ನಳಿನ್, ಜಗದೀಶ್ ಕಾರಂತ್ ಸುಳ್ಯ ಪ್ರಖರ ಭಾಷಣ ಪ್ರಕರಣದಲ್ಲಿ ಖುಲಾಸೆ
ದಕ್ಷಿಣ ಕನ್ನಡ ಲೋಕಸಭಾ ಸಂಸದ ನಳಿನ್ ಕುಮಾರ್ ಕಟೀಲು, ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಂಚಾಲಕ ಜಗದೀಶ್ ಕಾರಂತ ಸೇರಿದಂತೆ ಹನ್ನೆರಡು ಮಂದಿ ಮೇಲೆ ಕೋಮು ಸೌಹಾರ್ಧತೆಗೆ ದಕ್ಕೆ ತರುವಂತಹ ಪ್ರಚೋದನಾಕಾರಿ ಭಾಷಣ ಮಾಡಿ ಸಮಾಜದಲ್ಲಿ ಶಾಂತಿ ಕದಡುವಂತಹ ಕೃತ್ಯ ಮಾಡಿದ್ದಾರೆ ಎಂದು ಎಸ್ ಡಿಪಿಐ ಕಾರ್ಯಕರ್ತ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಕೆ ಎಸ್ ಉಮರ್, ಸುಳ್ಯ ಇವರು ದಿನಾಂಕ 04/03/2009 ರಲ್ಲಿ ಖಾಸಗಿ ಪಿರ್ಯಾದು ಸಲ್ಲಿಸಿ ಪ್ರಕರಣವನ್ನು ಪೊಲೀಸರ ಮುಖಾಂತರ ತನಿಖೆ ನಡೆಸಿ ಸರಕಾರದ ವಿಶೇಷ ಅನುಮತಿ ಪಡೆದು ಆರೋಪ ಪಟ್ಟಿಯನ್ನು ಸುಳ್ಯದ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ದಿನಾಂಕ 12/2/2009 ರಲ್ಲಿ ಸಂಜೆ ಹಿಂದೂ ಹಿತ ರಕ್ಷಣಾ ವೇದಿಕೆ, ಸುಳ್ಯ ತಾಲೂಕು ಇವರ ನೇತೃತ್ವದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದ ಕುರಿತಾಗಿ ಆರೋಪಿಸಲಾದ ಪ್ರಕರಣ ಇದಾಗಿತ್ತು. ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಪ್ರಕಾರ ಕರ್ನಾಟಕ ಉಚ್ಛ ನ್ಯಾಯಾಲಯ ಸ್ಥಾಪಿಸಿದ ಶಾಸಕರು ಹಾಗೂ ಸಂಸದರ ಮೇಲೆ ದಾಖಲಾದ ಕ್ರಿಮಿನಲ್ ಮೊಕದ್ದಮೆಗಳ ವಿಚಾರಣಾ ವಿಶೇಷ ನ್ಯಾಯಾಲಯ ಈ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡು ಎಲ್ಲಾ ಆರೋಪಿಗಳನ್ನು ದೋಷ ಮುಕ್ತಗೊಳಿಸಿ ಆದೇಶ ಹೊರಡಿಸಿದೆ.
ಈ ಪ್ರಕರಣದಲ್ಲಿ ಯಾವುದೇ ಸಕಾರಣವಿಲ್ಲದೆ ದೂರು ದಾಖಲಿಸಲು ವಿಳಂಬವಾಗಿದ್ದು ಸಾಕ್ಷಿದಾರರೆಲ್ಲರೂ ರಾಜಕೀಯ ದುರುದ್ದೇಶ ಯಾ ದ್ವೇಷದಿಂದ ಆರೋಪಿಗಳ ವಿರುದ್ಧ ಸಾಕ್ಷಿ ನುಡಿದಿರುವುದು ಸ್ಪಷ್ಟವಾಗಿದ್ದು, ಸರಕಾರದ ಅಭಿಯೋಜನೆಗೆ ಪೂರ್ವಾನುಮತಿ ನೀಡುವ ಸಂದರ್ಭದಲ್ಲಿ ಕಾನೂನಿನ ಉಲ್ಲಂಘನೆಯಾಗಿದ್ದು, ಆರೋಪಿಗಳು ದುರುದ್ದೇಶದಿಂದ ಪ್ರಚೋದನಕಾರಿ ಭಾಷಣ ಮಾಡಿದ್ದರು ಎಂಬ ಆರೋಪಗಳನ್ನು ಸಾಬೀತುಪಡಿಸಲು ಸರಕಾರ ವಿಫಲವಾಗಿದ್ದು, ಆರೋಪಿಗಳನ್ನು ಶಿಕ್ಷೆಗೊಳಪಡಿಸಲು ಯಾವುದೇ ಸಕಾರಣ ಮತ್ತು ಸಾಕ್ಷ್ಯಾಧಾರಗಳು ಇಲ್ಲವೆಂದು ಆರೋಪಿಗಳ ಪರ ವಕೀಲರಾದ ಅರುಣ್ ಶ್ಯಾಂ ಎಂ ರವರು ಮಂಡಿಸಿದ ವಾದವನ್ನು ಆಲಿಸಿದ ವಿಶೇಷ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
Leave A Reply