ಹಿರಿಯ ಅಧಿಕಾರಿ ಕಿರುಕುಳಕ್ಕೆ ಬೇಸತ್ತು ರಾಜಿನಾಮೆ ಬರೆದಿಟ್ಟು ಹೊರಟ ಎಸ್‌ಐ
Posted On July 7, 2018
0

ಉಡುಪಿ : ಹಿರಿಯ ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಸರ್ಕಾರ ನೀಡಿದ್ದ ಮೊಬೈಲ್ ಅನ್ನು ಮೇಜಿನ ಮೇಲಿಟ್ಟು, ರಾಜಿನಾಮೆ ಬರೆದಿಟ್ಟು ಹೆಬ್ರಿಯ ಪಿಎಸ್‌ಐ ಮನೆಗೆ ತೆರಳಿದ್ದಾರೆ. ಸಂತೇಕಟ್ಟಹಳ್ಳಿಯ ಸಿವಿಲ್ ವ್ಯಾಜ್ಯವೊಂದರ ಸಂಬಂಧ ಹಿರಿಯ ಅಧಿಕಾರಿಗಳಯ ಹೆಬ್ರಿಯ ಎಸ್‌ಐ ಮಹಾಬಲೇಶ್ವರ ಶೆಟ್ಟಿ ಅವರಿಗೆ ಕಿರುಕುಳ ನೀಡಿದ್ದರು ಎನ್ನಲಾಗಿದ್ದು, ಆ ಕಾರಣದಿಂದಲೇ ಅವರು ಹೀಗೆ ಮಾಡಿದ್ದಾರೆ.
ಹಿರಿಯ ಅಧಿಕಾರಿಗಳ ವರ್ತನೆಯಿಂದ ಬೇಸತ್ತು ಅಧಿಕಾರದಿಂದ ವಿಮುಖರಾಗಿರುವ ಮಹಾಬಲೇಶ್ವರ ಅವರ ಮನವೊಲಿಸಿಕೊಳ್ಳಲು ಹಿರಿಯ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ನೀಡಲು ಜಿಲ್ಲಾ ಎಸ್‌ಪಿ ಲಕ್ಷ್ಮಣ ನಿಂಬರ್ಗಿ ನಕಾರ ವ್ಯಕ್ತಪಡಿಸಿದ್ದಾರೆ.
ರಾಜಿನಾಮೆ ಬರೆದಿಟ್ಟು ತಮ್ಮ ಸ್ವಂತ ಊರಾದ ಸಿದ್ಧಾಪುರಕ್ಕೆ ಮಹಾಬಲೇಶ್ವರ ಅವರು ತೆರಳಿದ್ದಾರೆ ಎನ್ನಲಾಗಿದ್ದು. ಎಸ್‌ಪಿ ಅವರು ಮಹಾಬಲೇಶ್ವರ ಅವರ ವೃತ್ತಿ ಮಿತ್ರರನ್ನು ಅವರ ಊರಿಗೆ ಕಳುಹಿಸಿ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.
