ಹಣೆಗೆ ತಿಲಕ ಇಟ್ಟುಕೊಂಡಿದ್ದೇ ಈ ಮುಸ್ಲಿಂ ಬಾಲಕಿಯ ತಪ್ಪಾಯಿತೇ?
ತಿರುವನಂತಪುರ: ದೇಶದಲ್ಲಿ ಮದರಸಾಗಳು ಎಂದರೆ ಧಾರ್ಮಿಕ ಶಿಕ್ಷಣ ಸಂಸ್ಥೆ, ಧರ್ಮ ಬೋಧನೆಗಾಗಿ ನಿರ್ಮಿಸಿರುವ ಸಂಸ್ಥೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದು ಸಂವಿಧಾನ ಬದ್ಧವಾಗಿದ್ದರೆ ಕಾನೂನೇ ನೋಂದಣಿ ಮಾಡಿಸಿಕೊಳ್ಳುತ್ತದೆ ಎಂಬುದು ಜಾತ್ಯತೀತ ದೇಶದ ಹೆಗ್ಗಳಿಕೆಯೇ ಸರಿ. ಆದರೆ ಇಂಥ ಮದರಸಾದ ಮೂಲಕ ಇತ್ತೀಚೆಗೆ ಉಗ್ರ ಸಂಘಟನೆಗಳಿಗೆ ವ್ಯಕ್ತಿಗಳನ್ನು ಕಳುಹಿಸಲಾಗುತ್ತಿದೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡಿತ್ತು.
ಏನೋ ಕೆಲವು ಮದರಸಾಗಳು ಸಗಣಿ ತಿನ್ನುವ ಕೆಲಸ ಮಾಡಿದವು ಎಂದು ಸುಮ್ಮನಾಗಿಬಿಡಬಹುದು. ಉಳಿದ ಮದರಸಾಗಳು ಚೆನ್ನಾಗಿವೆ ಎಂದು ಸಮಾಧಾನಪಡಬಹುದು. ಆದರೆ ಈ ಕೆಲವು ಮದರಸಾಗಳು ನಮ್ಮನ್ನು ಸುಮ್ಮನಿರಲು ಬಿಡಲ್ಲ. ಉಪಟಳ, ಉದ್ಧಟತನದ ಮೂಲಕ ಎಲ್ಲರ ಹೊಟ್ಟೆ ಉರಿಸುತ್ತವೆ.
ಇದಕ್ಕೆ ನಿದರ್ಶನವಾಗುವಂತಹ ಘಟನೆಯೊಂದು ಕೇರಳದಲ್ಲಿ ನಡೆದಿದ್ದು, ಐದು ವರ್ಷದ ಪುಟ್ಟ ಬಾಲಕಿಯೊಬ್ಬಳು ಹಣೆಗೆ ಗಂಧದ ಬೊಟ್ಟು ಇಟ್ಟುಕೊಂಡಳು ಎಂದು ಮದರಸಾದಿಂದಲೇ ವಜಾಗೊಳಿಸುವ ಮೂಲಕ ಧಾರ್ಮಿಕ ಅಸಹಿಷ್ಣುತೆ ಮೆರೆಯಲಾಗಿದೆ.
ಹೌದು, ಕೇರಳದ ಮದರಸಾವೊಂದರಲ್ಲಿ ಐದನೇ ತರಗತಿ ಓದುತ್ತಿದ್ದ ಹೆನ್ನಾ ಮಲಾಯಿಲ್ ಎಂಬ ಮುಸ್ಲಿಂ ಬಾಲಕಿ ಇತ್ತೀಚೆಗೆ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಣೆಗೆ ಗಂಧದ ಬೊಟ್ಟು ಇಟ್ಟುಕೊಂಡು ನಟನೆ ಮಾಡಿದ್ದಳು. ಆದರೆ ಇದಕ್ಕೆ ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿದ್ದು, ಇಸ್ಲಾಂ ಧರ್ಮವನ್ನು ಬೇರೆ ರೀತಿಯಲ್ಲಿ ತೋರಿಸಲಾಗಿದೆ ಎಂದು ಬಾಲಕಿಯನ್ನು ಶಾಲೆಯಿಂದ ಹೊರಹಾಕಲಾಗಿದೆ.
ಬಾಲಕಿಯ ತಂದೆ-ತಾಯಿ ಬಡವರಾಗಿದ್ದು, ಈಗ ಬಾಲಕಿಯ ಭವಿಷ್ಯ ಏನು ಎಂಬ ಕುರಿತು ಚಿಂತೆ ಮಾಡುವ ಹಾಗಾಗಿದೆ. ಹೇಳಿ ಐದು ವರ್ಷದ ಪುಟ್ಟ ಕಂದಮ್ಮಳಿಗೆ ಧರ್ಮದ ಯಾವ ನಿಯಮ ಅರ್ಥವಾಗುತ್ತದೆ? ಧಾರ್ಮಿಕ ವಿಧಿವಿಧಾನ ಹೇಗೆ ಅರ್ಥವಾಗುತ್ತವೇ? ಅಷ್ಟಕ್ಕೂ ಹಣೆಗೆ ಬೊಟ್ಟುಇಟ್ಟುಕೊಂಡರೆ ಯಾವ ಅಪರಾಧ? ಬಾಲಕಿಯ ಮುಗ್ಧತೆಯನ್ನೇ ಅರಿಯದಷ್ಟು ಕುರುಡಾದರೆ ಈ ಧರ್ಮಪಾಲಕರು?
Leave A Reply