ಅಸಿಫಾ ಪ್ರಕರಣದಲ್ಲಿ ಸೆಂಟ್ರಲ್ ಮಾರ್ಕೆಟ್ ಬಂದ್ ಮಾಡಿಸಿದ್ದರು, ದಿವ್ಯಾ, ಸತ್ನಾ ಪ್ರಕರಣದಲ್ಲಿ ಯಾಕಿಲ್ಲ!!
ಮಧ್ಯಪ್ರದೇಶದಲ್ಲಿ ಭಾನುವಾರ ರಾತ್ರಿ ಮತ್ತೊಂದು ಮಗುವಿನ ಮೇಲೆ ಅತ್ಯಾಚಾರವಾಗಿದೆ. ಸತ್ನಾ ಎನ್ನುವ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ. ಮಗುವಿಗೆ ಸರಿಯಾಗಿ ನಾಲ್ಕು ವರ್ಷ ಕೂಡ ತುಂಬಿಲ್ಲ. ಮಗು ತಂದೆಯೊಂದಿಗೆ ಮನೆಯಲ್ಲಿತ್ತು. ಪರಿಚಯದ ವ್ಯಕ್ತಿಯೊಬ್ಬ ಮನೆಗೆ ಬಂದಿದ್ದ. ಹೇಗೂ ಪರಿಚಯ ಇದ್ದವನಲ್ವಾ ಎಂದು ಮಗುವಿನ ತಂದೆ ಈಗ ಬರ್ತೀನಿ ಎಂದು ಹೊರಗೆ ಹೋಗಿದ್ದರು. ಬರುವಾಗ ಮಗು ಮತ್ತು ಗಂಡಸು ಇಬ್ಬರೂ ಇಲ್ಲ. ನಂತರ ಆ ತಂದೆ ತನ್ನ ಮಗುವನ್ನು ಮತ್ತು ಆ ಗಂಡಸನ್ನು ಹುಡುಕಿಕೊಂಡು ಹೋಗಿದ್ದಾರೆ. ರಾತ್ರಿ ತಮ್ಮ ಮನೆಗೆ ಬಂದಿದ್ದ ವ್ಯಕ್ತಿಯ ಮನೆಗೆ ಹೋಗಿ ಅವನಿಗೆ ನಾಲ್ಕು ಬಾರಿಸಿದ ನಂತರ ಆತ ಮಗುವನ್ನು ಬಿಟ್ಟು ಬಂದಿರುವ ಸ್ಥಳ ತೋರಿಸಿದ್ದಾನೆ. ನೋಡಿದ್ರೆ ಮಗು ನೋವಿನಿಂದ ನರಳುತ್ತಿತ್ತು. ನಂತರ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತು. ಈಗ ಗಾಯಗಳಿಗೆ ಚಿಕಿತ್ಸೆ ಕೊಡಿಸಲಾಗಿದೆ. ಪೊಲೀಸರು ಪೊಸ್ಕೊ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಕಾಂಗ್ರೆಸ್ ನ ಮಧ್ಯಪ್ರದೇಶದ ಅಧ್ಯಕ್ಷ ಕಮಲನಾಥ್ ಒಂದು ಹೇಳಿಕೆ ನೀಡಿದ್ದಾರೆ. ಏನೆಂದರೆ ಮಧ್ಯಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿದೆ. ಪುಣ್ಯಕ್ಕೆ ಆ ಮಗುವಿನ ಹೆಸರು ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಕಾಂಗ್ರೆಸ್ ನ ಅಲ್ಲಿನ ಅಧ್ಯಕ್ಷರು ಆರೋಪಿ ಹಿಂದೂ ಆಗಿರುವುದರಿಂದ ಅದರ ಆಧಾರದ ಮೇಲೆ ಹೇಳಿಕೆ ನೀಡಿದ್ದಾರೆ. ಆರೋಪಿಯ ಹೆಸರು ಮಹೇಂದ್ರ ಸಿಂಗ್ ಗೌಡ್ ಆಗಿರುವುದರಿಂದ ಕಾಂಗ್ರೆಸ್ಸಿಗರು ಒಂದಿಷ್ಟು ಎಚ್ಚರಗೊಂಡಿದ್ದಾರೆ. ಇದೇ ಕಾಂಗ್ರೆಸ್ಸಿಗರು ವಾರದ ಹಿಂದೆ ಇದೇ ಮಧ್ಯಪ್ರದೇಶದಲ್ಲಿ ದಿವ್ಯಾ ಎನ್ನುವ ಏಳು ವರ್ಷದ ಹೆಣ್ಣುಮಗುವಿನ ಅತ್ಯಾಚಾರವಾದಾಗ ಒಂದು ಸಣ್ಣ ಕೆಮ್ಮು ಕೂಡ ತೆಗೆದಿರಲಿಲ್ಲ.
ಏಳು ವರ್ಷದ ಹೆಣ್ಣುಮಗಳನ್ನು ಇಮ್ರಾನ್….
ಇನ್ನು ಆದಿತ್ಯವಾರ ಅತ್ಯಾಚಾರವಾದ ಹೆಣ್ಣುಮಗಳನ್ನು ರೇಪ್ ಮಾಡಿದವನು ಮಹೇಂದ್ರ ಸಿಂಗ್ ಗೌಡ ಎಂದು ಗೊತ್ತಾಗಿರುವುದರಿಂದ ಮಂಗಳೂರಿನ ಕಾಂಗ್ರೆಸ್ಸಿಗರು ಅರ್ಜೆಂಟಾಗಿ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ಸೇರಿರಬಹುದು. ಯಾರಿಗಾದರೂ ಹಣ ಕೊಟ್ಟು ಕ್ಯಾಂಡಲ್ ಖರೀದಿಸಿ ತರಲು ಹೇಳಿರಬಹುದು. ಇವತ್ತು ಅಥವಾ ನಾಳೆ ಕತ್ತಲು ಆಗುತ್ತಿದ್ದಂತೆ ಕ್ಯಾಂಡಲ್ ಉರಿಸಿ ಶೋಕವನ್ನು ತೋರಿಸಲು ಹೊರಡಿರಬಹುದು. ಹೆಚ್ಚಿನ ಕಾಂಗ್ರೆಸ್ಸ್ ಮುಖಂಡರು ಈ ಬಾರಿ ಸೋತಿರುವುದರಿಂದ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಇರುವುದರಿಂದ ಈ ಬಾರಿ ಪ್ರತಿಭಟನೆ ಮಾಡುವುದು ಸುಲಭ. ಇವರು ಮಹೇಂದ್ರ ಸಿಂಗ್ ಗೌಡ್ ಎನ್ನುವ ಆರೋಪಿಯ ವಿರುದ್ಧ ಪ್ರತಿಭಟನೆ ಮಾಡುತ್ತಾರೋ ಬಿಡ್ತಾರೋ, ಆದರೆ ಇವರು ದಿವ್ಯಾ ಎನ್ನುವ ಏಳು ವರ್ಷದ ಹೆಣ್ಣುಮಗಳನ್ನು ಇಮ್ರಾನ್ ಎನ್ನುವ ದುರುಳ ಅತ್ಯಾಚಾರ ಮಾಡುವಾಗ ತಮಗೂ ಮಧ್ಯಪ್ರದೇಶಕ್ಕೂ ಸಂಬಂಧವಿಲ್ಲದಂತೆ ವರ್ತಿಸಿದ್ದರು. ಅದೇ ಕಾಶ್ಮೀರದ ಕಟುವಾ ಎನ್ನುವ ಪ್ರದೇಶದಲ್ಲಿ ಹೆಣ್ಣುಮಗುವಿನ ಅತ್ಯಾಚಾರವಾಗಿದೆ ಎಂದು ಆರೋಪಿಸಿ ಇಲ್ಲಿ ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆಯನ್ನು ಇಡೀ ದಿನ ಬಂದ್ ಮಾಡಿಸಿದ್ದರು. ನಮ್ಮ ಸೆಂಟ್ರಲ್ ಮಾರುಕಟ್ಟೆ ಬಂದ್ ಮಾಡಿಸಿದವರಿಗೆ ದಿವ್ಯ ಈ ಬಾರಿ ಕಾಣಿಸಲೇ ಇಲ್ಲ. ಇನ್ನೊಂದು ಕಡೆ ದಿವ್ಯಾ ಮತ್ತು ಸತ್ನಾದ ಬಾಲೆಯ ಅತ್ಯಾಚಾರ ಯಾವುದೇ ವಾಹಿನಿಯಲ್ಲಿ ಸುದ್ದಿಯಾಗುವುದೇ ಇಲ್ಲ.
ಗಲ್ಲು ಶಿಕ್ಷೆ ಎಲ್ಲಾ ಅತ್ಯಾಚಾರಿಗಳಿಗೆ ಬರಲಿ…
ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ಒಂದು ಕಠಿಣ ನಿಯಮ ಜಾರಿಗೆ ತರಲಾಗಿದೆ. ಅದೇನೆಂದರೆ ಹತ್ತು ವರ್ಷದ ಕೆಳಗಿನ ಹೆಣ್ಣುಮಗುವಿನ ಮೇಲೆ ಅತ್ಯಾಚಾರ ಆದರೆ ಆ ಆರೋಪಿಗೆ ಗಲ್ಲು ಶಿಕ್ಷೆಯ ಕಾನೂನು ತರಲಾಗಿದೆ. ಅಂತಹ ಒಂದು ಮಸೂದೆ ಅಲ್ಲಿನ ಅಸೆಂಬ್ಲಿಯಲ್ಲಿ ಪಾಸ್ ಆಗಿ ಕಾಯ್ದೆಯಾಗಿದೆ. ಬಹುಶ: ರಾಹುಲ್ ಗಾಂಧಿಯವರಿಗೆ ಇದೆಲ್ಲ ಗೊತ್ತಿರಲಿಕ್ಕಿಲ್ಲ. ಅವರು ವಿದೇಶದಲ್ಲಿ ಇದ್ದಿರಬೇಕು ಅಥವಾ ಇಲ್ಲಿ ಇದ್ದರೂ “ದಿವ್ಯಾ ಕಾ ಫಾರ್ ಕ್ಯಾ ಪ್ರೊಟೆಸ್ಟ್ ಕರೇಂಗೇ” ಎಂದು ಹೇಳಿರಬಹುದು. ಇದರಿಂದ ಏನಾಗುತ್ತಿದೆ ಎಂದರೆ ಕಾಂಗ್ರೆಸ್ಸಿಗರು ಮುಸ್ಲಿಮರು ಅನ್ಯಾಯ ಮಾಡಿದ್ರೆ ಪ್ರತಿಭಟನೆ ಮಾಡಲ್ಲ ಎನ್ನುವ ಭಾವನೆ ಎಲ್ಲಾ ಕಡೆ ಹರಡುತ್ತಿದೆ. ಇದರಿಂದ ಕಾಂಗ್ರೆಸ್ಸಿನಲ್ಲಿರುವ ಹಿಂದೂಗಳಿಗೂ ಮುಜುಗರವಾಗುತ್ತಿದೆ. ಅವರಿಗೆ ಇದು ಬಿಸಿತುಪ್ಪವಾಗಿದೆ. ದಿವ್ಯಾ ಪರ ಪ್ರತಿಭಟನೆ ಮಾಡಲು ಮೇಲಿನಿಂದ ಸೂಚನೆ ಬರದೇ ಮಾಡಿದರೆ ಅದು ಪಕ್ಷ ವಿರೋಧಿ ಧೋರಣೆ ಆಗುತ್ತದೆ ಎಂದು ಅವರು ಅಂದುಕೊಂಡಿದ್ದಾರೆ. ಇಂತಹ ತತ್ವ ಸಿದ್ಧಾಂತ ಇಟ್ಟುಕೊಂಡು ಯಾವುದೇ ರಾಜಕೀಯ ಪಕ್ಷ ಇದ್ದರೂ ಅದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದ್ದಲ್ಲ. ನಾನು ಹೇಳುವುದು ಇಷ್ಟೇ. ಒಂದು ಹೆಣ್ಣುಮಗುವಿನ ಅತ್ಯಾಚಾರ ನಡೆಯುವುದೇ ಘೋರ ಅನ್ಯಾಯ. ಅದು ಮಾಡಿದವನ ಜಾತಿ, ಧರ್ಮ ನೋಡಲೇಬಾರದು. ಮಗುವಿನ ಜಾತಿ, ಧರ್ಮ ಗಣನೆಗೆ ಬರಲೇಬಾರದು. ಅಲ್ಲಿ ಅತ್ಯಾಚಾರ ಮಾಡಿದವ ಒಬ್ಬ ರಾಕ್ಷಸ ಎನ್ನುವುದೇ ನಮ್ಮ ತಲೆಯಿದ್ದರೆ ಸಾಕು. ಅತ್ಯಾಚಾರಗೊಳಗಾದ ಮಗು ನಮ್ಮದು ಎಂದು ತಿಳಿದರೆ ಸಾಕು. ಇನ್ನು ಮಧ್ಯಪ್ರದೇಶ ಸರಕಾರ ಮಾಡಿದ ಹಾಗೆ ಅತ್ಯಾಚಾರ ಆರೋಪಿಗೆ ಗಲ್ಲು ಶಿಕ್ಷೆ ಎನ್ನುವುದು ಕೇವಲ ಪುಟ್ಟ ಮಕ್ಕಳ ಅತ್ಯಾಚಾರಿಗೆ ಮಾತ್ರವಲ್ಲ ಯಾವುದೇ ಹೆಣ್ಣುಮಗುವಿನ ಅತ್ಯಾಚಾರ ಮಾಡಿದವರಿಗೆ ಕೊಡಬೇಕು. ವಿಚಾರಣೆ ಬೇಗ ಆಗಿ ಒಂದಿಬ್ಬರಿಗೆ ಗಲ್ಲು ಶಿಕ್ಷೆ ಸಿಗಬೇಕು. ಇದಕ್ಕೆ ಪಕ್ಷಾತೀತವಾಗಿ ಎಲ್ಲರೂ ಬೆಂಬಲಿಸಬೇಕು. ಅತ್ಯಾಚಾರ ಎನ್ನುವುದು ನಿಧಾನವಾಗಿ ನಿಂತು ಹೋಗುತ್ತದೆ!
Leave A Reply