ಲೋಕಸಭೆಯ ಮೇಲೆ ಕಣ್ಣಿಟ್ಟಿರುವ ರಾಹುಲ್ ದಿವ್ಯಾ ಬಗ್ಗೆ ಮಾತನಾಡುತ್ತಿಲ್ಲ!!
ಏಳು ವರ್ಷದ ಒಂದು ಪುಟ್ಟ ಮಗುವನ್ನು ರಾಕ್ಷಸ ಸಂತಾನಿಯೊಬ್ಬ ಅತ್ಯಾಚಾರ ಮಾಡಿದ್ದಾನೆ. ಅವಳ ಕುತ್ತಿಗೆ ಸೀಳಿದ್ದಾನೆ. ಗುಪ್ತ ಅಂಗಕ್ಕೆ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ್ದಾನೆ ಎಂದು ಹೇಳಲಾಗುತ್ತದೆ. ಕೊನೆಗೆ ಅವಳನ್ನು ಒಂದು ಪೊದೆಗೆ ಬಿಸಾಡಿ ಓಡಿ ಹೋಗಿದ್ದಾನೆ. ಇದು ನಡೆದದ್ದು ಮಧ್ಯಪ್ರದೇಶದ ಮಾಂಡಸೌರ್ ಎನ್ನುವ ಜಿಲ್ಲೆಯಲ್ಲಿ. ಒಬ್ಬನೇ ಒಬ್ಬ ಕಾಂಗ್ರೆಸ್ಸಿನ ಮುಖಂಡ ಮಾತಾಡಿಲ್ಲ. ಕಾಂಗ್ರೆಸ್ಸಿನ ನಾಯಕರು ತಡರಾತ್ರಿ ಎದ್ದು ಕ್ಯಾಂಡಲ್ ಹಿಡಿದು ಮೆರವಣಿಗೆ ನಡೆಸಿಲ್ಲ. ರಾಹುಲ್ ಗಾಂಧಿ ಸರಣೆ ಟ್ವೀಟ್ ಮಾಡಿಲ್ಲ. ಆರೋಪಿಗೆ ಉಗ್ರ ಶಿಕ್ಷೆ ಕೊಡಬೇಕೆಂದು ಪ್ರತಿಭಟನೆ ಮಾಡಿಲ್ಲ. ಜಸ್ಟೀಸ್ ಫಾರ್ ದಿವ್ಯಾ ಎಂದು ಯಾವ ಸಿನೆಮಾ ನಟ, ನಟಿಯರು ಕೂಡ ಸಾಮಾಜಿಕ ತಾಣದಲ್ಲಿ ಅಭಿಯಾನ ನಡೆಸಿಲ್ಲ. ಯಾವುದೇ ರಾಷ್ಟ್ರೀಯ ವಾಹಿನಿಗಳಲ್ಲಿ ಈ ಬಗ್ಗೆ ಎಡಪಕ್ಷದವರು ಮತ್ತು ಕಾಂಗ್ರೆಸ್ಸಿಗರು ಕುಳಿತು ದಿವ್ಯಾ ಪರವಾಗಿ ಬೊಬ್ಬೆ ಹೊಡೆದಿಲ್ಲ. ಒಂದು ಅತ್ಯಾಚಾರ ಹಾಗೆ ಜನಮಾನಸದಿಂದ ಮರೆಯಾಗುವ ಹಾಗಿದೆ. ಯಾಕೆಂದರೆ ದಿವ್ಯಾ ಎನ್ನುವ ಪುಟ್ಟ ಬಾಲೆ ಅಸಿಫಾ ಅಲ್ಲ. ಕಾಂಗ್ರೆಸ್ಸಿಗರು ಅಸಿಫಾ ಪರವಾಗಿ ಹೋರಾಟ ಮಾಡಿದ್ದಕ್ಕೆ ನನ್ನ ವಿರೋಧ ಇಲ್ಲ. ಅಸಿಫಾ ಪರವಾಗಿ ರಾಹುಲ್ ಗಾಂಧಿ ಸರಣಿ ಟ್ವೀಟ್ ಮಾಡಿ ಘಟನೆಯನ್ನು ಖಂಡಿಸಿದ್ದಕ್ಕೆ ನನ್ನ ಆಕ್ಷೇಪ ಇಲ್ಲ. ಕಾಂಗ್ರೆಸ್ಸಿಗರನ್ನು ಮಧ್ಯರಾತ್ರಿ ಎಬ್ಬಿಸಿ ರಾಹುಲ್ ಗಾಂಧಿ ಕ್ಯಾಂಡಲ್ ಲೈಟ್ ಪಾದಯಾತ್ರೆ ಮಾಡಿದ್ದಕ್ಕೆ ನಾನು ಏನೂ ಹೇಳುತ್ತಿಲ್ಲ. ಯಾವುದೇ ನಟ, ನಟಿ ತಾವು ಯಾರ ಪರವಾಗಿ ಬೇಕಾದರೂ ಆಶ್ ಟ್ಯಾಗ್ ಅಭಿಯಾನ ಮಾಡಲು ಸ್ವತಂತ್ರರು. ಹಾಗೆ ಎಡಪಕ್ಷಗಳ ಮಾಲೀಕತ್ವ ಹೊಂದಿರುವ ವಿದೇಶಿ ಮಿಶಿನರಿಗಳಿಂದ ಫಂಡ್ ಮಾಡಲ್ಪಟ್ಟಿರುವ ಯಾವುದೇ ರಾಷ್ಟ್ರೀಯ ವಾಹಿನಿಗಳು ಅವರಿಗೆ ಬೇಕಾದ ಯಾರನ್ನು ಕೂಡ ಕುಳ್ಳಿರಿಸಿ ಅಸಿಫಾ ಪರವಾಗಿ ಮಾತನಾಡಿಸಲಿ, ಅದನ್ನು ವಿರೋಧಿಸುವುದು ನನ್ನ ಗುರಿ ಅಲ್ಲ. ಆದರೆ ನಾನು ಕೇಳುವುದು ಒಂದೇ ಪ್ರಶ್ನೆ. ನಿಮಗ ಆಸಿಫಾ ಮಾತ್ರ ಹೆಣ್ಣು ಮಗಳಂತೆ ಕಾಣುತ್ತಿದ್ದಾಳಾ?ಆಸಿಫಾ ದಿವ್ಯಾ ಆಗಿದ್ದರೆ….
ಆಸಿಫಾಳದ್ದು ನಿಜಕ್ಕೂ ಅತ್ಯಾಚಾರ ಆಗಿದೆಯಾ ಅಥವಾ ಒಂದು ವ್ಯವಸ್ಥಿತ ಕಟ್ಟುಕಥೆಯನ್ನು ಹಾಗೆ ಹೆಣೆಯಲಾಯಿತಾ ಎನ್ನುವ ವಿಷಯದ ಮೇಲೆ ನಾನು ಚರ್ಚೆ ಮಾಡಲು ಹೋಗುತ್ತಿಲ್ಲ. ಒಂದು ವೇಳೆ ಆಸಿಫಾ ಮೇಲೆ ಅತ್ಯಾಚಾರ ಆಗಿದೆ ಎಂದೇ ಇಟ್ಟುಕೊಳ್ಳೋಣ, ಅವಳನ್ನು ಆ ದಿನ ಅಷ್ಟು ಬೆಂಬಲಿಸಿ ನ್ಯಾಯಕ್ಕಾಗಿ ಹೋರಾಡಿದ ನಮ್ಮ ಕಾಂಗ್ರೆಸ್ ನಾಯಕರು ಮೊನ್ನೆ ಶುಕ್ರವಾರ ಜೂನ್ ತಿಂಗಳ ಕೊನೆಯ ವಾರದಲ್ಲಿ ಮಧ್ಯಪ್ರದೇಶದಲ್ಲಿ ದಿವ್ಯಾ ಮೇಲೆ ಅತ್ಯಾಚಾರ ಆದಾಗ ಯಾಕೆ ಮಾತನಾಡುತ್ತಿಲ್ಲ. ಆಸಿಫಾ ಮತ್ತು ದಿವ್ಯಾ ನಡುವೆ ನೀವು ನೋಡುತ್ತಿರುವುದು ಏನು? ಕೇವಲ ಧರ್ಮ ತಾನೆ. ಒಂದು ವೇಳೆ ದಿವ್ಯಾ ಮೇಲೆ ಅತ್ಯಾಚಾರ ಮಾಡಿದವ ಒಬ್ಬ ಹಿಂದೂ ಆಗಿದ್ದರೆ ಇದೇ ಕಾಂಗ್ರೆಸ್ಸಿಗರು, ಇದೇ ರಾಹುಲ್ ಗಾಂಧಿ, ಇದೇ ಚಾನೆಲ್ ಗಳು ದೇಶದ ಮೇಲೆ ಪರಮಾಣು ಬಾಂಬ್ ಬಿದ್ದಂತೆ ರಿಯಾಕ್ಟ್ ಮಾಡುತ್ತಿದ್ದರಲ್ಲ. ಈಗ ಇಮ್ರಾನ್ ಎನ್ನುವ ರಾಕ್ಷಸ ದಿವ್ಯಾ ಎನ್ನುವ ಏಳು ವರ್ಷದ ಮಗುವಿನ ಮೇಲೆ ಅತ್ಯಾಚಾರ ಮಾಡಿದರೆ ನಿಮ್ಮ ಬಳಿ ಮಾತನಾಡಲು ಶಬ್ದಗಳಿಲ್ಲ. ನಿಮಗೆಲ್ಲ ಸಡನ್ನಾಗಿ ಬಾಯಿಗೆ ಲಕ್ವಾ ಹೊಡೆದಿದೆ. ಮಧ್ಯರಾತ್ರಿ ಪಾದಯಾತ್ರೆ ಮಾಡಲು ಕ್ಯಾಂಡಲ್ ಗಳನ್ನು ಖರೀದಿಸಲಾಗದಷ್ಟು ಬಡತನ ಬಂದಿದೆ. ಯಾವುದೇ ವಾಹಿನಿಯವರಿಗೆ ನಿಮ್ಮ ಫೋನ್ ನಂಬ್ರ ಮರೆತು ಹೋಗಿದೆ. ರಾಹುಲ್ ಗಾಂಧಿಯವರಿಗೆ ಅವರ ಟ್ವೀಟರ್ ಅಕೌಂಟ್ ನ ಪಾಸ್ ವರ್ಡ್ ಮರೆತು ಹೋಗಿದೆ. ಯಾಕೆಂದರೆ ಇಮ್ರಾನ್ ಹಿಂದಿರುವ ಧರ್ಮ.
ರಾಹುಲ್ ಕಣ್ಣು ಲೋಕಸಭೆ ಮೇಲೆ…
ಇಮ್ರಾನ್ ಮುಸ್ಲಿಂ ಎನ್ನುವ ಕಾರಣಕ್ಕೆ ಎಂತಹ ಘನಘೋರ ತಪ್ಪು ಮಾಡಿದ್ರು ಅವನ ವಿರುದ್ಧ ಮಾತನಾಡಲು ಯಾರು ಮುಂದೆ ಬರುತ್ತಿಲ್ಲ. ಒಂದು ಚಾಕ್ಲೆಟ್ ಕೊಡುತ್ತೇನೆ ಎಂದು ಆತ ಕರೆದು ಆ ಬಾಲೆಯ ಮೇಲೆ ಪೈಶಾಚಿಕ ಕೃತ್ಯ ಮಾಡಿದನಲ್ಲ, ಅವನ ವಿರುದ್ಧ ನಿಮಗೆ ಒಂದೇ ಒಂದು ಶಬ್ದ ಹೊರಗೆ ಬರುತ್ತಿಲ್ಲ. ಈಗ ಎಲ್ಲ ಸಿನೆಮಾದವರು ಶೂಟಿಂಗ್ ನಲ್ಲಿ ಬಿಝಿಯಾಗಿದ್ದಾರೆ. ಎಲ್ಲರ ಟ್ವೀಟರ್ ಹ್ಯಾಕ್ ಆಗಿವೆ. ಇದಾ ರಾಜಕೀಯ ರಾಹುಲ್ ಗಾಂಧಿ? ನೀವು ಈ ಸಲ ಬರಿ ನಾಟಕಕ್ಕಾಗಿ ಆದರೂ ಪ್ರತಿಭಟನೆ ಮಾಡುತ್ತಿರಿ ಎಂದು ನಾವು ಅಂದುಕೊಂಡಿದ್ದೆವು. ಯಾಕೆಂದರೆ ಮಧ್ಯಪ್ರದೇಶ ಚುನಾವಣೆಗೆ ಆರು ತಿಂಗಳು ಕೂಡ ಇಲ್ಲ. ಅಲ್ಲಿ ನೀವು ಜನಿವಾರ ತೊಟ್ಟು ಹೋಗಬೇಕಿದೆ. ಮಧ್ಯಪ್ರದೇಶದ ದೇವಸ್ಥಾನಗಳು ನಿಮಗಾಗಿ ಕಾಯುತ್ತಿವೆ. ಅಲ್ಲಿನ ದೇವಸ್ಥಾನಗಳ ಒಳಗೆ ಹಣೆಗೆ ಕುಂಕುಮ ಇಟ್ಟು ನೀವು ಪ್ರಾರ್ಥನೆ ಮಾಡಬೇಕಿದೆ. ಅಲ್ಲಿ ಜನಿವಾರ ಕಾಣುವಂತೆ ಧ್ಯಾನಕ್ಕೆ ಕುಳಿತುಕೊಳ್ಳಬೇಕಿದೆ. ಹೀಗಿರುವಾಗ ನೀವು ತೋರಿಕೆಗಾದರೂ ದಿವ್ಯಾ ಪರ ಧ್ವನಿ ಎತ್ತಬೇಕಿತ್ತು. ಆದರೆ ನೀವು ಈಗ ಅದಕ್ಕಿಂತ ಮುಖ್ಯವಾಗಿ ಲೋಕಸಭಾ ಚುನಾವಣೆಯ ಮೇಲೆ ಕಣ್ಣು ಇಟ್ಟಿರುವಂತೆ ಕಾಣುತ್ತಿವೆ. ಯಾಕೆಂದರೆ ನೀವು ಒಂದು ವೇಳೆ ನಾಟಕ ಮಾಡಲು ಬೀದಿಗಳಿದರೆ ಮಮತಾ, ಮುಲಾಯಂ, ನಾಯ್ಡು ಗದರಿಸಿದರೆ ಎನ್ನುವ ಹೆದರಿಕೆ ನಿಮಗೆ ಇದೆ. ನಿಮ್ಮ ಈ ರಾಜಕೀಯದ ನಡುವೆ ಒಂದು ಹೆಣ್ಣು ಮಗು ಸಾವು ಬದುಕಿನ ನಡುವೆ ಹೋರಾಡುತ್ತಿದೆ. ಆಕೆಯ ಕಣ್ಣುಗಳು ಕೇಳುತ್ತಿವೆ, ನಾನು ಆಸಿಫಾ ಆಗಿದ್ದರೆ!
Leave A Reply