ಮೋದಿ ಅವರನ್ನು ತೆಗಳುವ ಭರದಲ್ಲಿ 5 ತಿಂಗಳು ಹಳೆ ವೀಡಿಯೋ ಟ್ವೀಟ್ ಮಾಡಿ ರಮ್ಯಾ ಎಡವಟ್ಟು!
ಕೆಲವೊಮ್ಮೆ ಅಂತೂ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಹೊಣೆ ಹೊತ್ತಿರುವ ನಟಿ, ಮಾಜಿ ಸಂಸದೆ ರಮ್ಯಾ ಇಬ್ಬರೂ ರಕ್ತ ಸಂಬಂಧಿಗಳೇನೋ ಅನಿಸುತ್ತದೆ. ಏಕೆಂದರೆ, ಇಬ್ಬರೂ ನೀಡುವ ಹೇಳಿಕೆಗಳು, ಸಾಮಾಜಿಕ ಜಾಲತಾಣದಲ್ಲಿ ಮಾಡುವ ಪೋಸ್ಟ್ ಗಳು, ಟ್ವೀಟ್ ಗಳು, ಮಾಡುವ ಎಡವಟ್ಟುಗಳು ಅಂಥ ಅನುಮಾನ ಮೂಡಿಸುತ್ತವೆ.
ಇದಕ್ಕೆ ಸಾಕ್ಷಿಯಾಗಿ, ರಮ್ಯಾ ಟ್ವಿಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಐದು ತಿಂಗಳು ಹಳೆಯ ವೀಡಿಯೋ ಟ್ವೀಟ್ ಮಾಡುವ ಮೂಲಕ ಎಡವಟ್ಟು ಮಾಡಿದ್ದಾರೆ.
ಹೌದು, ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಜೈಪುರದಲ್ಲಿ ಆಯೋಜಿಸಿದ್ದ ರ್ಯಾಲಿಯೊಂದರಲ್ಲಿ ಪಾಲ್ಗೊಂಡಿದ್ದರು. ಆದರೆ ಅಲ್ಲಿ ಸೇರಿದ ಲಕ್ಷಾಂತರ ಜನರನ್ನು ನೋಡಿ ಹೊಟ್ಟೆ ಉರಕೊಂಡ ಕಾಂಗ್ರೆಸ್ ಹಳೆಯ ವೀಡಿಯೋ ಒಂದು ಟ್ವೀಟ್ ಮಾಡಿದ್ದಲ್ಲದೆ, ನರೇಂದ್ರ ಮೋದಿ ಅವರು ಫೇಸ್ ಬುಕ್ ಮೇಲೆ ಮಾತ್ರ ಹಿಡಿತ ಸಾಧಿಸುತ್ತಿದ್ದರೆ, ಅವರ ಬೆಂಬಲಿಗರು ಜಗಳವಾಡುತ್ತಿದ್ದಾರೆ ಎಂದು ಟೀಕಿಸಿದ್ದರು.
ಆದರೆ ಇದು ಐದು ತಿಂಗಳು ಹಳೆಯ ವೀಡಿಯೋ ಎಂದು ಅಮಿತ್ ಮಾಳವೀಯ ಅವರು ಟ್ವಿಟರ್ ನಲ್ಲೇ ಕಾಂಗ್ರೆಸ್ಸಿಗೆ ಮುಖಭಂಗ ಮಾಡಿದರೋ, ಆಗ ಎಚ್ಚೆತ್ತುಕೊಂಡ ರಮ್ಯಾ, ಇದು ಐದು ತಿಂಗಳ ಹಳೆಯ ವೀಡಿಯೋ. ತಪ್ಪಾಗಿ ತಿಳಿದು ಪೋಸ್ಟ್ ಮಾಡಿದ್ದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದು ಟ್ವೀಟ್ ಮಾಡುವ ಮೂಲಕ ತಪ್ಪೊಪ್ಪಿಕೊಂಡಿದ್ದಾರೆ. ಮೋದಿ ಅವರನ್ನು ತೆಗಳಲು ಎಂಥ ಸುಳ್ಳು ಬೇಕಾದರೂ ಕಾಂಗ್ರೆಸ್ಸಿಗರು ಹೇಳುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ.
Leave A Reply