ಹೀಗೆ ಹತ್ಯೆಗೀಡಾಗುವ ಆರೆಸ್ಸೆಸ್ ಕಾರ್ಯಕರ್ತರ ಬಗ್ಗೆ ಯಾರೂ ಏಕೆ ಸೊಲ್ಲೆತ್ತುವುದಿಲ್ಲ?
ಭಾರತದಲ್ಲಿ ಇಬ್ಬಂದಿತನದಿಂದ ಕೂಡಿರುವ ರಾಜಕಾರಣಿಗಳು, ಬುದ್ಧಿಜೀವಿಗಳು,ಪ್ರಗತಿಪರರು, ಜೀವಪರರು ತುಂಬ ಜನರಿದ್ದಾರೆ. ನೀವೇ ಯೋಚನೆ ಮಾಡಿನೋಡಿ, ಕಠುವಾದಲ್ಲಿ ಮುಸ್ಲಿಂ ಬಾಲಕಿ ಮೇಲೆ ಅತ್ಯಾಚಾರವಾದರೆ, ಅಲ್ಲಿ ಹಿಂದೂ ಧರ್ಮವನ್ನೇ ಕಟಕಟೆಗೆ ತರುತ್ತಾರೆ. ಆದರೆ ಅದೇ, ಮಧ್ಯಪ್ರದೇಶದಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರವಾದರೆ ಆಗ ಮಗುಮ್ಮಾಗುತ್ತಾರೆ.
ಅಷ್ಟೇ ಅಲ್ಲ, ದೇಶದ ಯಾವ ಮೂಲೆಯಲ್ಲೇ ಅಲ್ಪಸಂಖ್ಯಾತರ ಮೇಲೆ ಯಾರೇ ಹಲ್ಲೆ ಮಾಡಿದರೂ, ಸೀದಾ ಹಿಂದೂಗಳನ್ನೇ ವಿರೋಧಿಸುತ್ತಾರೆ. ಆಗೋ ಅನಿಷ್ಠಕ್ಕೆಲ್ಲ ಹಿಂದೂಗಳೇ ಕಾರಣ ಎಂದು ಬೊಬ್ಬೆ ಹಾಕುತ್ತಾರೆ. ಬೇರೆ ಧರ್ಮೀಯರಿಗೆ ಭಾರತದಲ್ಲಿ ಅಸಹಿಷ್ಣುತೆ ಇದೆ ಎಂದು ಬೊಬ್ಬೆ ಹಾಕುತ್ತಾರೆ.
ಆದರೆ ಎಂತಹ ವಿಪರ್ಯಾಸ ನೋಡಿ, ಕರ್ನಾಟಕ, ಪಂಜಾಬ್, ಉತ್ತರಪ್ರದೇಶ, ಪಶ್ಚಿಮಬಂಗಾಳ, ಕೇರಳ ಸೇರಿ ಹಲವು ರಾಜ್ಯಗಳಲ್ಲಿ ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ ಹಲವು ಕಾರ್ಯಕರ್ತರು ಹಾಗೂ ಮುಖಂಡರನ್ನು ಹತ್ಯೆ ಮಾಡುತ್ತಿದ್ದರೂ ಯಾರೂ ಸೊಲ್ಲೆತ್ತುತ್ತಿಲ್ಲ. ಆ ಮೂಲಕ ಇವರು ಇಬ್ಬಂದಿತನ ಪ್ರದರ್ಶಿಸುತ್ತಾರೆ.
ಹೌದು, ಉತ್ತರ ಪ್ರದೇಶದ ಫಿರೋಜಾಬಾದಿನಲ್ಲಿ ಬುಧವಾರ ಆರೆಸ್ಸೆಸ್ ಕಾರ್ಯಕರ್ತರೊಬ್ಬರನ್ನು ಕೊಲೆ ಮಾಡಲಾಗಿದೆ. ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು 34 ವರ್ಷದ ಸಂದೀಪ್ ಶರ್ಮಾ ಅವರನ್ನು ಹತ್ಯೆ ಮಾಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟೊತ್ತಿಗಾಗಲೇ ಅವರು ಕೊನೆಯುಸಿರೆಳೆದಿದ್ದರು.
ಹೀಗೆ ಯಾವ ತಪ್ಪೂ ಮಾಡದ, ಬರೀ ಹಿಂದೂ ಧರ್ಮದ ಏಳಿಗೆಗಾಗಿ ದುಡಿಯುತ್ತಿರುವ ಆರೆಸ್ಸೆಸ್ ಕಾರ್ಯಕರ್ತರೊಬ್ಬರನ್ನು ಹತ್ಯೆ ಮಾಡಲಾಗಿದೆ. ಆದರೆ ಈ ಕುರಿತು ಯಾರೂ ಮಾತನಾಡುವುದಿಲ್ಲ, ಯಾವ ಮಾಧ್ಯಮಗಳೂ ಸುದೀರ್ಘವಾಗಿ ವರದಿ ಮಾಡುವುದಿಲ್ಲ. ಹೇಳಿ ಇಂತಹ ಇಬ್ಬಂದಿತನವೇಕೆ?
Leave A Reply