ಮುಸ್ಲಿಂ ರಾಷ್ಟ್ರ ಸೌದಿ ಅರೇಬಿಯಾದಿಂದ ಕಾರು ಚಾಲನಾ ಪರವಾನಗಿ ಪಡೆದ ಭಾರತದ ಮೊದಲ ಮಹಿಳೆ ಯಾರು ಗೊತ್ತಾ?
ಸೌದಿ ಅರೇಬಿಯಾ ಇತ್ತೀಚೆಗೆ ಮೆಲ್ಲಗೆ ಬದಲಾಗುತ್ತಿದೆ. ಅದರಲ್ಲೂ ಮುಸ್ಲಿಂ ಮಹಿಳೆಯರಿಗೆ ಸ್ವಾತಂತ್ರ್ಯ ಸಿಗುತ್ತಿದೆ. ಮುಸ್ಲಿಂ ಮಹಿಳೆಯರು ಎಂದರೆ ಮನೆಯಲ್ಲಿ ಬಿದ್ದಿರುವವರು ಎಂಬ ಮಾತು ಬದಲಾಗುತ್ತಿದೆ. ಇದಕ್ಕೆ ಈ ಬಾರಿಯ ಯೋಗ ದಿನಾಚರಣೆಯಲ್ಲಿ ಹಲವು ಮಹಿಳೆಯರ ನೇತೃತ್ವದಲ್ಲೇ ಕಾರ್ಯಕ್ರಮ ಆಯೋಜಿಸಿದ್ದು ಇದಕ್ಕೆ ಸಾಕ್ಷಿಯಾಗಿದೆ.
ಇದೇ ದಿಸೆಯಲ್ಲಿ ಇತ್ತೀಚೆಗೆ ಸೌದಿ ಅರೇಬಿಯಾದಲ್ಲಿ ಮುಸ್ಲಿಂ ಮಹಿಳೆಯರು ಸೇರಿ ಎಲ್ಲರೂ ಕಾರು ಚಲಾಯಿಬಹುದು ಎಂಬ ಅನುಮತಿ ಸಿಕ್ಕಿದೆ. ಅದರಂತೆ ಹಲವು ಮಹಿಳೆಯರು ಕಾರು ಚಾಲನಾ ಪರವಾನಗಿ ಪಡೆದಿದ್ದಾರೆ. ಹೀಗೆ ಕಾರು ಚಾಲನೆ ಪಡೆದವರಲ್ಲಿ ಭಾರತೀಯ ಮಹಿಳೆಯರು ಇದ್ದಾರೆ ಎಂಬುದು ಹೆಮ್ಮೆಯ ಸಂಗತಿ.
ಅದರಲ್ಲೂ ಕೇರಳದ ಪಠಣಂತಿಟ್ಟ ಜಿಲ್ಲೆಯ ಸರಮ್ಮ ಥಾಮಸ್ ಸೌದಿ ಅರೇಬಿಯಾದಿಂದ ಕಾರು ಚಾಲನಾ ಪರವಾನಗಿ ಪಡೆದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೌದಿ ಅರೇಬಿಯಾ ಸರ್ಕಾರದಿಂದ ನಡೆಸುವ ಕಾರು ಚಾಲನಾ ಪರೀಕ್ಷೆಯಲ್ಲಿ ಮಹಿಳೆ ಉತ್ತೀರ್ಣರಾಗಿದ್ದು, ಪರವಾನಗಿ ಪಡೆದಿದ್ದಾರೆ. ಆ ಮೂಲಕ ಸೌದಿ ಅರೇಬಿಯಾದಂಥ ಮುಸ್ಲಿಂ ರಾಷ್ಟ್ರದಿಂದ ಕಾರು ಚಾಲನಾ ಪರವಾನಗಿ ಪಡೆದ ದೇಶದ ಮೊದಲ ಮಹಿಳೆ ಎಂದು ಖ್ಯಾತಿಯಾಗಿದ್ದಾರೆ.
ಬರೀ ತಮ್ಮ ಕಾರು ವಾಹನ ಚಾಲನೆ ಅಲ್ಲ, ಮುಂದಿನ ದಿನಮಾನಗಳಲ್ಲಿ ಮಹಿಳೆಯರು ಓಲಾ, ಊಬರ್ ನಂತಹ ಕಾರುಗಳನ್ನು ಸಹ ಚಾಲನೆ ಮಾಡಲು ಅನುಮತಿ ನೀಡುವುದಾಗಿ ಸರ್ಕಾರ ತಿಳಿಸಿದೆ, ಅಲ್ಲದೆ ಕಾರು ಚಾಲನೆ ಮಾಡಲು ತರಬೇತಿ ಸಹ ನೀಡುತ್ತದೆ ಎಂದು ತಿಳಿದುಬಂದಿದೆ.
Leave A Reply