ಭೈರಪ್ಪನವರ ವಿಲಾಸಿ ವಿದೇಶಿ ಪ್ರಯಾಣ ಮತ್ತು ಆಪ್ತೆಯರೊಂದಿಗೆ ಪಯಣ!!
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಮೊನ್ನೆ ನಿವೃತ್ತಿಯಾದ ಭೈರಪ್ಪನವರ ವಿದೇಶ ಪ್ರವಾಸವೇ ಒಂದು ಭ್ರಷ್ಟಾಚಾರದ ಕೂಪ. ಭೈರಪ್ಪನವರಿಗೆ ವಿದೇಶ ಪ್ರಯಾಣ ಎಂದರೆ ಅದೊಂದು ಶೋಕಿಯ ಪರ್ವ ಸಮಯ. ಇವರಿಗೆ ವಿದೇಶಕ್ಕೆ ಹೋಗಿ ಮಜಾ ಉಡಾಯಿಸುವುದೆಂದರೆ ಅದೊಂದು ಅಚ್ಚುಮೆಚ್ಚಿನ ಕೆಲಸ. ಹೀಗೆ ಹೇಳಿದ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಐದು ವರ್ಷಗಳಲ್ಲಿ ಅದೆಷ್ಟೋ ವಿದೇಶಗಳಿಗೆ ಹೋಗಿಲ್ಲವೇ ಎಂದು ಕೆಲವರು ಕೇಳಬಹುದು. ಆದರೆ ಮೋದಿಯವರಿಗೂ ಭೈರಪ್ಪನವರಿಗೂ ಹೋಲಿಕೆ ಯಾವತ್ತೂ ಮಾಡಬಾರದು. ಮೋದಿಯವರು ನಮ್ಮ ದೇಶಕ್ಕಾಗಿ ವಿದೇಶ ಪ್ರಯಾಣ ಮಾಡುತ್ತಿದ್ದಾರೆ. ಅದರಿಂದ ನಮ್ಮ ರಾಷ್ಟ್ರಕ್ಕೆ ತುಂಬಾ ಲಾಭವಾಗಿದೆ. ಆದರೆ ಭೈರಪ್ಪನವರು ಮಾಡಿದ ಅಷ್ಟೂ ವಿದೇಶಿ ಪ್ರಯಾಣದಿಂದ ಮಂಗಳೂರು ವಿವಿಗೆ ಆಗಿರುವ ಲಾಭಗಳ ಒಂದು ಪಟ್ಟಿ ಮಾಡಬೇಕು. ಆಗುತ್ತಾ? ಇಲ್ಲ.
ಅವರ ಖುಷಿಗೆ ಸರಕಾರದ ಹಣ ಪೋಲು…
ಭೈರಪ್ಪನವರು ವಿದೇಶಿ ಯಾತ್ರೆ ತಮ್ಮ ಸ್ವಖುಷಿಗೆ. ಅವರು ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಲ್ಲಿ ಇರುವುದಕ್ಕಿಂತ ಹೆಚ್ಚಾಗಿ ವಿದೇಶಗಳಲ್ಲಿಯೇ ಇದ್ದದ್ದು ಜಾಸ್ತಿ. ಅವರ ವಿಲಾಸಿ ಜೀವನದ ಬಗ್ಗೆ ಇನ್ನು ಬೇರೆ ಬೇರೆ ಕಥೆಗಳಿವೆ. ಇವರಿಗೆ ಬೇಕಾದವರಿಗೆ, ಕೆಲವು ಮಹಿಳಾ ಸಿಬ್ಬಂದಿಗಳಿಗೆ ಭೈರಪ್ಪನವರಿಂದ ವಿಶೇಷವಾದ “ಕಾಳಜಿ” ಸಿಗುತ್ತದೆ. ಚಿಕ್ಕ ಆಳಾವರದಲ್ಲಿನ ಉಪನ್ಯಾಸಕಿಯೊಬ್ಬರಿಗೆ ಇವರು ತುಂಬಾ “ಪ್ರೋತ್ಸಾಹ” ಮಾಡಿದ್ದಾರೆ. ಮಂಗಳೂರು ವಿವಿಯಯಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರ ಇದೆ. ಅಲ್ಲಿ ಸಹಾಯಕ ಹುದ್ದೆಗೆ ಇರುವ ಸಂಬಳ ಹದಿನಾಲ್ಕು ಸಾವಿರ. ಆದರೆ ಭೈರಪ್ಪನವರೊಂದಿಗೆ ಯಾರಾದರೂ “ಚೆನ್ನಾಗಿ” ಇದ್ದರೆ ಅವರಿಗೋಸ್ಕರ ಯಾವ ಹುದ್ದೆ ಬೇಕಾದರೂ ಇವರು ಸೃಷ್ಟಿಸಬಲ್ಲರು. ಎಷ್ಟು ಸಂಬಳ ಬೇಕಾದರೂ ಇವರು ನಿಗದಿಪಡಿಸಬಲ್ಲರು. ಎಷ್ಟರ ಮಟ್ಟಿಗೆ “ಚೆನ್ನಾಗಿ ಅಡ್ಜೆಸ್ಟ್” ಆಗುತ್ತಾರೆ ಎನ್ನುವುದು ಮಾತ್ರ ಪ್ರಶ್ನೆ. ಮಂಗಳೂರು ವಿವಿಯ ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ ಎಲ್ಲೂ ಇಲ್ಲದ ಸಂಶೋಧನಾ ಅಧಿಕಾರಿ ಎನ್ನುವ ಹುದ್ದೆಯನ್ನು ಇವರು ಸೃಷ್ಟಿಸಿದ್ದಾರೆ. ಇವರಿಗೆ ಬೇಕಾದ ಹೆಂಗಸಿಗೆ ಅಲ್ಲಿ ಪೋಸ್ಟ್ ಕೊಡಿಸಿದ್ದಾರೆ. ಇನ್ನು ತಿಂಗಳಿಗೆ ಕೊಡುತ್ತಿರುವ ಸಂಬಳ ನಲ್ವತ್ತು ಸಾವಿರ. ಅದೇ ಮಹಿಳಾಮಣಿಗೆ ಕನ್ನಡ ವಿಭಾಗದಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಕೊಡಿಸಿದ್ದಾರೆ. ಅಲ್ಲಿ ಪ್ರತ್ಯೇಕ ಸಂಬಳ ಕೊಡಿಸುತ್ತಿದ್ದಾರೆ. ಇಂತಹ ಕೆಲವು ಉದಾಹರಣೆಗಳು ಮಂಗಳೂರು ವಿವಿಯ ಅಂಗಣದಲ್ಲಿ ಕಾಣಸಿಗುತ್ತವೆ.
ಇನ್ನು ಭೈರಪ್ಪನವರ ರಸಿಕತೆಯ ಬಗ್ಗೆ ಅನೇಕ ಕಥೆಗಳು ಇಲ್ಲಿ ಓಡಾಡುತ್ತಿರುತ್ತವೆ. ನಮ್ಮ ಕರ್ನಾಟಕದ ಮಾಜಿ ಸಚಿವರೊಬ್ಬರ ಕಸಿನ್ ಸಿಸ್ಟರ್ ಒಬ್ಬರು ಭೈರಪ್ಪನವರ ಸರಕಾರಿ ಬಂಗಲೆಯಲ್ಲಿ ಹದಿನೈದು ದಿನ ಉಳಿದುಕೊಂಡಿದ್ದಳು. ಅವಳನ್ನು ಕರೆದುಕೊಂಡು ಭೈರಪ್ಪನವರು ಸಿಂಗಾಪುರದ ವಿದೇಶ ಪ್ರಯಾಣ ಕೂಡ ಮಾಡಿದ್ದಾರೆ!
Leave A Reply