ಮಂಗಳೂರು ವಿವಿಯಲ್ಲಿ ಗೌರವ ಡಾಕ್ಟರೇಟ್ ನ ಗೌರವ ತೆಗೆದ ಭೈರಪ್ಪ!
ಮಂಗಳೂರು ವಿಶ್ವವಿದ್ಯಾನಿಲಯವು ಬೇರೆ ವಿಶ್ವವಿದ್ಯಾನಿಲಯಗಳಂತೆ ಪ್ರತಿ ವರ್ಷ ಘಟಿಕೋತ್ಸವವನ್ನು ನಡೆಸುತ್ತದೆ. ಹಿಂದಿನಿಂದಲೂ ಘಟಿಕೋತ್ಸವದಲ್ಲಿ ಸಮಾಜದಲ್ಲಿ ಸೇವೆ ಸಲ್ಲಿಸಿ ಸಮಾಜದ ಅಭಿವೃದ್ಧಿಗೆ ನಿಸ್ವಾರ್ಥವಾಗಿ ಕೆಲಸ ಮಾಡಿದ ಕೆಲವರಿಗೆ ಡಾಕ್ಟರೇಟ್ ಕೊಡುವ ಸಂಪ್ರದಾಯ ಇತ್ತು. ಹಿಂದೆಲ್ಲಾ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ ವಿರೇಂದ್ರ ಹೆಗ್ಗಡೆ, ನಾಡಿನ ಶ್ರೇಷ್ಟ ಸಾಹಿತಿ ಅಮೃತ ಸೋಮೇಶ್ವರ ಸಹಿತ ನಮ್ಮ ರಾಜ್ಯ, ರಾಷ್ಟ್ರದಲ್ಲಿ ಶ್ರೇಷ್ಠ ಸಾಧನೆ ಮಾಡಿ ಬೇರೆಯವರಿಗೆ ಆದರ್ಶರಾಗಿದ್ದ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್ ಮಂಗಳೂರು ವಿವಿಯಲ್ಲಿ ಕೊಡಲಾಗುತ್ತಿತ್ತು. ಆದರೆ ಭೈರಪ್ಪನವರು ಮಂಗಳೂರು ವಿವಿಯ ಕುಲಪತಿಯಾದ ನಂತರ ವ್ಯಾಪಾರಿಗಳಿಗೆ, ಬಿಲ್ಡರ್ ಗಳಿಗೆ ಗೌರವ ಡಾಕ್ಟರೇಟ್ ಕೊಡುವ ಪರಿಪಾಠವನ್ನು ಇವರು ಆರಂಭಿಸಿದರು. ಶ್ರೀಮಂತ ಉದ್ಯಮಿಗಳಾದ ಎಜೆ ಶೆಟ್ಟಿಯವರಿಗೆ, ಶಶಿಕಿರಣ್ ಶೆಟ್ಟಿ ಹಾಗೂ ಅನೇಕ ಉದ್ಯಮಿಗಳಿಗೆ ಭೈರಪ್ಪನವರು ಗೌರವ ಡಾಕ್ಟರೇಟ್ ಕೊಟ್ಟು ಅವರ ಕೃಪಾಕಟಾಕ್ಷಕ್ಕೆ ಪಾತ್ರರಾದರು. ಒಂದು ವೇಳೆ ಮಂಗಳೂರು ವಿವಿಯ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆದರೆ ಆಗ ಭೈರಪ್ಪನವರು ಯಾರಿಗೆಲ್ಲ ಗೌರವ ಡಾಕ್ಟರೇಟ್ ಕೊಟ್ಟಿದ್ದಾರೆ ಮತ್ತು ಅವರಿಂದ ಏನು ಹಿಂಬಾಗಿಲಿನಿಂದ ಪಡೆದುಕೊಂಡಿದ್ದಾರೆ ಎನ್ನುವ ತನಿಖೆ ಆಗಬೇಕು. ಮಂಗಳೂರಿನ ಕದ್ರಿ ಕೆಪಿಟಿ ಬಳಿಯ ಎಸ್ ಕೆಎಸ್ ವಸತಿ ಸಮುಚ್ಚಯದಲ್ಲಿ ಇರುವ ಒಂದು ಫ್ಲಾಟಿಗೂ ಭೈರಪ್ಪನವರಿಗೂ ಇರುವ ಸಂಬಂಧವನ್ನು ತನಿಖೆ ಮಾಡಬೇಕು. ಅವರಿಗೆ ಆ ಫ್ಲಾಟ್ ಯಾರು ಕೊಟ್ಟರು? ಯಾವುದರ ಬದಲಿಗೆ ಕೊಟ್ಟರು? ಕೊಟ್ಟವರಿಗೂ ಭೈರಪ್ಪನವರಿಗೂ ಏನು ಸಂಬಂಧ? ಫ್ಲಾಟ್ ಬದಲಿಗೆ ಭೈರಪ್ಪನವರು ಆ ವ್ಯಕ್ತಿಗೆ ಏನು ಕೊಟ್ಟರು? ಹೀಗೆ ತನಿಖೆ ಆದರೆ ಗೌರವ ಡಾಕ್ಟರೇಟ್ ಮೇಲಿರುವ ಗೌರವದ “ಮೌಲ್ಯ” ನಿಮಗೆ ಅರ್ಥವಾಗುತ್ತದೆ.
ಭೈರಪ್ಪನವರು ತಮ್ಮ ಅಧಿಕಾರಾವಧಿಯ ನಂತರ ಮುಂದೆ ತಮ್ಮ ಪತ್ನಿಯನ್ನು ಮಂಗಳೂರು ವಿವಿಯ ಕುಲಪತಿಯನ್ನಾಗಿ ಮಾಡಲು ವ್ಯವಸ್ಥಿತವಾಗಿರುವ ಪ್ಲಾನ್ ರೂಪಿಸಿದ್ದಾರೆ. ಅದಕ್ಕಾಗಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲೀಷ್ ಪ್ರೊಫೆಸರ್ ಆಗಿರುವ ತಮ್ಮ ಪತ್ನಿಯನ್ನು ಮಂಗಳೂರು ವಿವಿಗೆ ವರ್ಗಾವಣೆ ಮಾಡಿಕೊಳ್ಳಲು ತಯಾರಿ ನಡೆಸಿದ್ದಾರೆ.
ಯಾವುದೇ ವಿಶ್ವವಿದ್ಯಾನಿಲಯದ ಕುಲಪತಿಗಳ ನೇಮಕ ಆಗುವುದಕ್ಕೆ ಒಂದು ಪ್ರಕ್ರಿಯೆ ಇರುತ್ತದೆ. ಅದೇನೆಂದರೆ ಒಂದು ಶೋಧನಾ ಸಮಿತಿ ರಚನೆಯಾಗುತ್ತದೆ. ಅದರಲ್ಲಿ ನಾಲ್ಕು ಜನ ಸದಸ್ಯರಿರುತ್ತಾರೆ. ಒಬ್ಬರು ರಾಜ್ಯ ಸರಕಾರದಿಂದ ನೇಮಕವಾಗಿರುತ್ತಾರೆ. ಇನ್ನೊಬ್ಬರು ಯುಜಿಸಿ ಕಡೆಯಿಂದ, ಮತ್ತೊಬ್ಬರು ರಾಜ್ಯಪಾಲರ ಕಡೆಯಿಂದ ಹಾಗೂ ನಾಲ್ಕನೇಯವರು ವಿಶ್ವವಿದ್ಯಾನಿಲಯದ ಕಡೆಯಿಂದ ನೇಮಕವಾಗಿರುತ್ತಾರೆ. ಇವರು ಅಳೆದು ತೂಗಿ ಅಂತಿಮವಾಗಿ ಮೂರು ಜನರ ಹೆಸರುಗಳನ್ನು ರಾಜ್ಯಪಾಲರಿಗೆ ಶಿಫಾರಸ್ಸು ಮಾಡುತ್ತಾರೆ. ಕೊನೆಗೆ ರಾಜ್ಯಪಾಲರು ಒಂದು ಹೆಸರನ್ನು ಅಂತಿಮಗೊಳಿಸಿ ಆದೇಶ ಹೊರಡಿಸುತ್ತಾರೆ. ಭೈರಪ್ಪನವರು ಏನು ಮಾಡಿದ್ದಾರೆ ಎಂದರೆ ಆ ಕಮಿಟಿಯಲ್ಲಿ ಹೆಚ್ಚೆಚ್ಚು ತಮ್ಮದೇ ಆಪ್ತ ಸದಸ್ಯರು ಇದ್ದರೆ ತಮಗೆ ಬೇಕಾದವರನ್ನು ಕುಲಪತಿಯನ್ನಾಗಿ ಆಯ್ಕೆ ಮಾಡಲು ಸುಲಭವಾಗುತ್ತದೆ ಎಂದು ನಿರ್ಧರಿಸಿ ತಮ್ಮ ಊರು ಮೈಸೂರಿನವರಾದ ನಾಗಭೂಷಣ ಮತ್ತು ರಾಮೇಗೌಡರನ್ನು ಆ ಸಮಿತಿಯಲ್ಲಿ ಸದಸ್ಯರನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ತಮ್ಮ ಪತ್ನಿ ಕುಲಪತಿಯಾಗುವ ಅವಕಾಶ ಉಜ್ಜಲವಾಗುವಲ್ಲಿ ತಮ್ಮದೇ ಪ್ರಯತ್ನವನ್ನು ಮಾಡಿದ್ದಾರೆ!
Leave A Reply