ದೇವಾಲಯದ ಆವರಣ ಗೋಡೆ ಕುಸಿತ: ಎಂ.ಕಾಂ ವಿದ್ಯಾರ್ಥಿನಿಯ ಸಾವು
Posted On June 30, 2018

ಕುಂದಾಪುರ: ದೇವಾಲಯದ ಆವರಣ ಗೋಡೆ ಕುಸಿದು ಬಿದ್ದ ಪರಿಣಾಮ ವಿದ್ಯಾರ್ಥಿನಿ ಸಾವನ್ನಪ್ಪಿದ ಅವಘಡ ಬೈಂದೂರಿ ಉಳ್ಳೂರಿಲ್ಲಿ ನಡೆದಿದೆ.
ಧನ್ಯಾ.ಕೆ (೨೨) ಸಾವನ್ನಪ್ಪಿದ ಎಂಎಸ್ಸಿ ವಿದ್ಯಾರ್ಥಿನಿ.ಈಕೆ ಬೆಳಿಗ್ಗೆ ಪ್ರತಿನಿತ್ಯ ಮನೆ ಹತ್ತಿರದ ದೈವಸ್ಥಾನಕ್ಕೆ ಬಂದು ಕೈಮುಗಿದುಕೊಂಡು ಹೋಗುವ ಅಭ್ಯಾಸವನ್ನು ಇಟ್ಟುಕೊಂಡಿದ್ದರು. ಈಕೆ ಕೈ ಮುಗಿದು ಮನೆಗೆ ತೆರಳುವಾಗ ಭಾರಿ ಮಳೆಯಿಂದ ದೈವಸ್ಥಾನದ ಆವರಣದಲ್ಲಿ ನೀರು ತುಂಬಿಕೊಂಡಿದ್ದು, ಇದರಿಂದ ಆವರಣದ ಗೋಡೆ ಕುಸಿದು ಈಕೆಯ ಮೇಲೆ ಬಿದ್ದಿದೆ.
ಘಟನಾ ಸ್ಥಳಕ್ಕೆ ಬೈಂದೂರು ಪೊಲೀಸರು ಹಾಗೂ ಬೈಂದೂರು ತಹಶೀಲ್ದಾರ ಪುರಂದರ ಹೆಗಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತಪಟ್ಟ ವಿದ್ಯಾರ್ಥಿನಿಯ ಮೃತದೇಹವನ್ನು ಬೈಂದೂರು ಶವಗಾರದಲ್ಲಿ ಇರಿಸಲಾಗಿದೆ.
- Advertisement -
Trending Now
ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
March 21, 2023
ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
March 20, 2023
Leave A Reply