ಪ್ರತ್ಯೇಕತೆಯ ವಿಷ ಬೀಜ ಬಿತ್ತುತ್ತಿರುವ ಮತ್ತೊಂದು ಕುಳ ಜೈಲಿಗೆ: ಆಸಿಯಾ ಅಂದ್ರಾಬಿ ಜೈಲು ಪಾಲು

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಪ್ರತ್ಯೇಕತೆಯ ವಿಷ ಬೀಜ ಬಿತ್ತಿ, ದೇಶವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿರುವ ಪ್ರತ್ಯೇಕತವಾದಿ ಆಸಿಯಾ ಅಂದ್ರಾಬಿ ಮತ್ತು ಅವಳ ಇಬ್ಬರು ಸಹಚಾರಿಣಿಯರನ್ನು ರಾಷ್ಟ್ರೀಯ ತನಿಖಾ ದಳ ಶುಕ್ರವಾರ ಬಂಧಿಸಿದೆ. ಈ ಮೂಲಕ ಕಣಿವೆ ರಾಜ್ಯದಲ್ಲಿ ಗಲಭೆಗೆ ಪ್ರಚೋಧನೆ ನೀಡುತ್ತಿದ್ದ ಮತ್ತೊಂದು ಪ್ರಮುಖ ಕುಳವನ್ನು ಜೈಲಿಗಟ್ಟಿದಂತಾಗಿದೆ. ಜಮ್ಮು ಕಾಶ್ಮೀರದಲ್ಲಿ ಪಿಡಿಪಿ ಬಿಜೆಪಿ ಮೈತ್ರಿ ಸರ್ಕಾರ ಮುರಿದು ಬಿದ್ದ ನಂತರ ಪ್ರತ್ಯೇಕವಾದಿಗಳನ್ನು ಹದ್ದು ಬಸ್ತಿನಲ್ಲಿರುವ ಕಾರ್ಯವನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಆಸಿಯಾ ಅಂದ್ರಾಬಿಯನ್ನು ಬಂಧಿಸಿ ಮತ್ತೊಂದು ಭರ್ಜರಿ ಕಾರ್ಯಾಚರಣೆಯನ್ನು ರಾಷ್ಟ್ರೀಯ ತನಿಖೆ ದಳ ನಡೆಸಿದೆ.
ದುಕ್ತರನ್ ಈ ಮಿಲತ್ ಸಂಘಟನೆಯ ಮುಖ್ಯಸ್ಥೆಯಾಗಿರುವ ಆಸಿಯಾ ಅಂದ್ರಾಬಿ ಮತ್ತು ಅವಳ ಸಹಚರರಾದ ಸೋಫಿ ಫಾಹ್ಮಿದಾ ಮತ್ತು ನಾಹೀದ್ ನಸ್ರೀನ್ ರನ್ನು ಬಂಧಿಸಿ, ಶ್ರೀನಗರದ ಜೈಲಿಗೆ ಕಳುಹಿಸಲಾಗಿದೆ. ಅವರನ್ನು ದೆಹಲಿಯಲ್ಲಿರುವ ರಾಷ್ಟ್ರೀಯ ತನಿಖಾ ದಳ(ಎನ್ ಐಎ)ದ ವಿಶೇಷ ಕೋರ್ಟ್ ಗೆ ಹಾಜರುಪಡಿಸಬೇಕಾಗಿದ್ದು, 10 ದಿನ ಎನ್ ಐಎ ವಶಕ್ಕೆ ನೀಡಲಾಗಿದೆ.
ಏಪ್ರಿಲ್ 27ರಂದು ಆಸಿಯಾ ಅಂದ್ರಾಬಿ ವಿರುದ್ಧ ದೂರು ದಾಖಲಿಸಲಾಗಿತ್ತು. ಅವಳ ವಿರುದ್ಧ ದೇಶವಿರೋಧಿ ಚಟುವಟಿಕೆಗಳು ನಡೆಸಿರುವುದು, ಗಲಭೆಗೆ ಪ್ರಚೋಧನೆ ನೀಡಿರುವುದು, ರಾಷ್ಟ್ರಪತಿ, ಪ್ರಧಾನಿ ಮಂತ್ರಿಗಳ ವಿರುದ್ಧ ಮಾತನಾಡಿರುವುದು, ಜನರಲ್ಲಿ ಸುಳ್ಳು ಹರಡಿರುವುದು, ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟಿರುವುದು ಸೇರಿ ನಾನಾ ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ.
ಮಾಧ್ಯಮಗಳಲ್ಲಿ ಪ್ರಚೋದನಕಾರಿ ಭಾಷಣ ಮಾಡಿ, ಜನರಲ್ಲಿ ವಿಷ ಬೀಜ ಬಿತ್ತಿದ್ದಾರೆ. ಅದರಿಂದ ಜಮ್ಮು ಕಾಶ್ಮೀರದಲ್ಲಿ ಭಾರಿ ಪ್ರಮಾಣದ ಗಲಭೆ ಸೃಷ್ಟಿಸಿದ್ದಾರೆ. ಅಲ್ಲದೇ ದೇಶದ ವಿರುದ್ಧ ಸಂಚು ರೂಪಿಸುವ ಕುರಿತು ಜನರ ಮನದಲ್ಲಿ ದೇಶವಿರೋಧಿ ವಿಷಯಗಳನ್ನು ಬಿತ್ತಿದ್ದಾರೆ ಎಂದು ಎನ್ ಐಎ ಐಜಿ ಅಲೋಕ್ ಮಿತ್ತಲ್ ತಿಳಿಸಿದ್ದಾರೆ.
Leave A Reply