ತಾಯಿ-ಮಗ ನಾಪತ್ತೆ: ನಾಪತ್ತೆಗೂ ಮುನ್ನ ತಾಯಿ ಮಾಡಿದ್ದೇನು?
Posted On June 30, 2018

ಉಡುಪಿ : ಕೋಟೇಶ್ವರ ಅಂಕದಕಟ್ಟೆಯ ಎನ್ಆರ್ಐ ಅಪಾರ್ಟ್ ಮೆಂಟ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ತಾಯಿ-ಮಗ ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಾಪತ್ತೆಯಾದವರು ರಂಜೀತ್ ಸಿಂಗ್ ಎಂಬುವವರ ಪತ್ನಿ ಕುಂತಿದೇವಿ(28) ಹಾಗೂ ಮಗ ಸನ್ನಿ (7) ಎಂದು ಗುರುತಿಸಲಾಗಿದ್ದು, ಇವರು ಮೂಲತಃ ಮಧ್ಯ ಪ್ರದೇಶದವರು ಎಂದು ತಿಳಿದು ಬಂದಿದೆ. ನಾಪತ್ತೆಯಾದ ಮಹಿಳೆ ಕುಂತಿದೇವಿ, ಮಗ ಸನ್ನಿ ಓದುತ್ತಿದ್ದ ಸೈಂಟ್ ಪಿಯೂಸ್ ಆಂಗ್ಲ ಮಾಧ್ಯಮ ಶಾಲೆಗೆ ಹೋಗಿ ತನ್ನ ಗಂಡನಿಗೆ ಬೆಂಗಳೂರಿನಲ್ಲಿ ಅಪಘಾತವಾಗಿದೆ ಎಂದು ಶಿಕ್ಷಕಿಯ ಬಳಿ ಸುಳ್ಳು ಹೇಳಿ ಕರೆದುಕೊಂಡು ಹೋಗಿದ್ದಾಳೆ. ಶಾಲೆಯಿಂದ ಮಗನನ್ನು ಕರೆದುಕೊಂಡು ಹೋದ ಹೆಂಡತಿ ಇದುವರೆಗೂ ಪತ್ತೆಯಾಗಿಲ್ಲ ಎಂದು ಪತಿ ರಂಜೀತ್ ಸಿಂಗ್ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -
Leave A Reply