ಜಮ್ಮು-ಕಾಶ್ಮೀರದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 24 ಗೋವುಗಳ ರಕ್ಷಣೆ ಮಾಡಿದ ಗೋ ಪ್ರೇಮಿಗಳು
ದೇಶದಲ್ಲಿ ಅಕ್ರಮವಾಗಿ ಗೋವುಗಳ ಸಾಗಣೆ ದಿನೇದಿನೆ ಜಾಸ್ತಿಯಾಗುತ್ತಿದ್ದು, ಅದಕ್ಕೆ ಕಡಿವಾಣ ಹಾಕುವವರೇ ಇಲ್ಲದಂತಾಗಿದೆ. ಅತ್ತ ಹಿಂದೂಗಳು ಗೋವುಗಳ ಸಾಗಣೆ ತಡೆಯುವಲ್ಲಿ ಸ್ವಲ್ಪ ಚಟುವಟಿಕೆ ಆರಂಭಿಸಿದರೂ, ಇದು ದೌರ್ಜನ್ಯ ಎನ್ನುತ್ತಾರೆ. ಆದರೆ ಅಕ್ರಮವಾಗಿ ಗೋವು ಸಾಗಿಸುವವರಿಗೆ ಮಾತ್ರ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಅಷ್ಟರಮಟ್ಟಿಗೆ ನಮ್ಮ ಪೊಲೀಸರು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಾರೆ.
ಹಾಗಂತ ಗೋವುಗಳ ರಕ್ಷಣೆ ಏನೂ ನಿಂತಿಲ್ಲ. ಹಿಂದೂಗಳು ಎಲ್ಲೇ ಗೋವುಗಳನ್ನು ಅಕ್ರಮವಾಗಿ ಸಾಗಣೆ ಮಾಡಿದರೂ ನೆರವಿಗೆ ಧಾವಿಸುತ್ತಾರೆ ಎಂಬದಕ್ಕೆ ಜಮ್ಮು ಕಾಶ್ಮೀರದಲ್ಲಿ ಸಾಕ್ಷಿ ದೊರೆತಿದ್ದು, ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 24 ಗೋವುಗಳನ್ನು ರಕ್ಷಣೆ ಮಾಡಲಾಗಿದೆ.
ಹೌದು, ಶ್ರೀನಗರದ ರಂಬನ್ ಜಿಲ್ಲೆಯಲ್ಲಿ ಅಕ್ರಮವಾಗಿ ಟ್ರಕ್ ನಲ್ಲಿ ಗೋವುಗಳನ್ನು ಸಾಗಿಸುತ್ತಿದ್ದು, ಹಲವು ಜನರ ಗುಂಪು ದಾಳಿ ಮಾಡಿ ಗೋವುಗಳನ್ನು ರಕ್ಷಣೆ ಮಾಡಿದ್ದಾರೆ, ಹಲವರ ಗುಂಪು ಕಾಣುತ್ತಲೇ ಟ್ರಕ್ ಚಾಲಕ ಪರಾರಿಯಾಗಿದ್ದು, ಇವುಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿತ್ತು ಎಂಬುದು ದೃಢವಾಗಿದೆ ಎಂದು ತಿಳಿದುಬಂದಿದೆ.
ಅಷ್ಟೇ ಅಲ್ಲದೆ, ಗೋವುಗಳ ಸಾಗಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಜನ, ಟ್ರಕ್ ನಲ್ಲಿದ್ದ ಗೋವುಗಳನ್ನು ಕೆಳಗೆ ಇಳಿಸಿ, ಟ್ರಕ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಕೆಲ ಹೊತ್ತು ರಸ್ತೆಯಲ್ಲಿ ಸಂಚಾರ ದಟ್ಟಣೆ ಸಹ ಉಂಟಾಗಿತ್ತು ಎಂದು ಮೂಲಗಳು ತಿಳಿಸಿವೆ.
Leave A Reply