ಮಕ್ಕಳತ್ತ ಕೆಂಪು ಉಗ್ರರ ಕಣ್ಣು, ಮುಗ್ದ ಮಕ್ಕಳನ್ನು ದುಷ್ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ನಕ್ಸಲರು: ವಿಶ್ವಸಂಸ್ಥೆ ವರದಿ
ದೆಹಲಿ: ಬಡವರು, ಶೋಷಿತರು, ದಲಿತರು, ದಮನಿತರಿಗೆ ನ್ಯಾಯ ಒದಗಿಸುವ ಸೋಗು ಹಾಕಿಕೊಂಡು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಕಂಟಕವಾಗಿರುವ ನಕ್ಸಲರು ಇದೀಗ ಮುಗ್ದ ಮಕ್ಕಳನ್ನು ತನ್ನ ದುಷ್ಕೃತ್ಯಕ್ಕೆ ಬಳಸಿಕೊಳ್ಳಲು ನೇಮಕ ಮಾಡಿಕೊಳ್ಳುತ್ತಿದ್ದಾರೆ ಎಂ ಆಘಾತಕಾಗಿ ವರದಿಯೊಂದನ್ನು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅಂಟಾನಿಯೋ ಗುಟೇರಸ್ ಬಿಡುಗಡೆ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಅಧಿಕಾರಕ್ಕೇರಿದ ನಂತರ ದೇಶದಲ್ಲಿ ನಕ್ಸಲ ಚಟುವಟಿಕೆಗಳಿಗೆ ಕೊನೆ ಮೊಳೆ ಹೊಡೆಯುತ್ತಿದ್ದು, ನಿರಂತರವಾಗಿ ಕಾರ್ಯಾಚರಣೆ ನಡೆಸಿ, ನಕ್ಸಲರನ್ನು ಹತ್ತಿಕ್ಕಲಾಗುತ್ತಿದೆ. ಇದರಿಂದ ಕಂಗೆಟ್ಟಿರುವ ಮಾವೋವಾದಿಗಳು ಮಕ್ಕಳ ಮೊರೆ ಹೋಗಿದ್ದಾರೆ. ನಕ್ಸಲ ಹೋರಾಟದಲ್ಲಿ ಫಲವಿಲ್ಲ ಎಂಬುದನ್ನು ಅರಿತು ಹಿರಿಯ ನಕ್ಸಲರು ಸಾಮಾಜಿಕ ಮುನ್ನೆಲೆಗೆ ಬರುತ್ತಿರುವುದು ಒಂದೆಡೆಯಾದರೇ, ಮತ್ತೊಂದೆಡೆ ರಕ್ಷಣಾ ಪಡೆಗಳ ನಿರಂತರ ದಾಳಿಯಿಂದ ನಕ್ಸಲರ ಬಲ ದಿನೇ ದಿನೆ ಕುಸಿಯುತ್ತಿದೆ. ಆದ್ದರಿಂದ ಅವರು ಮಕ್ಕಳನ್ನು ನೇಮಿಸಿಕೊಳ್ಳುತ್ತಿರುವುದು ಬಹಿರಂಗವಾಗಿದೆ.
ಛತ್ತೀಸಘಡ್ ಮತ್ತು ಜಾರ್ಖಂಡ್ ನಲ್ಲಿ ವಿಶೇಷವಾಗಿ ಮಕ್ಕಳನ್ನು ತೀವ್ರಗತಿಯಲ್ಲಿ ನಕ್ಸಲರು ನೇಮಕ ಮಾಡಿಕೊಳ್ಳುತ್ತಿದ್ದಾರೆ. ಮಕ್ಕಳನ್ನು ಲಾಟರಿ ಮೂಲಕ ನೇಮಕ ಮಾಡಿಕೊಂಡು ಅವರಿಗೆ ತರಬೇತಿ ನೀಡಲಾಗುತ್ತಿದೆ. ಹೋರಾಟಕ್ಕೆ ಸಿದ್ಧಗೊಳಿಸಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.
16 ರಿಂದ 18 ವರ್ಷದೊಳಗಿನ ಮಕ್ಕಳನ್ನು ಗುರಿಯಾಗಿಟ್ಟುಕೊಂಡು ನೇಮಕ ಮಾಡಿಕೊಳ್ಳುತ್ತಿದ್ದು, ಅರಣ್ಯದ ಪಕ್ಕದಲ್ಲಿರುವ ಗ್ರಾಮಗಳಲ್ಲಿ ಪ್ರತಿಕುಟುಂಬವೂ ಒಂದು ಮಗುವನ್ನು ಚಳುವಳಿಗಾಗಿ ಹೋರಾಟಕ್ಕೆ ದತ್ತು ನೀಡಬೇಕು ಎಂಬ ಷರತ್ತು ವಿಧಿಸುತ್ತಿದ್ದು. ಅದರಂತೆ ಲಾಟರಿ ಮೂಲಕ ಮಕ್ಕಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಸಿಆರ್ ಫಿಎಫ್ ಅಧಿಕಾರಿ ರಾಜೀವ್ ರೈ ಭಟ್ನಾಗರ್ ತಿಳಿಸಿದ್ದಾರೆ.
ನೇಮಕ ಮಾಡಿಕೊಂಡಿರುವ ಮಕ್ಕಳನ್ನು ಬಾಲ ದಸ್ತಾಸ್ ಎಂದು ನಾಮಕರಣ ಮಾಡಿದ್ದು, ಅವರನ್ನು ನಕ್ಸಲರ ಮಾಹಿತಿದಾರರಾಗಿ, ತಂತ್ರಜ್ಞಾನ ಬಳಕೆಗೆ, ಉಪಕರಣ ಪೂರೈಕೆಗೆ ಬಳಸಿಕೊಳ್ಳಲಾಗುತ್ತಿದೆ. ಆದರೂ ಇತ್ತೀಚಿನ ವರ್ಷಗಳಲ್ಲಿ ನಕ್ಸಲರು ಬಲ ತೀವ್ರಗತಿಯಲ್ಲಿ ಇಳಿಮುಖವಾಗಿದೆ ಎಂದು ತಿಳಿಸಿದ್ದಾರೆ. ದಾಳಿ ವೇಳೆಯಲ್ಲಿ ಮಕ್ಕಳ ಮೇಲೆ ಗುಂಡು ಹಾರಿಸದಂತೆ ಸಿಆರ್ ಫಿಎಫ್ ಸೈನಿಕರಿಗೆ ಸೂಚನೆ ನೀಡಲಾಗಿದೆ ಎಂದು ಭಟ್ನಾಗರ್ ತಿಳಿಸಿದ್ದಾರೆ.
Leave A Reply