ಜಾಕೀರ್ ನಾಯಕ್ ನನ್ನು ಹೆಡೆಮುರಿ ಕಟ್ಟಲು ನಿರ್ಧಾರ: ರೆಡ್ ಕಾರ್ನ್ ನೋಟಿಸ್ ಜಾರಿಗೆ ಎನ್ ಐಎ ಯತ್ನ?

ದೆಹಲಿ: ಮತಾಂತರ, ಭಯೋತ್ಪಾದಕರಿಗೆ ಹಣ ಸಾಗಣೆ ಸೇರಿ ನಾನಾ ಆರೋಪಗಳನ್ನು ಹೊತ್ತಿರುವ ಮುಸ್ಲಿಂ ಧರ್ಮ ಪ್ರಚಾರಕ, ಉಗ್ರ ಬೋಧಕ ಜಾಕೀರ್ ನಾಯಕ್ ನನ್ನು ಶತಾಯಗತಾಯ ದೇಶಕ್ಕೆ ಕರೆತರಬೇಕು ಎಂದು ನಿರ್ಧರಿಸಿರುವ ರಾಷ್ಟ್ರೀಯ ತನಿಖಾ ದಳ ನಾನಾ ಪ್ರಯತ್ನಗಳನ್ನು ಮಾಡುತ್ತಿದೆ. ಆ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೂ ಕಾರ್ಯ ನಿರ್ವಹಿಸುತ್ತಿದ್ದು, ವಿಶ್ವಮಟ್ಟದಲ್ಲಿ ಜಾಕೀರ್ ನಾಯಕ್ ಗೆ ಆಶ್ರಯ ನೀಡಿರುವ ರಾಷ್ಟ್ರಗಳ ಮೇಲೆ ಒತ್ತಡ ಹೇರುವ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದೆ. ಆದರೂ ಮಲೇಷಿಯಾ ಪ್ರಧಾನಿ ಮಹಾತೀರ್ ಮಹಮ್ಮದ ಜಾಕೀರ್ ನಾಯಕ್ ನನ್ನು ಹಸ್ತಾಂತರ ಮಾಡುವುದಕ್ಕೆ ನಿರಾಕರಿಸಿದ್ದರು.
ಹಸ್ತಾಂತರಕ್ಕೆ ಮಲೇಷಿಯಾ ನಿರಾಕರಿಸಿರುವುದರಿಂದ ಕಂಗೆಡದ ಭಾರತದ ತನಿಖಾ ಅಧಿಕಾರಿಗಳ ಜಾಕೀರ್ ನಾಯಕ್ ನನ್ನ ಹೇಗಾದರೂ ಮಾಡಿ ಹೆಡೆಮುರಿ ಕಟ್ಟಬೇಕು ಎಂದು ದೃಢ ನಿರ್ಧಾರ ಕೈಗೊಂಡಿದೆ. ಆ ನಿಟ್ಟಿನಲ್ಲಿ ಜಾಕೀರ್ ನಾಯಕ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ರಾಷ್ಟ್ರೀಯ ತನಿಖಾ ದಳ(ಎನ್ ಐಎ)ದವರು ಪ್ರಯತ್ನಿಸುತ್ತಿದ್ದಾರೆ ಎಂದು ರಾಷ್ಟ್ರೀಯ ವಾಹಿನಿಯೊಂದಕ್ಕೆ ಉನ್ನತ ಮೂಲಗಳು ಮಾಹಿತಿ ನೀಡಿವೆ ಎನ್ನಲಾಗಿದೆ.
ಜಾಕೀರ್ ನಾಯಕ್ ನನ್ನು ದೇಶಕ್ಕೆ ಕರೆದುಕೊಂಡು ಬರುವ ನಿಟ್ಟಿನಲ್ಲಿ ಇಂಟರ್ ಪೋಲ್ ಅಧಿಕಾರಿಗಳಿಗೆ ಭಾರತದ ರಾಷ್ಟ್ರೀಯ ತನಿಖಾ ದಳದಿಂದ ಸೂಕ್ತ ದಾಖಲೆಗಳನ್ನು ನೀಡಲಾಗಿದೆ. ಆತನ ವಿರುದ್ಧ ದಾಖಲಾಗಿರುವ ಪ್ರಕರಣಗಳು ಕುರಿತು ಇಂಟರ್ ಪೋಲ್ ಗೆ ಸೂಕ್ತ ದಾಖಲೆ ಸಮೇತ ಮಾಹಿತಿ ನೀಡಲಾಗಿದೆ ಎಂದು ಎನ್ ಐಎ ಉನ್ನತ ಮೂಲಗಳು ತಿಳಿಸಿವೆ.
ತನ್ನ ಪ್ರಚೋದನಾತ್ಮಕ ಬೋಧನೆಯಿಂದ ಭಯೋತ್ಪಾದನೆಯ ವಿಷ ಬೀಜ ಬಿತ್ತುತ್ತಿದ್ದ ಮತ್ತು ಭಯೋತ್ಪಾದಕರಿಗೆ ಹಣ ವರ್ಗಾವಣೆ ಮಾಡುತ್ತಿರುವ ಆರೋಪ ಹೊತ್ತಿರುವ ಜಾಕೀರ್ ನಾಯಕ್ 2016ರದಲ್ಲಿ ಭಾರತವನ್ನು ಬಿಟ್ಟು ಓಡಿ ಹೋಗಿದ್ದ.
Leave A Reply