ಅಡಿಕೆ ತೋಟದಲ್ಲಿ ಕುಸಿದು ಬಿದ್ದು ಯುವಕ ಮೃತ್ಯು
Posted On June 30, 2018

ಪುತ್ತೂರು: ಪುತ್ತೂರು ತಾಲೂಕಿನ ಕಡಬ ಸಮೀಪದ ಐತ್ತೂರಿನಲ್ಲಿ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ.
ಮೃತ ಯುವಕನನ್ನು ಐತ್ತೂರು ಗ್ರಾಮದ ಕೆರ್ಮಾಯಿ ನಿವಾಸಿ ದೇವಸ್ಯ ಎಂಬವರ ಪುತ್ರ ಪ್ರಿನ್ಸ್ ಪಿ.ಡಿ.(23) ಎಂದು ಗುರುತಿಸಲಾಗಿದೆ.
ಈತ ಕೆರ್ಮಾಯಿ ಸೈಂಟ್ ಮೇರೀಸ್ ಚರ್ಚಿನ ತೋಟದಲ್ಲಿ ಕೂಲಿ ಕೆಲಸದಲ್ಲಿ ನಿರತನಾಗಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ಅಡಿಕೆ ಮರದ ಗುಂಡಿಗೆ ಬಿದ್ದಿದ್ದಾನೆ ಎನ್ನಲಾಗಿದೆ. ಕಡಬ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -
Trending Now
ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
March 29, 2023
ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
March 27, 2023
Leave A Reply