26 ಬಾಲಕಿಯರನ್ನು ರಕ್ಷಿಸಿದ ಒಂದು ಟ್ವೀಟ್: ರೈಲ್ವೆ ಇಲಾಖೆ ಕಾರ್ಯತೀಕ್ಷಣತೆಗೆ ಇಲ್ಲೊಂದು ಸಾಕ್ಷಿ
ದೆಹಲಿ: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಂತ್ರಜ್ಞಾನ, ಸಾಮಾಜಿಕ ಜಾಲತಾಣದ ಭಾರಿ ಬಳಕೆಯಾಗುತ್ತಿದೆ. ಪ್ರಧಾನಿ ಸೇರಿ ದೇಶದ ಎಲ್ಲ ಸಚಿವರು, ಅಧಿಕಾರಿಗಳು ಜನರ ಕೈ ಬೆರಳಲ್ಲಿ ಸಂಪರ್ಕಕ್ಕೆ ದೊರೆಯುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ರೈಲ್ವೆ ಇಲಾಖೆ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯವಾಗಿದ್ದು, ತನ್ನ ಪ್ರಯಾಣಿಕರ ಸುರಕ್ಷೆ ಸದಾ ಸಿದ್ಧವಾಗಿರುತ್ತದೆ. ಅದಕ್ಕೆ ಇದೀಗ ಮತ್ತೊಂದು ಘಟನೆಯೊಂದು ಸಾಕ್ಷಿಯಾಗಿದ್ದು, ಪ್ರಯಾಣಿಕರೊಬ್ಬರ ಟ್ವೀಟ್ ಗೆ ಸ್ಪಂದಿಸಿದ ರೈಲ್ವೆ ಇಲಾಖೆಯ ಕಾರ್ಯವೈಖರಿಯಿಂದ 10ರಿಂದ 14 ವರ್ಷದೊಳಗಿನ 26 ಬಾಲಕಿಯರನ್ನು ರಕ್ಷಿಸಲಾಗಿದೆ.
ಮುಜಾಫರ್ ಪುರ್-ಬಾಂದ್ರಾ-ಅವಧ ಎಕ್ಸಪ್ರೇಸ್ ರೈಲಿನಲ್ಲಿ ಎಸ್5 ಕೋಚ್ ನಲ್ಲಿ ಸುಮಾರು 25 ಅಪ್ರಾಪ್ತ ಬಾಲಕಿಯರು ಅಳುತ್ತಿದ್ದು, ಅಸುರಕ್ಷಿತ ಭಾವ ಹೊಂದಿದ್ದಾರೆ. ಭೀತಿಯಲ್ಲಿದ್ದಾರೆ ಎಂದು ರೈಲ್ವೆ ಇಲಾಖೆಯ ಖಾತೆಗೆ ಟ್ವೀಟ್ ಮಾಡಿದ್ದಾರೆ. ಪ್ರಯಾಣಿಕರ ಟ್ವೀಟ್ ಗೆ ಸ್ಪಂದಿಸಿದ ರೈಲ್ವೆ ಇಲಾಖೆಯ ವಾರಣಾಸಿ ಘಟಕದವರು ಕೂಡಲೇ, ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ಸೂಚನೆಗಳನ್ನು ಕಳುಹಿಸಿಕೊಟ್ಟು, ಕೇವಲ ಅರ್ಧ ಗಂಟೆಯಲ್ಲಿ ಬಾಲಕಿಯರ ನೆರವಿಗೆ ಧಾವಿಸಿದ್ದಾರೆ.
ಇಬ್ಬರು ರೈಲ್ವೆ ಪೊಲೀಸರು ಸಾಮಾನ್ಯ ಧಿರಿಸಿನಲ್ಲಿ ರೈಲ್ವೆ ಪ್ರವೇಶಿಸಿ, ಪರಿಶೀಲನೆ ನಡೆಸಿದ್ದಾರೆ. ನಂತರ ಗೋರಖಪುರದಲ್ಲಿ ಮಕ್ಕಳ ರಕ್ಷಣಾ ಪಡೆ, ರೈಲ್ವೆ ಪೊಲೀಸ್ ಜೊತೆಗೂಡಿ ರೈಲ್ವೆ ಕೋಚ್ ಮೇಲೆ ದಾಳಿ ನಡೆಸಿ, ಬಾಲಕಿಯರನ್ನು ರಕ್ಷಣೆ ಮಾಡಲಾಗಿದೆ.
ಈ ವೇಳೆ 22 ಅಪ್ರಾಪ್ತ ಬಾಲಕಿಯರು 22 ಮತ್ತು 55 ವರ್ಷದ ಇಬ್ಬರು ಪುರುಷರ ಜೊತೆ ಪ್ರಯಾಣ ಬೆಳೆಸುತ್ತಿದ್ದರು. ಬಿಹಾರದ ಪಶ್ಚಿಮ ಚಂಪಾರಣ ಪ್ರದೇಶದವರು ಎಂದು ತಿಳಿದು ಬಂದಿದೆ. ಬಾಲಕಿಯರನ್ನು ನರ್ತಕತಿಕ್ಯಾಗಂಜ್ ನಿಂದ ಇದ್ಗಾಗೆ ಸ್ಥಳಾಂತರಿಸಲಾಗಿದೆ. ಭೀತಿಗೊಳಗಾಗಿರುವ ಬಾಲಕಿಯರನ್ನು ಈ ಕುರಿತು ವಿಚಾರಣೆ ನಡೆಸಿದಾಗ ಯಾವುದೇ ಸ್ಪಷ್ಟ ಮಾಹಿತಿಯನ್ನು ನೀಡಿಲ್ಲ. ಬಾಲಕಿಯರ ಕುರಿತು ಪೋಷಕರಿಗೆ ಮಾಹಿತಿ ನೀಡಲಾಗಿದ್ದು, ಇಬ್ಬರನ್ನು ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ರೈಲ್ವೈ ಪೊಲೀಸ್ ಫೋರ್ಸ್ ನವರು ಮಾಹಿತಿ ನೀಡಿದ್ದಾರೆ.
Leave A Reply