ಗಡಿಯಷ್ಟೇ ಅಲ್ಲ ಪವಿತ್ರ ಗಂಗಾ ನದಿ ಕಾಯಲೂ ಸೈನಿಕರು ಸಿದ್ಧ, ಗಂಗಾ ರಕ್ಷಣೆಗೆ ನಿವೃತ್ತ ಯೋಧರ ಟಾಸ್ಟ್ ಫೋರ್ಸ್

ದೆಹಲಿ: ಭಾರತೀಯ ಜೀವನದಿ, ಹಿಂದೂಗಳ ಶ್ರದ್ಧಾ ಭಕ್ತಿಯ ಪುಣ್ಯ ನದಿ ಗಂಗಾ ನದಿಯನ್ನು ಮಾಲಿನ್ಯದಿಂದ ರಕ್ಷಿಸಲು ಭಾರತೀಯ ರಕ್ಷಣಾ ಪಡೆಯ ನಿವೃತ್ತ ಯೋಧರು ಮುಂದಾಗಿದ್ದಾರೆ. ವಾರಾಣಾಸಿ, ಪ್ರಯಾಗ ಹಾಗೂ ಕಾನ್ಪುರದಲ್ಲಿ ಗಂಗಾ ನದಿ ತಟದಲ್ಲಿ ಕಸ ಹಾಕುವವರಿಂದ ನದಿಯನ್ನು ರಕ್ಷಿಸಲು ಭಾರತೀಯ ಸೇನೆ ವಿಶೇಷ ಟಾಸ್ಕ್ ಫೋರ್ಸ್ ರಚಿಸಿದ್ದು, ಗಂಗಾ ಟಾಸ್ಕ್ ಫೋರ್ಸ್ ಎಂದು ನಾಮಕರಣ ಮಾಡಲಾಗಿದೆ.
ಗಂಗಾ ಟಾಸ್ಕ್ ಫೋರ್ಸ್‌ನಲ್ಲಿ 532 ಮಾಜಿ ಯೋಧರು ಗಂಗೆಯ ರಕ್ಷಣೆಯಲ್ಲಿ ನಿರತರಾಗಿರಲಿದ್ದಾರೆ. ಆರಂಭದಲ್ಲಿ ಪ್ರಯಾಗದಲ್ಲಿ 200 ನಿವೃತ್ತ ಯೋಧರಿಗೆ ಈ ಕುರಿತು ವಿಶೇಷ ತರಬೇತಿ ನೀಡಲಾಗುತ್ತಿದೆ. ಗಂಗಾ ನದಿಯ ಮಾಲೀನ್ಯವನ್ನು ರಕ್ಷಿಸಲು ಮೂರು ವರ್ಷ ಕಾರ್ಯ ನಿರ್ವಹಿಸಲಿದ್ದಾರೆ.
ಕಠಿಣ ಪರಿಸ್ಥಿತಿಗಳಲ್ಲಿ ಸೇವೆ ಸಲ್ಲಿಸಿರುವ ಮಾಜಿ ಯೋಧರನ್ನು ಈ ಕೆಲಸಕ್ಕೆ ನೇಮಿಸಿಕೊಳ್ಳುವ ಸ್ವಾಭಾವಿಕ ಆಯ್ಕೆಯಾಗಿದೆ. ಗಂಗಾ ಶುದ್ಧೀಕರಣದಲ್ಲಿ ಹೆಚ್ಚಿನ ಜನರನ್ನು ಸೇರಿಸಿಕೊಳ್ಳುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ. ಮಣ್ಣಿನ ಸವೆತ ತಡೆಗಟ್ಟಲು ದಡದಲ್ಲಿ ಮರ ನೆಡುವುದರಲ್ಲೂ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಗಂಗಾ ಶುದ್ಧೀಕರಣ ಅಭಿಯಾನದ ನಿರ್ದೇಶಕ ರಾಜೀವ್ ರಂಜನ್ ಮಿಶ್ರಾ ತಿಳಿಸಿದ್ದಾರೆ.
ಗಂಗಾ ನದಿ ರಕ್ಷಣೆ ಉದ್ದೇಶದಿಂದ ಭಾರತೀಯ ಸೇನೆಯ 9 ಅಧಿಕಾರಿಗಳು ಹಾಗೂ 29 ಜೆಸಿಒಗಳು ಸೇರಿ 532 ಮಾಜಿ ಸೈನಿಕರನ್ನೊಳಗೊಂಡ ಗಂಗಾ ಟಾಸ್ಕರ್ ಫೋರ್ಸ್’ ಹೆಸರಿನ ಬಟಾಲಿಯನ್ ರಚಿಸಲಾಗಿದೆ. ಯೋಧರ ನೇಮಕದಿಂದ ಯಾತ್ರಾರ್ಥಿಗಳಲ್ಲಿ ಶಿಸ್ತು ಮೂಡಲಿದೆ ಎಂದು ರಂಜನ್ ಮಿಶ್ರಾ ತಿಳಿಸಿದ್ದಾರೆ.
Leave A Reply