13 ಬಾರಿ ಅತ್ಯಾಚಾರ ಮಾಡಿದ ಕ್ಯಾಥೊಲಿಕ್ ಚರ್ಚ್ ಬಿಷಪ್: ಕ್ರೈಸ್ತ್ ಸನ್ಯಾಸಿನಿ ಆರೋಪ
ಕೊಟ್ಟಾಯಂ: ಕ್ಯಾಥೊಲಿಕ್ ಧರ್ಮಪ್ರಾಂತ್ಯದ ಬಿಷಪ್ ಆಗಿರುವ ಫ್ರಾಂಕೋ ಮುಲಕ್ಕಲ್ ಅವರು 2014ರಿಂದ ಆರಂಭಿಸಿ 2016ರವರೆಗೆ 13 ಬಾರಿ ಅತ್ಯಾಚಾರ ಮಾಡಿದ್ದಾರೆ ಎಂದು ಕ್ರೈಸ್ತ ಸನ್ಯಾಸಿನಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ದೇಶದಲ್ಲಿ ಬಿಷಪ್ ಮೇಲೆ ಅತ್ಯಾಚಾರ ಮಾಡಿದ ನೇರ ಆರೋಪ ಎದುರಾಗಿರುವುದು ಇದೇ ಮೊದಲ ಬಾರಿ. ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬರು ಐವರು ಪಾದ್ರಿಗಳು ತನ್ನ ಪತ್ನಿಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದೀಗ ಬಿಷಪ್ ಮೇಲೆ ನೇರವಾಗಿ ಆರೋಪ ಕೇಳಿ ಬಂದಿರುವುದು ಚರ್ಚ್ ಗಳಲ್ಲಿ ಏನೇನು ನಡೆಯುತ್ತದೆ ಎಂಬ ಅನುಮಾನ ಮೂಡಿವೆ.
ಭೂ ಅವ್ಯವಹಾರ ಮತ್ತು ಲೈಂಗಿಕ ಶೋಷಣೆಯ ಆರೋಪದಿಂದ ಕುಖ್ಯಾತಿ ಪಡೆದಿರುವ ಕೇರಳದ ಸಿರೋ ಮಲಬಾರ್ ಕ್ಯಾಥೊಲಿಕ್ ಚರ್ಚ್ ಇದೀಗ ಬಿಷಪ್ ವಿರುದ್ಧ ಕೇಳಿ ಬಂದಿರುವ ಅತ್ಯಾಚಾರ ಆರೋಪದ ಬಗ್ಗೆ ಭಾರಿ ಸುದ್ದಿ ಮಾಡಿದೆ. 2014ರಲ್ಲಿ ಕುರುವಿಲಂಗಾಡ್ ಚರ್ಚ್‌ನ ಗೆಸ್ಟ್ ಹೌಸ್‌ನಲ್ಲಿ ಪ್ರಥಮ ಬಾರಿಗೆ ಅತ್ಯಾಚಾರ ಮಾಡಿದ್ದರು. ಬಳಿಕ 13 ಬಾರಿ ಶೋಷಣೆ ಮಾಡಿದ್ದಾರೆ ಎಂದು ಕ್ರೈಸ್ತ ಸನ್ಯಾನಿಸಿ ಆರೋಪಿಸಿದ್ದಾರೆ. ಈ ಕುರಿತು ಚರ್ಚ್ ನ ಮೇಲಾಧಿಕಾರಿಗಳಿಗೆ ದೂರು ನೀಡಿದರೂ ಸ್ಪಂದಿಸದೇ ಇರುವುದರಿಂದ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇದರ ಮಧ್ಯೆ ಜಲಂಧರ್ ಧರ್ಮಪ್ರಾಂತ್ಯದ ಬಿಷಪ್ ಆಗಿರುವ ಮುಲಕ್ಕಲ್ ಮೊದಲೇ ಕೊಟ್ಟಾಯಂ ಪೊಲೀಸರಿಗೆ ಸನ್ಯಾಸಿನಿಯೊಬ್ಬರನ್ನು ವರ್ಗಾವಣೆ ಮಾಡಿದ್ದಕ್ಕೆ ಅತ್ಯಾಚಾರದ ಆರೋಪ ಹೊರಿಸುವ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರು ನೀಡಿದ್ದರುಲ ಕೊಟ್ಟಾಯಂ ಎಸ್‌ಪಿ ಹರಿಶಂಕರ್ ಎರಡೂ ಪ್ರಕರಣ ದಾಖಲಿಸಿಕೊಂಡು ಡಿವೈಎಸ್‌ಪಿ ಮಟ್ಟದ ಅಧಿಕಾರಿಯನ್ನು ತನಿಖೆಗೆ ನೇಮಿಸಿದ್ದಾರೆ.
Leave A Reply