ್ ನಡೆಸುವಂತಹ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ.
Leave A Reply