ಶಾಲೆಗೆ ಕುಂಕುಮ ಇಟ್ಟುಕೊಂಡು ಹೋಗಬಾರದಂತೆ, ಇದು ಕೇರಳ ಸರ್ಕಾರಿ ಶಾಲೆ ಪ್ರಾಂಶುಪಾಲನ ಉದ್ಧಟತನ
ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಧರ್ಮ ಬೋಧನೆ ಮಾಡುವಂತಿಲ್ಲ ಎಂದು ಸಂವಿಧಾನದಲ್ಲೇ ಉಲ್ಲೇಖಿಸಿದೆ. ಆದರೂ ಕಾನ್ವೆಂಟ್ ಶಾಲೆಗಳಲ್ಲಿ ಧರ್ಮ ಬೋಧನೆಯಾಗುತ್ತಿದೆ, ಎಷ್ಟೇ ಶಾಲೆ-ಕಾಲೇಜುಗಳಲ್ಲಿ ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸಿಕೊಂಡು ಹೋಗುತ್ತಾರೆ. ಆದರೆ ಈ ಕುರಿತು ಮಾತನಾಡಿದರೆ ಕೋಮುವಾದಿ ಎನ್ನುತ್ತಾರೆ, ಮಾಧ್ಯಮಗಳೂ ಈ ವಿಷಯದಲ್ಲಿ ಸುಮ್ಮನಾಗುತ್ತವೆ.
ಹೀಗೆ ಕೇರಳದಲ್ಲಿ ಯಾವಾಗಲೂ ಹಿಂದೂಗಳೇ ಟಾರ್ಗೆಟ್. ಈಗ ಇಂಥದ್ದೊಂದು ಉದ್ಧಟತನದ ಪ್ರಕರಣ ಸುದ್ದಿಯಾಗಿದ್ದು, ಕೇರಳದ ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳು ಹಣೆಗೆ ಕುಂಕುಮ ಇಟ್ಟುಕೊಂಡು, ಕೈಯಲ್ಲಿ ಪವಿತ್ರ ದಾರದ ಎಳೆಗಳನ್ನು ಕಟ್ಟಿಕೊಂಡು ಬರಬಾರದು ಎಂದು ಶಾಲೆ ಪ್ರಾಂಶುಪಾಲ ಅಧಿಸೂಚನೆ ಹೊರಡಿಸುವ ಮೂಲಕ ಉದ್ಧಟತನ ತೋರಿದ್ದಾರೆ.
ಹೌದು, ಕೇರಳದ ಪಲಕ್ಕಾಡ್ ಜಿಲ್ಲೆಯ ಸರ್ಕಾರಿ ಶಾಲೆಯ ಪ್ರಾಂಶುಪಾಲ ಈ ಆದೇಶ ಹೊರಡಿಸಿದ್ದು, ಹಣೆಗೆ ಕುಂಕುಮ ಇಟ್ಟುಕೊಂಡು ಬರುವುದು ಹಾಗೂ ಕೈಗೆ ದಾರ ಕಟ್ಟಿಕೊಂಡು ಬರುವುದು ಧಾರ್ಮಿಕ ಸಂಕೇತವಾಗಿದ್ದು, ಇವುಗಳನ್ನು ಧರಿಸಿ ಶಾಲೆಗೆ ಬರುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.
ಅಷ್ಟೇ ಅಲ್ಲ, ಒಂದು ವೇಳೆ ಕುಂಕುಮ ಇಟ್ಟುಕೊಂಡು, ಕೈಗೆ ದಾರ ಕಟ್ಟಿಕೊಂಡು ಶಾಲೆಗೆ ಬಂದರೆ ಶಾಲೆಯಿಂದಲೇ ಹೊರಹಾಕುವುದಾಗಿ ಎಚ್ಚರಿಸಿದ್ದಾರೆ. ಇದಕ್ಕೆ ಪೋಷಕರು ಹಾಗೂ ಹಲವು ಸಂಘಟನೆಗಳ ವಿರೋಧ ವ್ಯಕ್ತವಾಗಿದೆ. ಇಷ್ಟಾದರೂ ಈ ಪ್ರಾಂಶುಪಾಲನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಮಾಧ್ಯಮಗಳಲ್ಲೂ ಸುದ್ದಿಯಾಗಿಲ್ಲ. ಎಂಥ ದುರಂತವಲ್ಲವೇ ಇದು?
Leave A Reply