ಉರ್ದುವಿನಲ್ಲಿ ರಾಮಾಯಣ ಬರೆದ ಈ ಮುಸ್ಲಿಂ ಮಹಿಳೆ ಹಿಂದೂಗಳ ಹೃದಯವನ್ನೂ ಗೆದ್ದಳು!
ದೇಶದಲ್ಲಿ ಹಿಂದೂಗಳು ಎಂದರೆ ದ್ವೇಷ ಸಾಧಿಸುವ, ಲವ್ ಜಿಹಾದ್ ಮೂಲಕ ಹಿಂದೂ ಧರ್ಮೀಯರನ್ನು ಮತಾಂತರ ಮಾಡುವ, ಗಲಭೆಗೆ ಪ್ರಚೋದಿಸುವ ಇಸ್ಲಾಂ ಮೂಲಭೂತವಾದಿಗಳಿದ್ದಾರೆ. ಅಲ್ಲದೆ ಹಿಂದೂ ಧರ್ಮಗ್ರಂಥಗಳನ್ನು ದ್ವೇಷಿಸುವ, ರಾಮನೇ ಇಲ್ಲ ಎನ್ನುವ, ಹಿಂದೂಗಳು ಕೋಮುವಾದಿಗಳು ಎನ್ನುವ ಮತಿಗೇಡಿಗಳೂ ಇದ್ದಾರೆ.
ಆದರೆ ಕೆಲವು ಮುಸ್ಲಿಮರಿಗೆ ಮಾತ್ರ ಹಿಂದೂ ಧರ್ಮ ಶಾಂತಿಯನ್ನು ಸಾರುವ ಹಾಗೂ ಅದನ್ನೇ ಪಾಲಿಸುವ, ಸೌಹಾರ್ದತೆ ಹೊಂದಿರುವ ರಾಷ್ಟ್ರ ಎಂಬುದು ಗೊತ್ತಾಗಿದೆ. ಅಲ್ಲದೆ ಅವರು ಹಿಂದೂಗಳ ಜತೆ ಉತ್ತಮವಾಗಿಯೂ ಇದ್ದಾರೆ, ನಮ್ಮ ಆಚರಣೆಗಳನ್ನೂ ಆಚರಿಸುತ್ತಾರೆ.
ಹೌದು, ಉತ್ತರ ಪ್ರದೇಶದ ಪ್ರೇಮ್ ನಗರದ ಡಾ.ಮಾಹಿ ತಲಾತ್ ಸಿದ್ಧಿಕಿ ಅವರು ಉರ್ದು ಭಾಷೆಯಲ್ಲಿ ರಾಮಾಯಣ ಪುಸ್ತಕ ಬರೆದಿದ್ದು, ಈಗ ಹಿಂದೂಗಳ ಮೆಚ್ಚುಗೆಗೆ ಪಾತ್ರವಾಗಿದೆ. ಮುಸ್ಲಿಮರು ಹಾಗೂ ಉರ್ದು ಭಾಷೆ ಬರುವವರಿಗೂ ರಾಮಾಯಣದ ಸಾರ ತಿಳಿಯಲಿ ಎಂದು ಸಿದ್ಧಿಕಿ ಪುಸ್ತಕ ಬರೆದಿದ್ದು, ಇವರು ಇದಕ್ಕಾಗಿ ಒಂದೂವರೆ ವರ್ಷ ಸಮಯ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಮಾತನಾಡಿರುವ ಡಾ.ಮಾಹಿ ತಲಾತ್ ಸಿದ್ಧಿಕಿ, ರಾಮಾಯಣ ಪುಸ್ತಕದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಹೋದರತ್ವದ ಕುರಿತು ಉತ್ತಮ ಸಂದೇಶಗಳಿವೆ. ಪುಸ್ತಕ ಬರೆಯಲು ನಾನು ಮೂಲ ಪುಸ್ತಕವನ್ನು ಓದಿದೆ. ನನ್ನ ಮನಸ್ಸಲ್ಲಿ ಶಾಂತಿ ಮೂಡಿತು. ಉತ್ತಮ ಸಂದೇಶಗಳಿವೆ ಎನಿಸಿತು. ಹಾಗಾಗಿ ಉರ್ದುವಿನಲ್ಲಿ ಬರೆದೆ. ಎಲ್ಲರೂ ಪುಸ್ತಕ ಓದಬೇಕು ಎಂದಿದ್ದಾರೆ.
Leave A Reply