• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ನಿಖಾ ಹಲಾಲ್, ಬಹುಪತ್ನಿತ್ವಕ್ಕೆ ಬ್ರೇಕ್ ಹಾಕುವ ನಿರ್ಧಾರಕ್ಕೆ ಕೇಂದ್ರ ಸರ್ಕಾರದ ಬೆಂಬಲ

TNN Correspondent Posted On June 30, 2018
0


0
Shares
  • Share On Facebook
  • Tweet It

ದೆಹಲಿ:  ಅಸಂವಿಧಾನಿಕ ಪದ್ಧತಿಗಳಿಗೆ ಕೊನೆ ಹಾಡಲು ಸಿದ್ಧವಾಗಿರುವ ಕೇಂದ್ರ ಸರ್ಕಾರ ಇತ್ತೀಚೆಗೆ ಮುಸ್ಲಿಂ ಧರ್ಮದಲ್ಲಿದ್ದ ತ್ರಿವಳಿ ತಲಾಖ್ ಪದ್ಧತಿ ನಿಷೇಧಕ್ಕೆ ಮುಂದಾಗಿ, ನಿಯಮ ರೂಪಿಸಿತ್ತು. ಇದೀಗ ಅದೇ ನಿಟ್ಟಿನಲ್ಲಿ ಮತ್ತೊಂದು ದೃಢ ನಿರ್ಧಾರ ಕೈಗೊಂಡಿದ್ದು ಮುಸ್ಲಿಂ ಧರ್ಮದಲ್ಲಿರುವ ಬಹುಪತ್ನಿತ್ವ ಮತ್ತು ನಿಖಾ ಹಲಾಲ್ ನಿಯಮಗಳ ವಿರುದ್ಧ ಅರ್ಜಿ ಸಲ್ಲಿಸಿರುವವರ ಬೆಂಬಲಕ್ಕೆ ಕೇಂದ್ರ ಸರ್ಕಾರ ನಿಂತಿದೆ. ಈ ಮೂಲಕ  ಕೇಂದ್ರ ಸರ್ಕಾರ ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣೆಗೆ ಮುಂದಾಗಿದೆ.

ತ್ರಿವಳಿ ತಲಾಖ್ ವಿರುದ್ಧ ಆಗಸ್ಟ್ ನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿ, ಅನಿಷ್ಠ ಪದ್ಧತಿಯನ್ನು ನಿಷೇಧಕ್ಕೆ ಕಾನೂನು ಜಾರಿಗೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತುಲ ಇದೀಗ ಬಹುಪತ್ನಿತ್ವ ಹಾಗೂ ನಿಖಾ ಹಲಾಲ್ ಪ್ರಶ್ನಿಸಿ ಅರ್ಜಿ ಸಲ್ಲಿಸುವವರಿಗೆ ಬೆಂಬಲ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

ವಿಚ್ಛೇದಿತ ಮುಸ್ಲಿಂ ಮಹಿಳೆ ತನ್ನ ಪತಿಯೊಂದಿಗೆ ಮತ್ತೊಮ್ಮೆ ಒಂದಾಗಬೇಕೆಂದು ಇಚ್ಛಸಿದಲ್ಲಿ, ಮತ್ತೊಬ್ಬನನ್ನು ವಿವಾಹವಾಗಿ, ಆತನೊಂದಿಗೆ ದೈಹಿಕವಾಗಿ ಕೂಡಿ, ವಿಚ್ಛೇದನ ಪಡೆದ ನಂತರ ಸೇರಬಹುದು ಎಂದು ಹೇಳುವ ನಿಖಾ ಹಲಾಲ್ ನಿಯಮದ ಕುರಿತು ಹಲವು ವಿವಾದಗಳಿವೆ. ಈ ಕುರಿತು ಮುಸ್ಲಿಂ ಮೌಲ್ವಿಗಳು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಮಹಿಳಾ ಕಾರ್ಯಕರ್ತರು ನಿಖಾ ಹಲಾಲ್ ಮತ್ತು ಬಹುಪತ್ನಿತ್ವ ಪದ್ಧತಿಯನ್ನು ನಿಷೇಧಿಸಬೇಕು ಎಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಗಳನ್ನು ಆಲಿಸುವುದಾಗಿ ಹೇಳಿದ್ದ ಸುಪ್ರೀಂ ಕೋರ್ಟ್‌ ತಿಳಿಸಿದೆ.  ಈ ಕುರಿತು ಕೇಂದ್ರ ಸರ್ಕಾರ ಹಾಗೂ ಕಾನೂನು ಇಲಾಖೆಗೆ ನೋಟಿಸ್ ನೀಡಿದೆ.

0
Shares
  • Share On Facebook
  • Tweet It




Trending Now
ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
Tulunadu News March 27, 2026
ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
Tulunadu News March 20, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
  • Popular Posts

    • 1
      ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!

  • Privacy Policy
  • Contact
© Tulunadu Infomedia.

Press enter/return to begin your search